ವಾಷಿಂಗ್ಟನ್(ಜೂ.15): 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಿರುವ ಕ್ಷುದ್ರಗ್ರಹ ಬೆನ್ನುವಿನ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ತನ್ನ OSIRIS-REx ನೌಕೆಯನ್ನು ಕಳುಹಿಸುವ ಮೂಲಕ ಇತಿಹಾಸ ಬರೆದಿದೆ.

ಬೆನ್ನು ಕ್ಷುದ್ರಗ್ರಹದ ಮೇಲೆ ಇಳಿಯುವ ಮೂಲಕ ಕ್ಷುದ್ರಗ್ರಹದ ಮೇಲೆ ಇಳಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ OSIRIS-REx ನೌಕೆ, ಬೆನ್ನು ಕ್ಷುದ್ರಗ್ರಹದ ಕೇಂದ್ರ ಭಾಗದಿಂದ ಕೇವಲ 2,231 ಅಡಿ ಎತ್ತರದಲ್ಲಿದೆ.

ಬೆನ್ನು ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ಹೋಗಿರುವ OSIRIS-REx ನೌಕೆ, ಕೇಂದ್ರ ಭಾಗದಿಂದ ಕೇವಲ 2,231 ಅಡಿ ಎತ್ತರದಲ್ಲಿ ಕ್ಷುದ್ರಗ್ರಹವನ್ನು ಸುತ್ತುತ್ತಿದೆ ಎಂದು ನಾಸಾ ತಿಳಿಸಿದೆ.

ಸೌರಮಂಡಲದ ಹೊರಗಿನ ಕ್ಷುದ್ರಗ್ರಹವಾದ ಬೆನ್ನು, ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಇದೇ ಪಥದಲ್ಲಿ ಚಲಿಸಿದರೆ ಮುಂದಿನ 200 ವರ್ಷಗಳಲ್ಲಿ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.