Asianet Suvarna News Asianet Suvarna News

ದೇಶದ ಭದ್ರತೆ ವಿಷಯ ಚರ್ಚಿಸುವ ಸಭೆಗಳಲ್ಲಿ ಸ್ಮಾರ್ಟ್‌ ಫೋನ್‌ ಬಳಸಬೇಡಿ: ಅಧಿಕಾರಿಗಳಿಗೆ ಕೇಂದ್ರ ಸೂಚನೆ

*ಸರ್ಕಾರದ ಗೌಪ್ಯ ಮಾಹಿತಿಗಳು ಸೋರಿಕೆ ಪ್ರಕರಣ
*ಅಧಿಕಾರಿಗಳಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ
*ಮಾಹಿತಿ ಕಳಿಸಲು ವಾಟ್ಸಾಪ್‌, ಟೆಲಿಗ್ರಾಂ ಬಳಕೆ ಬೇಡ

No important documents on WhatsApp no use of smartphones in meetings Centre new guidelines mnj
Author
Bengaluru, First Published Jan 22, 2022, 8:30 AM IST

ನವದೆಹಲಿ (ಜ. 22): ಸರ್ಕಾರದ ಗೌಪ್ಯ ಮಾಹಿತಿಗಳು ಸೋರಿಕೆಯಾಗುತ್ತಿರುವ ಪ್ರಕರಣಗಳನ್ನು (Data Leak) ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಸಂವಹನ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ವರ್ಗೀಕೃತ ಮಾಹಿತಿಯ ಸೋರಿಕೆಯನ್ನು ತಡೆಗಟ್ಟಲು ಪರಿಷ್ಕೃತ ಸಂವಹನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರನ್ವಯ ಗೌಪ್ಯ ಮಾಹಿತಿಯ ರವಾನೆಗೆ ವಾಟ್ಸಾಪ್‌ (WhatsApp), ಟೆಲಿಗ್ರಾಂ (Telegram) ಮೊದಲಾದ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಸಾಮಾಜಿಕ ಮಾಧ್ಯಮಗಳು (Social Media) ವಿದೇಶಿ ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿದ್ದು, ಗೌಪ್ಯ ಮಾಹಿತಿಗಳನ್ನು ದೇಶ ವಿರೋಧಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದ್ದ ಕಾರಣ ಸರ್ಕಾರ ಇಂತಹ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವರು ಕೂಡಾ ಸಂವಹನಕ್ಕಾಗಿ ಇ-ಆಫೀಸ್‌ ಅಪ್ಲಿಕೇಶನ್‌ ಬಳಸಬೇಕು ಹಾಗೂ ಮನೆಯಲ್ಲಿರು ಕಂಪ್ಯೂಟರ್‌ ಸಿಸ್ಟಮ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಖಾಸಗಿ ನೆಟ್‌ವರ್ಕ್ ಕೇಂದ್ರದ ಮುಖಾಂತರ ಆಫೀಸ್‌ ನೆಟ್‌ವಕ್‌ ಜೊತೆಗೆ ಸಂಪರ್ಕ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. 

ಇದನ್ನೂ ಓದಿAnti India Propaganda ಭಾರತ ವಿರೋಧಿ ಚಟುವಟಿಕೆ, ಪಾಕ್ ಮೂಲದ 35 ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾ ಖಾತೆ ಬ್ಲಾಕ್!

ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಾಧಿಕಾರಿಗಳು ವರ್ಗೀಕೃತ ಮಾಹಿತಿ ಆಥವಾ ದೇಶದ ಭದ್ರತೆ ಕುರಿತಾದ ವಿಷಯಗಳನ್ನು ಚರ್ಚಿಸುವ ಸಭೆಗಳಲ್ಲಿ ಸ್ಮಾರ್ಟ್‌ ವಾಚ್‌ ಹಾಗೂ ಸ್ಮಾರ್ಟ್‌ಫೋನು, ಅಮೆಜಾನ್‌ನ ಅಲೆಕ್ಸಾ, ಆ್ಯಪಲ್‌ನ ಹೋಂಪೊಡ್‌ ಮೊದಲಾದ ಸಾಧನಗಳನ್ನು ಬಳಸದಂತೆ ನಿರ್ಬಂಧಿಸಿದೆ. ಅಲ್ಲದೇ ಕೋವಿಡ್‌ ಕಾರಣದಿಂದಾಗಿ ವರ್ಚುವಲ್‌ ಮೀಟಿಂಗ್‌ ನಡೆಸಲು ಗೂಗಲ್‌ ಮೀಟ್‌, ಝೂಮ್‌ ಬಳಸದೇ ಅಡ್ವಾನ್ಸ್‌ ಕಂಪ್ಯೂಟಿಂಗ್‌ ಇಲಾಖೆ ರಚಿಸಿದ ವಿಡಿಯೋ ಕಾನ್ಫರೆನ್ಸ್‌ನ್ನು ಬಳಸಲು ತಿಳಿಸಿದೆ.

