ದೀಪಾವಳಿ ಶುಭಾಶಯ ಕೋರಲು ಹೊಸ ಸ್ಟಿಕರ್ ವೊಂದನ್ನು ಪರಿಚಯಿಸಲಾಗಿದ್ದು, ಇಮೋಜಿ, ಇಮೇಜ್ ಅಥವಾ ವಿಡಿಯೋ ತರಹ ಇದನ್ನೂ ಕಳುಹಿಸಬಹುದು.ಈ ಫಿಚರ್ ಅನುಕೂಲವೇನೆಂದರೆ, ಇದು ಇಮೇಜ್ ಅಥವಾ ವಿಡಿಯೋ ಫೈಲ್ ನಂತೆ ಹೆಚ್ಚು ಮೆಮೊರಿ ತೆಗೆದುಕೊಳ್ಳಲ್ಲ. ಆ ಮೂಲಕ ನಿಮ್ಮ  ಗ್ಯಾಲರಿಯ ಹೆಚ್ಚು ಸ್ಪೇಸ್  ಉಳಿಯಲಿದೆ.

ಆಸಕ್ತ ಡೆವಲಪರ್ ಗಳು ಥರ್ಡ್ ಪಾರ್ಟಿ ಸ್ಟಿಕರ್ ಗಳನ್ನು ಸೃಷ್ಟಿಸಬಹುದಾಗಿದ್ದು, ಇತರ ವಾಟ್ಸಪ್ ಬಳಕೆದಾರರು ಅದನ್ನು ಬಳಸಬಹುದಾಗಿದೆ. ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಫೋನ್ ಗಳಲ್ಲಿ ಲಭ್ಯವಿದ್ದರೂ, ಕೇವಲ ಸೀಮಿತ ಬಳಕೆಗೆ ಲಭ್ಯವಿದೆ. ಕ್ರಮೇಣವಾಗಿ ಎಲ್ಲಾ ಬಳಕೆದಾರರಿಗೂ ಇದು ಸಿಗಲಿದೆ ಎಂದು ಬಿಜಿಆರ್.ಇನ್ ವರದಿ ಮಾಡಿದೆ.

ಈ ಆಯ್ಕೆಯನ್ನು 2 ರೀತಿಯಲ್ಲಿ ಬಳಸಬಹುದು. ಒಂದೋ ನೀವು ವಾಟ್ಸಪ್ ಬೀಟಾ ಆವೃತ್ತಿಯನ್ನು ಬಳಸಬೇಕು ಅಥವಾ ವಾಟ್ಸಪ್ ನ್ನು ನಿಮ್ಮ ಫೋನ್ ನಿಂದ ಅನ್ ಇನ್ಸ್ಟಾಲ್ ಮಾಡಿ ರೀ ಇನ್ಸ್ಟಾಲ್ ಮಾಡಿಕೊಳ್ಳಬೇಕು. [ ಈ ರೀತಿ ಮಾಡುವಾಗ ನಿಮ್ಮ ವಾಟ್ಸಪ್ ಮಾಹಿತಿಗಳ ಬ್ಯಾಕಪ್ ತೆಗೆದುಕೊಳ್ಳಲು ಮರೆಯದಿರಿ]

ಬಳಿಕ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ  ಅಲ್ಲಿ  “Diwali Stickers for WhatsApp, WAStickerApps” ಅಥವಾ bit.ly/2yT9k0M - ಈ ಲಿಂಕನ್ನು ಕ್ಲಿಕ್ ಮಾಡಿ. ಅಲ್ಲಿ ಸಿಗುವ ಆ್ಯಪನ್ನು ಇನ್ಸ್ಟಾಲ್ ಮಾಡಿ. ಈ ಆ್ಯಪ್ ಬರೇ 5.4MB ಯಷ್ಟಿದೆ.

ಈ ಆ್ಯಪ್ ಇನ್ಸ್ಟಾಲ್ ಮಾಡಿದ ಬಳಿಕ, ನಿಮ್ಮ ಮುಂದೆ, ದೀಪಾವಳಿ ಸ್ಟಿಕ್ಕರ್ಸ್ [0.95MB] ಮತ್ತು ಕ್ರ್ಯಾಕರ್ ಸ್ಟಿಕರ್ಸ್   [577KB] ಎಂಬ 2 ಆಯ್ಕೆಗಳಿರುವುದು.  ಬಲಬದಿಯಲ್ಲಿರುವ + ಚಿಹ್ನೆಯನ್ನು ಪ್ರೆಸ್ ಮಾಡುವ ಮೂಲಕ ಅದನ್ನು ವಾಟ್ಸಪ್ ಗೆ ಸೇರಿಸಬಹುದು

ನಂತರ, ವಾಟ್ಸಪ್ ಓಪನ್ ಮಾಡಿ. ಚಾಟ್ ಮಾಡುವಾಗ ಇಮೋಜಿ ಸಂಕೇತಗಳನ್ನು ಓಪನ್  ಮಾಡಿ ಅಲ್ಲಿಂದ ಸ್ಟಿಕ್ಕರ್ಸ್ಗಳನ್ನು ಆಯ್ದುಕೊಂಡು ತಮ್ಮ ಗೆಳೆಯರಿಗೆ- ಸಂಬಂಧಿಕರಿಗೆ ಶುಭಾಶಯ ಕೋರಬಹುದು.