Asianet Suvarna News Asianet Suvarna News

Take Ten India: ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ನೆಟ್‌ಫ್ಲಿಕ್ಸ್ ಪ್ರೋತ್ಸಾಹ: ₹7.4 ಲಕ್ಷ ಫಂಡಿಂಗ್!

Netflix Take Tenನಲ್ಲಿ ಭಾಗವಹಿಸಲು ಅರ್ಜಿದಾರರು ಮೈ ಇಂಡಿಯಾ (My India) ವಿಷಯದ ಮೇಲೆ ಎರಡು ನಿಮಿಷಗಳವರೆಗಿನ ಚಲನಚಿತ್ರವನ್ನು ಸಲ್ಲಿಸಬೇಕು. 

Netflix Take Ten How to apply Seeking Indias next generation of storytellers usd 10000 grant mnj
Author
Bengaluru, First Published Jan 24, 2022, 3:44 PM IST

Tech Desk: ನೆಟ್‌ಫ್ಲಿಕ್ಸ್ ಇಂಡಿಯಾ ಸೋಮವಾರ ಟೇಕ್‌ ಟೆನ್ ಎಂಬ ಕಿರುಚಿತ್ರ ಕಾರ್ಯಾಗಾರ ಮತ್ತು ಸ್ಪರ್ಧೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಭಾರತದಲ್ಲಿನ ವೈವಿಧ್ಯಮಯ ಹಿನ್ನೆಲೆಯಿಂದ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರನ್ನು ಮುನ್ನೆಲೆಗೆ ತಂದು  ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ, 10 ಚಲನಚಿತ್ರ ನಿರ್ಮಾಪಕರಿಗೆ  ಉದ್ಯಮದಲ್ಲಿನ ಅತ್ಯುತ್ತಮವಾದ ಕಾರ್ಯಾಗಾರಗಳಿಗೆ ಹಾಜರಾಗಲು ಮತ್ತು ನಂತರ $ 10,000 (ಸುಮಾರು ರೂ. 7.4 ಲಕ್ಷ) ಅನುದಾನದೊಂದಿಗೆ  ಕಿರುಚಿತ್ರವನ್ನು ನಿರ್ಮಿಸಲು ಅವಕಾಶವನ್ನು ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಆಯ್ಕೆಯಾದ ಚಲನಚಿತ್ರಗಳನ್ನು ನೆಟ್‌ಫ್ಲಿಕ್ಸ್‌ನ ಇಂಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಟೇಕ್ ಟೆನ್ಅನ್ನು ಕ್ರಿಯೇಟಿವ್ ಇಕ್ವಿಟಿಗಾಗಿ ನೆಟ್‌ಫ್ಲಿಕ್ಸ್ ಫಂಡ್ ಪ್ರಾಯೋಜಿಸಿದೆ, ಇದು  ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಂದ (underrepresented communities) ಮುಂದಿನ ಪೀಳಿಗೆಯ ಕಥೆಗಾರರನ್ನು ಬೆಂಬಲಿಸಲು ಐದು ವರ್ಷಗಳಲ್ಲಿ, ಪ್ರತಿ ವರ್ಷ $100 ಮಿಲಿಯನ್ (ಸುಮಾರು ರೂ. 745 ಕೋಟಿ) ಮೀಸಲಿಟ್ಟಿದೆ.

ಇದನ್ನೂ ಓದಿ: Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

"ಭಾರತದಲ್ಲಿ ಟೇಕ್ ಟೆನ್ ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ - ಒಂದು ಕಿರುಚಿತ್ರ ಕಾರ್ಯಾಗಾರ ಮತ್ತು ಸ್ಪರ್ಧೆಯು ಭಾರತದಲ್ಲಿ ಎಲ್ಲಿಂದಲಾದರೂ ಮಹತ್ವಾಕಾಂಕ್ಷೆಯ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕಥೆಗಳನ್ನು ಹೇಳಲು ಅವಕಾಶವನ್ನು ತೆರೆಯುತ್ತದೆ"