ಯಾವುದೇ ಡೇಟಾ ಉಲ್ಲಂಘನೆಗಳನ್ನು ತಡೆಗಟ್ಟಲು ಮತ್ತು ಗೌಪ್ಯ ಅಥವಾ ನಿರ್ಬಂಧಿತ ಸಂವಹನಗಳೊಂದಿಗೆ ವ್ಯವಹರಿಸುವಾಗ ಸಂವಹನ ಭದ್ರತಾ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು 'ತುರ್ತು ಕ್ರಮಗಳನ್ನು' ತೆಗೆದುಕೊಳ್ಳುವಂತೆ ಎಲ್ಲಾ ಸಚಿವಾಲಯಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. "ಯಾವುದೇ ವರ್ಗೀಕೃತ ಅಥವಾ ರಹಸ್ಯ ದಾಖಲೆಗಳನ್ನು ಅಧಿಕಾರಿಗಳ ಮೊಬೈಲ್ ಸೆಟ್‌ಗಳಲ್ಲಿ ಸಂಗ್ರಹಿಸಬಾರದು. ಹೊಸ ಸಂವಹನ ಅಪ್ಲಿಕೇಶನ್‌ಗಳ ಸರ್ವರ್‌ಗಳು ಖಾಸಗಿ ಮಾಲೀಕತ್ವದ ಒಡೆತನದಲ್ಲಿದೆ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಇತರ ಸಂಬಂಧಗಳಿಗೆ ದೊಡ್ಡ ಅಪಾಯವನ್ನು ಉಂಟುಮಾಡುವ ಕಾರಣ ಅದನ್ನು ಮೊಬೈಲ್ ಮೂಲಕ ಯಾವುದೇ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಾರದು." ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Whatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!

ಭಾರತೀಯರ ಕೋವಿಡ್‌ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ?: ಹೆಸರು, ಮೊಬೈಲ್‌ ಸಂಖ್ಯೆ, ವಿಳಾಸ, ಕೋವಿಡ್‌ ಪರೀಕ್ಷೆ ಫಲಿತಾಂಶ ಸೇರಿದಂತೆ ಸಾವಿರಾರು ಭಾರತೀಯರ ವೈಯಕ್ತಿಕ ಕೋವಿಡ್‌ ಮಾಹಿತಿ (Covid 19) ಸರ್ಕಾರಿ ಸರ್ವರ್‌ನಿಂದ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯನ್ನು ರೈಡ್‌ ಫೋರಂ (Raid Forums) ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ರೆಡ್‌ಫೋರಂನಲ್ಲಿ 20,000ಕ್ಕೂ ಅಧಿಕ ಮಂದಿಯ ವೈಯಕ್ತಿಕ ಮಾಹಿತಿ ಇದೆ ಎಂದು ಸೈಬರ್‌ ವಿಶ್ಲೇಷಕರೊಬ್ಬರು ಬಹಿರಂಗಪಡಿಸಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್ ಎಸ್ ಶರ್ಮಾ ನಾಗರಿಕರ ಡೇಟಾ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.  ಈ ಬಗ್ಗೆ ಟ್ವೀಟ್‌ ಮಾಡಿರುವ ಶರ್ಮಾ " #CoWIN ಅತ್ಯಾಧುನಿಕ ಭದ್ರತಾ ಮೂಲಸೌಕರ್ಯವನ್ನು ಹೊಂದಿದೆ ಮತ್ತು ಭದ್ರತಾ ಉಲ್ಲಂಘನೆಯನ್ನು ಎಂದಿಗೂ ಎದುರಿಸಿಲ್ಲ. CoWIN ನಲ್ಲಿನ ನಮ್ಮ ನಾಗರಿಕರ ಡೇಟಾ ಸಂಪೂರ್ಣವಾಗಿ  #ಸುರಕ್ಷಿತವಾಗಿದೆ. CoWIN ನಿಂದ ಡೇಟಾ ಸೋರಿಕೆಯ ಕುರಿತು ಯಾವುದೇ ಸುದ್ದಿ ಯಾವುದೇ ಸತ್ಯಕ್ಕೆ ದೂರವಾದದ್ದು" ಎಂದು  ಹೇಳಿದ್ದಾರೆ  .

Follow Us:
Download App:
  • android
  • ios