ರಿಲಯನ್ಸ್ Jio ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದ ಭರ್ಜರಿ ಆಫರ್‌ಗಳದ್ದೇ ಸದ್ದು. ಇದೀಗ ಹೊಸ ವರ್ಷದ ಪ್ರಯುಕ್ತ ಅಂತಹದ್ದೊಂದು ಆಫರನ್ನು Jio ಬಿಡುಗಡೆಮಾಡಿದೆ.

ಪ್ರಿಪೇಯ್ಡ್ ಬಳಕೆದಾರರಿಗೋಸ್ಕರ ಬಿಡುಗಡೆ ಮಾಡಿರುವ ಈ ಆಫರ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೌಲಭ್ಯವನ್ನು Jio ನೀಡಿದೆ. ₹399 ಮೇಲ್ಪಟ್ಟು ರೀಚಾರ್ಜ್ ಮಾಡುವವರಿಗೆ ಈ ಆಫರ್ ಅನ್ವಯವಾಗಲಿದೆ. ಈ ಆಫರ್ ಜ.31ರ ವರೆಗೆ ಲಭ್ಯವಿರಲಿದೆ.

ALERT: ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!

ಬಳಕೆದಾರರಿಗೆ 100% ಕ್ಯಾಷ್ ಬ್ಯಾಕ್ ಆಫರ್ Ajio ಕೂಪನ್ ಮೂಲಕ ಸಿಗಲಿದೆ. ಬಳಕೆದಾರರು ಅದನ್ನು ಬಳಿಕ ರೀಡೀಮ್ ಮಾಡಿಕೊಳ್ಳಬಹುದು.  Ajio, ರಿಲಯನ್ಸ್ ರೀಟೆಲ್ಸ್ ನ ಇ-ಕಾಮರ್ಸ್ ಅಂಗವಾಗಿದ್ದು, ಕೂಪನ್ ಇದ್ದವರು ajio.com ನಲ್ಲಿ ಶಾಪಿಂಗ್ ಮಾಡುವ ಮೂಲಕ ಕೂಪನನ್ನು ರಿಡೀಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Goodbye 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

ಕಳೆದ ವರ್ಷವೂ Jio ಇಂತಹದ್ದೇ ಆಫರನ್ನು ಪ್ರಕಟಿಸಿತ್ತು.  ಆದರೆ ಅದು ಮೈಜಿಯೋ ಆ್ಯಪ್ ನಲ್ಲಿ ಮಾತ್ರ ರಿಡೀಮ್ ಮಾಡಬಹುದಾಗಿತ್ತು.