"ಕ್ರಿಯೇಟಿವ್ ಇಕ್ವಿಟಿಗಾಗಿ ನೆಟ್‌ಫ್ಲಿಕ್ಸ್‌ನ ಫಂಡ್‌ನಿಂದ  ಇದು ಬೆಂಬಲಿತವಾಗಿದೆ, ಟೇಕ್ ಟೆನ್  ಎಲ್ಲಿಂದಲಾದರೂ ಉತ್ತಮ ಕಥೆಗಳು ಬರಬಹುದು ಎಂಬುದನ್ನು ಸಾಬೀತುಪಡಿಸುತ್ತದೆ ಮತ್ತು ಇದು ಚಲನಚಿತ್ರ ನಿರ್ಮಾಪಕರಿಗೆ ಉದ್ಯಮದಲ್ಲಿನ ಕೆಲವು ಅತ್ಯುತ್ತಮ ತರಬೇತಿಯನ್ನು ಪಡೆಯಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ನೆಟ್‌ಫ್ಲಿಕ್ಸ್ ವಿದೇಶಾಂಗ ವ್ಯವಹಾರಗಳ ಏಷ್ಯಾ ಪೆಸಿಫಿಕ್ ಮುಖ್ಯಸ್ಥ ಆಮಿ ಸವಿಟ್ಟಾ ಲೆಫೆವ್ರೆ ( Amy Sawitta Lefevre) ಹೇಳಿದ್ದಾರೆ.

ಭಾಗವಹಿಸುವುದು ಹೇಗೆ?: ಟೇಕ್ ಟೆನ್‌ಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು ಅಥವಾ ನಿವಾಸಿಯಾಗಿರಬೇಕು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ನೋಂದಣಿಗಳು ಫೆಬ್ರವರಿ 7, 2022 ರಂದು ತೆರೆಯಲ್ಪಡುತ್ತವೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿದಾರರು ಮೈ ಇಂಡಿಯಾ (My India) ವಿಷಯದ  ಮೇಲೆ ಎರಡು ನಿಮಿಷಗಳವರೆಗೆ ಚಲನಚಿತ್ರವನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಚಲನಚಿತ್ರನ್ನು ಫೋನ್‌ನಿಂದ ಚಿತ್ರೀಕರಿಸಬೇಕು ಮತ್ತು ಅವರು ಚಲನಚಿತ್ರ ನಿರ್ಮಾಪಕರಾಗಿ ಪ್ರತಿನಿಧಿಸಬೇಕು ಎಂದು ನೆಟ್‌ಫ್ಲಿಕ್ಸ್‌ ತಿಳಿಸಿದೆ. 

ಇದನ್ನೂ ಓದಿ: Indian Streaming ಉದ್ಯಮ ಮುಂದಿನ 10 ವರ್ಷದಲ್ಲಿ $13-15 ಶತಕೋಟಿ ಬೆಳೆವಣಿಗೆ ನಿರೀಕ್ಷೆ!

ಸ್ಪರ್ಧೆಯಲ್ಲಿ ಶಾರ್ಟ್‌ಲಿಸ್ಟ್ ಆದ ವಿಜೇತರು, ಅಭಿಷೇಕ್ ಚೌಬೆ, ಹಂಸಲ್ ಮೆಹ್ತಾ, ಜೂಹಿ ಚತುರ್ವೇದಿ, ನೀರಜ್ ಘಯ್ವಾನ್ ಮತ್ತು ಗುನೀತ್ ಮೊಂಗಾ ಸೇರಿದಂತೆ ಪ್ರಶಸ್ತಿ ವಿಜೇತ ಪ್ರತಿಭೆಗಳಿಂದ ಬರವಣಿಗೆ, ನಿರ್ದೇಶನ, ನಿರ್ಮಾಣ ಮತ್ತು ಇತರ ಚಿತ್ರ ನಿರ್ಮಾಣ ವಿಷಯಗಳನ್ನು ಕಲಿಯಲು ಅವಕಾಶವನ್ನು ಪಡೆಯುತ್ತಾರೆ ಎಂದು ನೆಟ್‌ಫ್ಲಿಕ್ಸ್ ಹೇಳಿಕೆ ತಿಳಿಸಿದೆ. 7ನೇ ಫೆಬ್ರವರಿ 2022 ರಂದು www.taketen.in ನಲ್ಲಿ ನೋಂದಣಿಗಳು ಪ್ರಾರಂಭವಾಗುತ್ತವೆ.  First-come-first-served ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. 

Follow Us:
Download App:
  • android
  • ios