ಇ ಆಧಾರ್‌ ಮಾದರಿಯಲ್ಲಿ ಶೀಘ್ರ ಇ-ಪಾನ್‌ ಸೌಲಭ್ಯ

ಪಾನ್ ಕಾರ್ಡ್ ಗೆ ಕಾಯುವ ಅಗತ್ಯವೇ ಇಲ್ಲ | ಆಧಾರ್‌ ಮಾಹಿತಿ ನೀಡಿದರೆ ತಕ್ಷಣವೇ ಇ-ಪಾನ್‌ ವಿತರಣೆ | ತೆರಿಗೆ ಇಲಾಖೆ ಕಳೆದ 8 ದಿನಗಳ ಅವಧಿಯಲ್ಲಿ 62,000 ಇ- ಪಾನ್‌ಗಳನ್ನು ವಿತರಿಸಿದೆ 

PAN card to be issued online instantly using Aadhaar Card here is how

ನವದೆಹಲಿ (ನ. 06): ಆಧಾರ್‌ ಮಾಹಿತಿ ಆಧರಿಸಿ ಆನ್‌ಲೈನ್‌ನಲ್ಲಿ ತಕ್ಷಣವೇ ಪಾನ್‌ ನಂಬರ್‌ ವಿತರಿಸುವ ಯೋಜನೆ ಜಾರಿಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಇಲೆಕ್ಟ್ರಾನಿಕ್‌ ಪಾನ್‌ ಅಥವಾ ಇ- ಪಾನ್‌ ಸೌಲಭ್ಯವನ್ನು ಮುಂದಿನ ಕೆಲವು ವಾರಗಳಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ತೆರಿಗೆ ಇಲಾಖೆ ಕಳೆದ 8 ದಿನಗಳ ಅವಧಿಯಲ್ಲಿ 62,000 ಇ- ಪಾನ್‌ಗಳನ್ನು ವಿತರಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಸೇವೆ ಸಂಪೂರ್ಣ ಉಚಿತ ಮತ್ತು ತಕ್ಷಣವೇ ಲಭ್ಯವಾಗಲಿದೆ. ಡಿಜಿಟಲ್‌ ಸಹಿ ಹೊಂದಿರುವ ಇ- ಪಾನ್‌ ಕ್ಯು ಆರ್‌ ಕೋಡೊಂದನ್ನು ಹೊಂದಿರಲಿದೆ. ಇದರಲ್ಲಿ ವ್ಯಕ್ತಿಯ ಮೂಲ ಮಾಹಿತಿಗಳು ಮತ್ತು ಭಾವ ಚಿತ್ರ ಇರಲಿದೆ. ಭದ್ರತೆಯ ದೃಷ್ಟಿಯಿಂದ ಕ್ಯುಆರ್‌ ಕೋಡ್‌ನಲ್ಲಿರುವ ಮಾಹಿತಿ ಗೂಢಲಿಪಿಯಲ್ಲಿ ಇರಲಿದೆ.

ಏರ್ ಟೆಲ್ ರೀಚಾರ್ಜ್ ಮಾಡಿಸಿದರೆ 4 ಲಕ್ಷ ಜೀವ ವಿಮೆ ಉಚಿತ!

ಪಾನ್‌ಗೆ ಅರ್ಜಿಸಲ್ಲಿಸುವವರು ಒನ್‌ ಟೈಮ್‌ ಪಾಸ್‌ವರ್ಡ್‌ ಬಳಸಿ ತಮ್ಮ ಆಧಾರ್‌ ಮಾಹಿತಿಯನ್ನು ದೃಢೀಕರಿಸಬೇಕು. ಆಧಾರ್‌ ಮಾಹಿತಿ ಆಧರಿಸಿ ವ್ಯಕ್ತಿಯ ಮೂಲ ಮಾಹಿತಿಯನ್ನು ಪಡೆಯಲಾಗುತ್ತದೆ. ಇತರ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾದ ಅಗತ್ಯವಿಲ್ಲ.

ಆದಾಯ ತೆರಿಗೆ ಇಲಾಖೆಯ ಡಿಜಿಟಲೀಕರಣದ ಭಾಗವಾಗಿ ಈ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಗ್ರಾಹಕರ ಯಾವುದೇ ಕಚೇರಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Latest Videos
Follow Us:
Download App:
  • android
  • ios