ಬೆಂಗಳೂರು (ಜು.18): ರಾತೋರಾತ್ರಿ ಜನಪ್ರಿಯವಾಗಿ, ನೂರಾರು ಮಿಲಿಯನ್ ಬಳಕೆದಾರರನ್ನು ಹೊಂದಿರುವ FaceAppಗೆ ಕಂಟಕ ಎದುರಾಗಿದೆ.

ಒಂದು ಕಡೆ ತನ್ನ ವಿಶಿಷ್ಟ ‘AIಚಳಕ’ದಿಂದ ರಷ್ಯಾದ FaceApp ಮೋಡಿ ಮಾಡುತ್ತಿದ್ದರೆ, ಇನ್ನೊಂದು ಕಡೆ ತನ್ನ ಶರತ್ತುಗಳ ಕಾರಣದಿಂದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕಾ ರಾಜಕೀಯ ನಾಯಕರು, FBI ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಹುಚ್ಚೆಬ್ಬಿಸಿದೆ FaceApp, ಭಯ ಹುಟ್ಟಿಸಿದೆ ಅದರ ಶರತ್ತು!

ಅಮೆರಿಕಾ ಪ್ರಜೆಗಳ ವೈಯುಕ್ತಿಕ ಮಾಹಿತಿ ವಿದೇಶಿ ಕೈಗಳಿಗೆ ಸಿಗುತ್ತಿರುವುದು ಕಳವಳಕಾರಿಯೆಂದು ಸೆನೆಟ್ ನಾಯಕ ಚಕ್ ಸ್ಕ್ಯೂಮರ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ಮತ್ತು ವೈಯುಕ್ತಿಕ ಮಾಹಿತಿಗೆ ಅಪಾಯವಿರುವ ಹಿನ್ನೆಲೆಯಲ್ಲಿ FBIಯು ರಷ್ಯಾದ ಈ ಆ್ಯಪ್ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಆದರೆ FaceApp ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ತಾವು ಯಾವುದೇ ಮಾಹಿತಿಯನ್ನು ಶಾಶ್ವತವಾಗಿ  ಸಂಗ್ರಹಿಸಿಡಲ್ಲ ಎಂದು ಹೇಳಿದೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು FaceApp ಬಳಸಬಾರದು ಎಂದು  ಅಮೆರಿಕಾದ ಡೆಮಾಕ್ರೆಟಿಕ್ ನ್ಯಾಶನಲ್ ಕಮಿಟಿಯು ಈ ಹಿಂದೆ ಕರೆ ನೀಡಿತ್ತು. 

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ರಷ್ಯಾ  ಹಸ್ತಕ್ಷೇಪ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.