Asianet Suvarna News Asianet Suvarna News

ಹುಚ್ಚೆಬ್ಬಿಸಿದೆ FaceApp, ಭಯ ಹುಟ್ಟಿಸಿದೆ ಅದರ ಶರತ್ತು!

ರಾತೋರಾತ್ರಿ ವೈರಲ್ ಆಯ್ತು Face App; ಎಲ್ಲಿ ನೋಡಿದ್ರೂ, ಯಾರನ್ನೂ ನೋಡಿದ್ರೂ ಇದರದ್ದೇ ಚರ್ಚೆ;  ಮೋಜು ಮಸ್ತಿಯ ಹಿಂದಿದೆ ಬೆಚ್ಚಿಬೀಳಿಸುವ ಶರತ್ತು!

FaceApp Becomes Viral Terms Conditions Raise Concerns
Author
Bengaluru, First Published Jul 18, 2019, 2:33 PM IST

‘ನಿಮಗೆ ಇವರ ಪರಿಚಯ ಇದೆಯಾ?‘ ‘ಇವರ್ಯಾರು ನಿಮಗೆ ಗೊತ್ತಾ?’ ಎಂಬ ಒಕ್ಕಣೆಯೊಂದಿಗೆ ವಾಟ್ಸಪ್ ಸ್ಟೇಟಸ್, ಫೇಸ್ಬುಕ್ ಪೋಸ್ಟ್‌ಗಳಲ್ಲಿ ಗೆಳೆಯರು, ಆಪ್ತರು ಕೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ವಾ?

ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಚಿತ್ರ ಸಿದ್ಧಪಡಿಸುವ FaceApp ರಾತೋ ರಾತ್ರಿ ಭಾರೀ ಜನಪ್ರಿಯವಾಗಿದೆ.  FaceApp ಬಳಸಿ ಫೋಟೋ ಮೇಲೆ ಬೇರೆ ಬೇರೆ ರೀತಿಯ ಎಫೆಕ್ಟ್ ಗಳನ್ನು ಸೃಷ್ಟಿಸಬಹುದು. ಇದು ಮೊಬೈಲ್ ಬಳಸುವ ಯುವಕ-ಯುವತಿಯರಿಗೆ ಬಿಡಿ, ಅಜ್ಜ-ಅಜ್ಜಿಯಂದರಿಗೂ ಹುಚ್ಚೆಬ್ಬಿಸಿದೆ.

ಭೂತಕಾಲದಲ್ಲಿ ನಾವು ಹೇಗಿದ್ದೆವು, ಭವಿಷ್ಯದಲ್ಲಿ ಹೇಗೆ ಕಾಣ್ತೇವೆ ಎಂದು ನೊಡುವ ಕುತೂಹಲ ಎಲ್ಲರಿಗೆ. ಹಾಗಾಗಿ ಎಲ್ಲರಿಗೂ FaceApp ಹೊಸ ಕ್ರೇಜ್ ಹುಟ್ಟುಹಾಕಿದೆ. 

ಇದನ್ನೂ ಓದಿ | ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!

ಕೆಲವೇ ಕೆಲ ದಿನಗಳಲ್ಲಿ ರಷ್ಯಾದ ಈ ಆ್ಯಪ್ ನೂರಾರು ಮಿಲಿಯನ್ ಸಂಖ್ಯೆಯಲ್ಲಿ ಇನ್ಸ್ಟಾಲ್ ಆಗಿದೆ. ಆ ಮೂಲಕ ನೂರಾರು ಮಿಲಿಯನ್ ಬಳಕೆದಾರರ ಹೆಸರು, ಭಾವಚಿತ್ರಗಳನ್ನು FaceApp ಈಗಾಗಲೇ ಸಂಗ್ರಹಿಸಿದೆ.

FaceApp ಹುಚ್ಚು ಹೆಚ್ಚಾಗುತ್ತಿದ್ದಂತೆ, ಭಾರತದಲ್ಲಿ ಬ್ಲಾಕ್ ಆಗಿಬಿಟ್ಟಿದೆ.  ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಫೇಸ್ ಆ್ಯಪ್ ಡೌನ್‌ಲೋಡ್ ಮಾಡಲು ಲಭ್ಯವಿದ್ದರೂ, ಅದನ್ನು ಬಳಸುವಾಗ ಎರರ್ ಕಾಣಿಸಿಕೊಳ್ಳುತ್ತಿದೆ. "Something went wrong, Please try again" ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ.

ಆದರೆ FaceAppನ ಕೆಲವು ನಿಯಮ ಮತ್ತು ನಿಬಂಧನೆಗಳು ಬಳಕೆದಾರರಲ್ಲಿ ಆತಂಕ ಹುಟ್ಟುಹಾಕಿರುವುದೂ ಹೌದು. FaceApp ಇನ್ಸ್ಟಾಲ್ ಮಾಡುವಾಗ ಈ ನಿಬಂಧನೆಗಳನ್ನು ಒಪ್ಪಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಇನ್ಸ್ಟಾಲ್ ಆಗಲ್ಲ. ಆದರೆ, ಆ್ಯಪ್ ಬಳಸುವಾಗ ಬಳಕೆದಾರರು ಕೊಡುವ ಮಾಹಿತಿಯನ್ನು FaceApp ಯಾವಾಗ ಬೇಕಾದರೂ, ಹೇಗೆ ಬೇಕಾದರೂ, ಎಲ್ಲೂ ಬೇಕಾದರೂ  ಬಳಸಿಕೊಳ್ಳಬಹುದು ಎಂಬ ಶರತ್ತನ್ನು ಇಟ್ಟಿರುವುದು ಡೇಟಾ ಪ್ರೈವೆಸಿ ಬಗ್ಗೆ ಕಾಳಜಿಯುಳ್ಳವರಿಗೆ ತಲೆನೋವು ಉಂಟುಮಾಡಿದೆ.

Follow Us:
Download App:
  • android
  • ios