ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

https://static.asianetnews.com/images/authors/7d06288b-fbfa-5ff6-bfcf-f2ff6a2ad184.jpg
First Published 29, Dec 2018, 3:05 PM IST
New Horizons Hurtles Toward Historic Flyby of Ultima Thule
Highlights

ಹೊಸ ದಾಖಲೆ ಬರೆಯಲಿದೆ ನಾಸಾದ ನ್ಯೂ ಹೊರೈಜನ್ಸ್ ನೌಕೆ| ಹೊಸ ವರ್ಷದ ಮೊದಲ ದಿನ ಅಲ್ಟಿಮಾ ಟೂಲೆ ತಲುಪಲಿರುವ ನೌಕೆ| ಅಲ್ಟಿಮಾ ಟೂಲೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ| ಕೈಪರ್ ಬೆಲ್ಟ್‌ನಲ್ಲಿ ಸುತ್ತುತ್ತಿರುವ ಅಲ್ಟಿಮಾ ಟೂಲೆ ಗ್ರಹಕಾಯ| ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ನ್ಯೂ ಹೊರೈಜನ್ಸ್ ನೌಕೆ

ವಾಷಿಂಗ್ಟನ್(ಡಿ.29): ಮಾನವ ಸೃಷ್ಟಿಸಿದ ಜಗತ್ತಿನ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೇ, ಬ್ರಹ್ಮಾಂಡದ ಅನಂತತೆಯನ್ನು ಸೀಳಿಯೇ ಸಿದ್ಧ ಎಂದು ಟೊಂಕ ಕಟ್ಟಿರುವ ಖಗೋಳ ವಿಜ್ಞಾನಿಗಳು ಗುಪ್ತಗಾಮಿನಿಯಂತೆ ಸಾಧನೆ ಮಾಡುತ್ತಲೇ ಇರುತ್ತಾರೆ.

ಈಗಾಗಲೇ ನಾಸಾ ನಿರ್ಮಿತ ವಾಯೇಜರ್-1, ವಾಯೇಜರ್-2 ನೌಕೆಗಳು ಸೌರಮಂಡಲದಾಚೆಗಿನ ಜಗತ್ತಿಗೆ ಪ್ರವೇಶ ಮಾಡಿದ್ದು, ಸೌರಮಂಡಲವನ್ನು ದಾಟಿ ಮುನ್ನುಗ್ಗಿದ ಮಾನವ ನಿರ್ಮಿತ ನೌಕೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಅದರಂತೆ ಒಂದು ಕಾಲದಲ್ಲಿ ಸೌರಮಂಡಲದ 9ನೇ ಗ್ರಹ ಎಂದೇ ಗುರುತಿಸಲ್ಪಡುತ್ತಿದ್ದ ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಮತ್ತೊಂದು ನೌಕೆ ನ್ಯೂ ಹೊರೈಜನ್ಸ್ ನೌಕೆ ಕೂಡ ಅನನ್ಯ ಸಾಧನೆ ಮಾಡಲು ಸಜ್ಜಾಗಿದೆ.

ಹೊಸ ವರ್ಷದ ಮೊದಲನೇ ದಿನ ನ್ಯೂ ಹೊರೈಜನ್ ನೌಕೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ ಎಂದು ಹೇಳಲಾದ ಅಲ್ಟಿಮಾ ಟೂಲೆ ಸಮೀಪ ಹಾದು ಹೋಗಲಿದೆ.

ಅಲ್ಟಿಮಾ ಟೂಲೆ ಸೌರಮಂಡಲ ಎಂಬ ಕುಟುಂಬದ ಅತ್ಯಂತ ಕಟ್ಟಕಡೆಯ ಗ್ರಹಕಾಯವಾಗಿದ್ದು, ಕೈಪರ್ ಬೆಲ್ಟ್ ಎಂದು ಕರೆಯಲ್ಪಡುವ ಕ್ಷುದ್ರಗ್ರಹಗಳ ಪಟ್ಟಿಯಲ್ಲಿ ನೆಲೆಸಿದೆ.

ಜನೆವರಿ 1 ರಂದು ಅಲ್ಟಿಮಾ ಟೂಲೆಯನ್ನು ಸುತ್ತು ಹೊಡೆಯಲಿರುವ ನ್ಯೂ ಹೊರೈಜನ್ಸ್ ನೌಕೆ, ಈ ಮೂಲಕ ಸೌರಮಂಡಲದ ಅತ್ಯಮತ ಅಂಚಿನ ಗ್ರಹಕಾಯವನ್ನೂ ತಲುಪಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸೂರ್ಯನಿಂದ ಸುಮಾರು 4.8 ಬಿಲಿಯನ್ ಕಿ.ಮೀ. ದೂರದಲ್ಲಿರುವ ಕೈಪರ್ ಬೆಲ್ಟ್ ಸೌರಮಂಡಲದ ಕೊನೆಯ ಗ್ರಹವಾಗಿರುವ ನೆಪ್ಚೂನ್ ಬಳಿಕ ಅಸ್ತಿತ್ವದಲ್ಲಿದೆ. ಅಲ್ಟಿಮಾ ಟೂಲೆ ಗ್ರಹಕಾಯವನ್ನು 2014ರಲ್ಲಿ ಹಬಲ್ ದೂರದರ್ಶಕ ಯಂತ್ರ ಮೊದಲ ಬಾರಿಗೆ ಗುರುತಿಸಿತ್ತು.

loader