ಮುಂಬೈ: ದೇಶದ ಡಿಜಿಟಲ್ ಸೇವೆಯಲ್ಲಿ ಇಂದು ಹೊಸ ಕ್ರಾಂತಿಯೊಂದು ಸೃಷ್ಟಿಯಾಗಿದೆ. ಬಹುನಿರೀಕ್ಷಿತ ರಿಲಾಯನ್ಸ್ ಜಿಯೋ 4G ಇಂದು ಬಿಡುಗಡೆಗೊಂಡಿದ್ದು, ಮುಂಬೈನಲ್ಲಿ ಮುಖೇಶ್ ಅಂಬಾನಿ ನೇತೃತ್ವದಲ್ಲಿ ಸಮಾರಂಭ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾರಂಭದಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಡಿಜಿಟಲ್ ಸೇವೆಯಲ್ಲಿ ಇದೊಂದು ಹೊಸ ಕ್ರಾಂತಿಯಾಗಿದೆ. ಪ್ರತಿಯೊಬ್ಬರಿಗೂ ಈ ಮೊಬೈಲ್ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

ಜಿಯೋ 4G ವಿಶೇಷಗಳು: 18 ಸಾವಿರ ನಗರಗಳಲ್ಲಿ ಜಿಯೋ 4G ಸಂಪರ್ಕ ದೊರೆಯಲಿದ್ದು, ಕೇವಲ 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್​ಫೋನ್ ಲಭ್ಯವಾಗುತ್ತಿದೆ. 90 ದಿನಗಳು ಫ್ರಿ ಇನ್​ಕಮಿಂಗ್, ಔಟ್​ಗೋಯಿಂಗ್ ಕರೆಗಳು ಕೊಡುಗೆಯಾಗಿ ನೀಡಲಿದ್ದು, ನಂತರ 50 ರೂಪಾಯಿಗೆ 1ಜಿಬಿ ಡೇಟಾ ಇಂಟರ್​ನೆಟ್ ಫ್ರಿ ನೀಡುವುದಾಗಿ ಕಂಪನಿ ತಿಳಿಸಿದೆ.