ಬೆನ್ನು ಮಿಶನ್: ಈ ಹೊತ್ತಲ್ಲಿ ನಾಸಾ ಬೆನ್ನು ತಿರುಗಿಸುವಂತಿಲ್ಲ!

ಬೆನ್ನು ಕ್ಷುದ್ರಗ್ರಹ ಬೆನ್ನು ಬಿದ್ದಿರುವ ನಾಸಾದ OSIRIS-REx  ನೌಕೆ| ಬೆನ್ನು ಅಂಗಳದಿಂದ ಸ್ಯಾಂಪಲ್ ಸಂಗ್ರಹಿಸಲಿದೆ OSIRIS-REx  ನೌಕೆ| ಬೆನ್ನು ಪಥ ಬದಲಾವಣೆಯಿಂದಾಗಿ ಭೂಮಿಗೆ ಅಪ್ಪಳಿಸುವ ಭೀತಿ| TAGSAM ತಂತ್ರಜ್ಞಾನದ ಸಹಾಯದಿಂದ ಬೆನ್ನು ಸ್ಯಾಂಪಲ್ ಸಂಗ್ರಹ|

How NASA OSIRIS-REx Mission Visiting Asteroid Bennu

ವಾಷಿಗ್ಟನ್(ಫೆ.22): ಅಪರೂಪದ ಅತಿಥಿ ಬೆನ್ನು ಕ್ಷುದ್ರಗ್ರಹವನ್ನು ಬೆನ್ನತ್ತಿರುವ ನಾಸಾದ OSIRIS-REx ನೌಕೆ, ಕ್ಷುದ್ರಗ್ರಹದ ಅತ್ಯಂತ ಸಮೀಪದಲ್ಲಿದೆ.

ಈಗಾಗಲೇ ಬೆನ್ನುವಿನ ಹತ್ತಿರದ ಫೋಟೋಗಳನ್ನು ಕಳುಹಿಸಿರುವ OSIRIS-REx  ನೌಕೆ, ಕೆಲವೇ ದಿನಗಳಲ್ಲಿ ಬೆನ್ನು ಅಂಗಳದಿಂದ ತುಣುಕೊಂದನ್ನು ಕದಿಯಲಿದೆ.

ಈ ಮಧ್ಯೆ ಸೂರ್ಯನ ಗುರುತ್ವಾಕರ್ಷಣೆಯಿಂದಾಗಿ ಬೆನ್ನುವಿನ ಪಥ ನಿಧಾನಗತಿಯಲ್ಲಿ ಬದಲಾಗಲಿದ್ದು, ಭೂಮಿಗೆ ಅಪ್ಪಳಿಸುವ ಭೀತಿ ಕೂಡ ಇದೆ ಎಂಬುದು ನಾಸಾ ತಜ್ಞರ ಅಂಬೋಣ.

ಈ ನಿಟ್ಟಿನಲ್ಲಿ ಬೆನ್ನು ಅಂಗಳದಿಂದ ಸ್ಯಾಂಪಲ್ ಸಂಗ್ರಹಿಸಿ ಅದರ ಅಧ್ಯಯನ ನಡೆಸುವುದು ನಾಸಾದ ಗುರಿಯಾಗಿದೆ. OSIRIS-REx ನೌಕೆ ಸ್ಯಾಂಪಲ್ ಸಂಗ್ರಹಿಸಲಿದ್ದು, ಕ್ಷುದ್ರಗ್ರಹದ ಅಂಗಳ ತಲುಪಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಲಿದೆ.

How NASA OSIRIS-REx Mission Visiting Asteroid Bennu

ಏನಿದು TAGSAM?:

ಬೆನ್ನು ಅಂಗಳ ತಲುಪುವುದಕ್ಕೂ ಮೊದಲು OSIRIS-REx  ನೌಕೆ ಕ್ಷುದ್ರಗ್ರಹದ ಮ್ಯಾಪಿಂಗ್ ಮಾಡಲಿದ್ದು, ಅದರ ಆಕಾರ, ಗಾತ್ರ, ಗುರುತ್ವ ಬಲದ ಕುರಿತು ಅಧ್ಯಯನ ನಡೆಸಲಿದೆ. ಅಲ್ಲದೇ ಬೆನ್ನುವಿನ ಅತೀ ಹತ್ತಿರದ ಫೋಟೋಗಳನ್ನು ಕ್ಲಿಕ್ಕಿಸಲಿದೆ.

ನಂತರ ಟಚ್ ಆ್ಯಂಡ್ ಗೋ ಸ್ಯಾಂಪಲ್ ಅಕ್ವಿಸೇಶನ್ ಮೆಕಾನಿಸಂ  ತಂತ್ರಜ್ಞಾನದ ಸಹಾಯದಿಂದ ಬೆನ್ನುವಿನ ಸ್ಯಾಂಪಲ್ ನ್ನು ಸಂಗ್ರಹಿಸಲಿದೆ ನಾಸಾದ OSIRIS-REx ನೌಕೆ.

How NASA OSIRIS-REx Mission Visiting Asteroid Bennu

ಕ್ಷುದ್ರಗ್ರಹದ ಅಂಗಳವನ್ನು ತಲುಪುತ್ತಿದ್ದಂತೇ OSIRIS-REx ನೌಕೆಯ  TAGSAM ಅಪ್ಪಳಿಸಿ ಕ್ಷಣಾರ್ಧದಲ್ಲಿ ಅಲ್ಲಿನ ಸ್ಯಾಂಪಲ್ ಸಂಗ್ರಹಿಸಲಿದೆ. ಅಲ್ಲದೇ ಈ ಸ್ಯಾಂಪಲ್ ನ್ನು ಭೂಮಿಗೆ ರವಾನಿಸಲಿದೆ.

 

ಈ ಸುದ್ದಿಗಳನ್ನೂ ಓದಿ-

ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!

ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!

 

Latest Videos
Follow Us:
Download App:
  • android
  • ios