ಶೀಘ್ರವೇ ಫೇಸ್‌ಬುಕ್ ನಿಮ್ಮ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಪತ್ತೆ ಮಾಡಲಿದೆ. ಬಳಕೆ ದಾರರನ್ನು ದುಡಿಯುವ ವರ್ಗ, ಮಧ್ಯಮ ವರ್ಗ ಅಥವಾ ಮೇಲ್ವರ್ಗ- ಹೀಗೆ ಮೂರು ವಿಭಾಗಗಳಲ್ಲಿ ಫೇಸ್‌ಬುಕ್ ವಿಂಗಡಿಸಲಿದೆ.

ಲಂಡನ್: ಶೀಘ್ರವೇ ಫೇಸ್‌ಬುಕ್ ನಿಮ್ಮ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಪತ್ತೆ ಮಾಡಲಿದೆ. ಬಳಕೆ ದಾರರನ್ನು ದುಡಿಯುವ ವರ್ಗ, ಮಧ್ಯಮ ವರ್ಗ ಅಥವಾ ಮೇಲ್ವರ್ಗ- ಹೀಗೆ ಮೂರು ವಿಭಾಗಗಳಲ್ಲಿ ಫೇಸ್‌ಬುಕ್ ವಿಂಗಡಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಅಂದಾಜಿಸಲು ಬಳಕೆದಾರರ ಶಿಕ್ಷಣ, ಗೃಹ ಮಾಲೀಕತ್ವ ಮತ್ತು ಇಂಟರ್‌ನೆಟ್ ಬಳಕೆ ಸೇರಿದಂತೆ ವೈಯಕ್ತಿಕ ಡೇಟಾಗಳನ್ನು ಸಂಗ್ರಹಿಸುವ ತಂತ್ರಜ್ಞಾನಕ್ಕಾಗಿ ಫೇಸ್‌ಬುಕ್ 2016 ರ ಜೂನ್‌ನಲ್ಲಿಯೇ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ.

ಇದಕ್ಕಾಗಿ ಬಳಕೆದಾರರಿಗೆ ಫೇಸ್‌ಬುಕ್ ಪ್ರಶ್ನೆ ಕೇಳಲಿದೆ. ಆದರೆ, ಬಳಕೆ ದಾರರು ಉತ್ತರಿಸುವುದು ಕಡ್ಡಾಯವೇ ಅಥವಾ ಐಚ್ಛಿಕವೇ ಎಂಬ ಬಗ್ಗೆ ಮಾಹಿತಿ ಇಲ್ಲ.