ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆಯಾದ Oneplus 7 Pro ಫೋನ್ ಹೇಗಿದೆ ಎಂಬುವುದನ್ನು ನೀವು ಓದಿದ್ದೀರಿ. ಅದರ ಜೊತೆಯಲ್ಲೇ Oneplus 7  ಕೂಡಾ ಬಿಡುಗಡೆಯಾಗಿದೆ.  

ಬಹಳಷ್ಟು ವಿಚಾರದಲ್ಲಿ Oneplus 7  ಸ್ಮಾರ್ಟ್‌ಫೋನ್ Oneplus 7 Proನ ತದ್ರೂಪಿಯೆಂದೇ ಹೇಳಬಹುದು. ಆದರೆ Oneplus 7 Pro ನಲ್ಲಿರುವ ಪಾಪ್ ಅಪ್ ಕ್ಯಾಮೆರಾ, ಮತ್ತು ಹಿಂಬದಿಯಲ್ಲಿ 3 ಕ್ಯಾಮೆರಾ ಬದಲಿಗೆ 2 ಕ್ಯಾಮೆರಾಗಳಿವೆ.

ಅದೇ Qualcomm® Snapdragon™ 855 ಪ್ಲಾಟ್ ಫಾರ್ಮ್, ಯುಎಫ್‌ಎಸ್ 3.0, ಡಾಲ್ಬಿ ಅಟ್ಮೋಸ್ ಸ್ಟೀರಿಯೋ ಸ್ಪೀಕರ್‌ಗಳು, RAM  ಬೂಸ್ಟ್, ಹೊಸ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನ, ಅಲ್ಟ್ರಾಶಾಟ್ ಇಂಜಿನ್ ಮತ್ತು ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದುವ ಮೂಲಕ Oneplus 7 ಅಷ್ಟೇ ಡಿಫರೆಂಟ್ ಆಗಿದೆ. 

ಇದನ್ನೂ ಓದಿ | ಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ!

ಶಾರ್ಪರ್ ಮತ್ತು ಸ್ಪಷ್ಟ ಚಿತ್ರಗಳು

Oneplus 7 ಶಕ್ತಿಶಾಲಿ ಡ್ಯುಯೆಲ್-ಲೆನ್ಸ್ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅತ್ಯುತ್ತಮ ಫೋಟೋಗಳನ್ನು ತೆಗೆಯಲು ನೆರವಾಗಲಿದೆ. Oneplus 7  ವೈಶಿಷ್ಟ್ಯತೆಗಳಾದ ಸೋನಿಯ ಐಎಂಎಕ್ಸ್586, 48 ಮೆಗಾಪಿಕ್ಸೆಲ್, 1/2 ಇಂಚಿನ ಸೂಪರ್-ಗಾತ್ರದ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸಲ್ ಹೊಂದಿದ್ದು, ಒಟ್ಟಾರೆ ಕ್ಯಾಮೆರಾಗಳು ಹೊಸ ಅಲ್ಟ್ರಾಶಾಟ್ ಇಂಜಿನ್ ಅನ್ನು ಹೊಂದಿವೆ.

1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇರುವ 6.41 ಇಂಚಿನ (16.28 cm) ಪರದೆ,  Android v9.0 (Pie) ಆಪರೇಟಿಂಗ್ ಸಿಸ್ಟಮ್, 6GB RAM ಮತ್ತು ಓಕ್ಟಾ ಕೋರ್ ಪ್ರೊಸೆಸರ್, 3700mAh ಬ್ಯಾಟರಿ ಈ ಫೋನ್ ನ ಇನ್ನಿತರ ವಿಶೇಷತೆಗಳು. 

Product

Configuration

Price

Availability (open sales)

OnePlus 7 Pro Almond

8+ 256 GB

INR 52,999

June

OnePlus 7 Mirror Gray

6+128 GB, 8 + 256 GB

IINR 32,999, INR 37,999

June

OnePlus 7 Red

8+256 GB

INR 37,999

June

 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.