ಮೊಬೈಲ್ ಫೋನ್ ಕೊಳ್ಳುವವರಿಗೆ ಒಂದು ಸಿಹಿ ಸುದ್ದಿ. ಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ Oppo ಮೊಬೈಲ್ ಕಂಪನಿಯು ತನ್ನ ಮಾಡೆಲ್ ಒಂದರ ದರವನ್ನು ಇಳಿಸಿದೆ.

Oppo A7 ಮಾಡೆಲ್ ಫೋನ್ ಗಳ ದರವನ್ನು ಪರಿಷ್ಕರಿಸಲಾಗಿದ್ದು, 3GB RAM ಫೋನ್ ಈಗ 12990 ರೂ.ಗೆ ಸಿಗಲಿದೆ. ಇದೇ ಮಾಡೆಲ್ ನಲ್ಲಿ 4GB RAM ಫೋನಿನ ಬೆಲೆಯನ್ನು 14990 ರೂ.  ನಿಗದಿಪಡಿಸಲಾಗಿದೆ. 

ಈ ಫೋನಿನ ಬೆಲೆಯನ್ನು ಕಳೆದ ತಿಂಗಳಷ್ಟೇ 1000 ರೂ. ರಷ್ಟು ಇಳಿಸಲಾಗಿತ್ತು. ಕಳೆದ ನವೆಂಬರ್ ನಲ್ಲಿ ಈ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಜಿಯೋದಿಂದ 600 ರು.ಗೆ ಟೀವಿ, ಲ್ಯಾಂಡ್‌ಲೈನ್‌, ಬ್ರಾಡ್‌ ಬ್ಯಾಂಡ್‌!

ಡ್ಯುಯಲ್ ರೇರ್ ಕ್ಯಾಮೆರಾ ಇರುವ ಈ ಫೋನ್, ವಾಟರ್ ಡ್ರಾಪ್ ನಾಚ್ ಶೈಲಿಯ ಪರದೆ ಹೊಂದಿದ್ದು 4230 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.26 ಏಪ್ರಿಲ್ ನಿಂದಲೇ ಈ ಹೊಸ ಬೆಲೆ ಜಾರಿಯಾಗಲಿದೆ ಎಂದು ಕಂಪನಿಯು ಹೇಳಿದೆ.  

ವಿಶೇಷತೆಗಳು: 

ಡ್ಯುಯಲ್ ಸಿಮ್, Android 8.1 Oreo, 6.2 ಇಂಚು ಡಿಸ್ಪ್ಲೇ,  19:9  ಆ್ಯಸ್ಪೆಕ್ಟ್ ರೇಶ್ಯೋ,  octa-core Qualcomm Snapdragon 450 SoC ಪ್ರೊಸೆಸರ್, 13 ಮತ್ತು 16 ಮೆಗಾ ಪಿಕ್ಸೆಲ್ ಕ್ಯಾಮೆರಾ; 64GB ಇಂಟರ್ನಲ್ ಮೆಮೊರಿ; 256 GB ವರೆಗೆ ವಿಸ್ತರಿಸಬಹುದಾದ ಸೌಲಭ್ಯ.