ಬುಧ ಗ್ರಹಕ್ಕೆ ಜಪಾನ್ ನೌಕೆ: ಸುಡುವ ಗ್ರಹದತ್ತ ಚಿತ್ತ ಯಾಕೆ?

https://static.asianetnews.com/images/authors/7d06288b-fbfa-5ff6-bfcf-f2ff6a2ad184.jpg
First Published 20, Oct 2018, 3:47 PM IST
Europe, Japan Send Spacecraft To Study Planet Mercury
Highlights

ಬುಧ ಗ್ರಹದ ಅಧ್ಯಯನಕ್ಕೆ ಮುಂದಾದ ಜಪಾನ್! ಜಪಾನ್‌ನ ಅಂತರೀಕ್ಷಯಾನ ಪರಿಶೋಧನಾ ಸಂಸ್ಥೆ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ! ಜಂಟಿ ಸಹಭಾಗಿತ್ವದಲ್ಲಿ ಬುಧ ಗ್ರಹದ ಅಧ್ಯಯನಕ್ಕೆ ಮುಂದಾದ ಸಂಸ್ಥೆಗಳು! 2025ರಲ್ಲಿ ಬೆಪಿ ಕೋಲಂಬೋ ನೌಕೆ ಬುಧ ಗ್ರಹದ ಅಂಗಳಕ್ಕೆ ಇಳಿಯಲಿದೆ! ಬುಧ ಗ್ರಹದ ಅತೀಯಾದ ತಾಪಮಾನ ತಡೆದುಕೊಳ್ಳಬಲ್ಲ ಸಾಮರ್ಥ್ಯ

ಫ್ರೆಂಚ್ ಗಯಾನಾ(ಅ.20): ನಮ್ಮ ಸೌರಮಂಡಲದ ಅತ್ಯಂತ ನಿರ್ಲ್ಯಕ್ಷಿತ ಗ್ರಹ ಎಂದರೆ ಅದು ಬುಧ ಗ್ರಹ. ಅದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವುದೇ ಈ ನಿರ್ಲ್ಯಕ್ಷಕ್ಕೆ ಕಾರಣ. 

ವಿಶ್ವದ ಸರ್ವಶ್ರೇಷ್ಠ ಖಗೋಳ ಸಂಸ್ಥೆಗಳೆಲ್ಲಾ ಕೇವಲ ಸೌರಮಂಡಲದ ಆಚೆಗಿನ ಅಂದರೆ ಭೂಮಿಯ ನಂತರದ ಗ್ರಹಗಳತ್ತಲೇ ತಮ್ಮ ಚಿತ್ತ ಹರಿಸಿವಿವೇ ಹೊರತು, ಸೌರಮಂಡಲದ ಒಳಗಿನ ಅಂದರೆ ಭುಮಿಗಿಂತಲೂ ಮೊದಲು ಬರುವ ಗ್ರಹಗಳಾದ ಬುಧ ಮತ್ತು ಶುಕ್ರಗ್ರಹಗಳತ್ತ ಅವುಗಳ ಆಸಕ್ತಿ ಕಡಿಮೆ.

ಆದರೆ ಜಪಾನ್ ಇದೀಗ ಬುಧ ಗ್ರಹದತ್ತ ದೃಷ್ಟಿ ನೆಟ್ಟಿದ್ದು, ಸೂರ್ಯನ ಅತ್ಯಂತ ಸಮೀಪದ ಗ್ರಹದ ಕಕ್ಷೆಗೆ ನೌಕೆಯೊಂದನ್ನು ಕಳುಹಿಸಿದೆ. ಜಪಾನ್‌ನ ಅಂತರಿಕ್ಷಯಾನ ಪರಿಶೋಧನಾ ಸಂಸ್ಥೆ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಬುಧ ಗ್ರಹದ ಅಧ್ಯಯನಕ್ಕೆ ಮುಂದಾಗಿವೆ.

ಫ್ರಾನ್ಸ್‌ನ ಫ್ರೆಂಚ್ ಗಯಾನಾ ವಾಯುನೆಲೆಯಿಂದ ಒಟ್ಟು ಎರಡು ನೌಕೆಗಳನ್ನು ಹೊತ್ತ ರಾಕೆಟ್ ಯಶಶ್ವಿಯಾಗಿ ನಭಕ್ಕೆ ಚಿಮ್ಮಿತು. ಈ ನೌಕೆಗೆ ಇಟಲಿಯ ಪ್ರಸಿದ್ಧ ಖಗೋಳ ವಿಜ್ಞಾನಿ ಬೆಪಿ ಕೋಲಂಬೋ ಅವರ ಹೆಸರಿಡಲಾಗಿದೆ.

ಸತತ ಏಳು ವರ್ಷಗಳ ಕಾಲ ಬುಧ ಗ್ರಹದ ಕಕ್ಷೆಯಲ್ಲಿ ಸುತ್ತಲಿರು ಬೆಪಿ ಕೋಲಂಬೋ ನೌಕೆ, ಅಲ್ಲಿನ ಅತೀಯಾದ ತಾಪಮಾನ, ಸೂರ್ಯನ ಗುರುತ್ವಾಕರ್ಷಣೆಯ ಪರಿಣಾಮದಿಂದಾಗಿ ಬುಧ ಗ್ರಹದ ವಾತಾವರಣ ಮೇಲಾಗಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಎರಡೂ ಸಂಸ್ಥೆಗಳ ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

2025ರಲ್ಲಿ ಬೆಪಿ ಕೋಲಂಬೋ ನೌಕೆ ಬುಧ ಗ್ರಹಕ್ಕೆ ಸಮೀಪ ತಲುಪಲಿದ್ದು, ಅದಕ್ಕೂ ಮೊದಲು ಭೂಮಿ, ಶುಕ್ರ ಮತ್ತು ಬುಧ ಗ್ರಹಗಳನ್ನು ಹಲವು ಬಾರಿ ಸುತ್ತು ಹೊಡೆಯಲಿದೆ. ಬುಧ ಗ್ರಹಕ್ಕೆ ತಲುಪಿದ ಬಳಿಕ ನೌಕೆಯಲ್ಲಿರುವ ಬೆಪಿ ಮತ್ತು ಮಿಯೋ ಎಂಬ ಎರಡು ಪುಟ್ಟ ನೌಕೆಗಳು ಬುಧ ಗ್ರಹದ ನೆಲ ಸ್ಪರ್ಶಿಸಲಿದ್ದು, ಇವು ಗ್ರಹದ ಮೇಲ್ಮೈ ಮತ್ತು ಅದರ ಆಯಸ್ಕಾಂತೀಯ ವಲಯದ ಕುರಿತು ಅಧ್ಯಯನ ನಡೆಸಲಿವೆ.

ಬೆಪಿ ಮತ್ತು ಮಿಯೋ ನೌಕೆಗಳು ಸೂರ್ಯನತ್ತ ಮುಖ ಮಾಡಿರುವ ಬುಧ ಗ್ರಹದ ಭಾಗದಲ್ಲಿರುವ 430 ಡಿಗ್ರಿ ಸೆಲ್ಸಿಯಸ್ ಮತ್ತು ಸೂರ್ಯನ ವಿರುದ್ಧ ದಿಕ್ಕಿನಲ್ಲಿರುವ ಭಾಗದ 180 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಈ ಯೋಜನೆಗೆ  ಜಪಾನ್ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ 1.3 ಬಿಲಿಯನ್ ಯುರೋ ಹಣ ಖರ್ಚು ಮಾಡಿವೆ ಎನ್ನಲಾಗಿದೆ.

loader