ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!

https://static.asianetnews.com/images/authors/7d06288b-fbfa-5ff6-bfcf-f2ff6a2ad184.jpg
First Published 5, Dec 2018, 2:55 PM IST
NASA Behind Asteroid That May Hit Earth 200 Years Later
Highlights

ಭೂಮಿಗೆ ಅಪ್ಪಳಿಸಲಿರುವ ‘ಬೆನ್ನು’ಗೆ ಚೂರಿ ಇರಿಯುತ್ತಾ ನಾಸಾ?! ‘ಬೆನ್ನು’ ಬೆನ್ನು ಬಿದ್ದಿದೆ ನಾಸಾದ OSIRIS-REx ನೌಕೆ! 200 ವರ್ಷಗಳ ಬಳಿಕ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ! ಕ್ಷುದ್ರಗ್ರಹದ ತುಂಡೊಂದನ್ನು ಸಂಗ್ರಹಿಸುವ ನಿರೀಕ್ಷೆಯಲ್ಲಿ OSIRIS-REx ನೌಕೆ! ಬೆನ್ನು ಪಥ ಬದಲಿಸುವಲ್ಲಿ ನಾಸಾ ಸಫಲವಾಗುತ್ತಾ?

ವಾಷಿಂಗ್ಟನ್(ಡಿ.05): ಬ್ರಹ್ಮಾಂಡ ದೇವರ ಸೃಷ್ಟಿ ಎನ್ನುತ್ತವೆ ಧರ್ಮ ಗ್ರಂಥಗಳು. ಅಲ್ಲ, ಅದು ಸೃಷ್ಟಿಯ ಮೂಲ ಎನ್ನುತ್ತೆ ವಿಜ್ಞಾನ. ಆಧ್ಯಾತ್ಮ ಮತ್ತು ವಿಜ್ಞಾನದ ನಡುವಿನ ಈ ಸಮರದಲ್ಲಿ ಜಯ ಯಾರಿಗೆ ಸಿಗಲಿ, ಮಾನವ ಜನಾಂಗ ಇದುವರೆಗೂ ತಿಳಿಯದ ಅದ್ಭುತ ಜ್ಞಾನ ಜಗತ್ತೊಂದು ಮಾತ್ರ ಬಳುವಳಿಯಾಗಿ ಬರುವುದು ಖಚಿತ.

ಅದರಂತೆ ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ವಿಜ್ಞಾನ, ಕ್ಷಣಕ್ಷಣಕ್ಕೊಂದು ಕುತೂಹಲಕಾರಿ ಮಾಹಿತಿಯನ್ನು ಹೊತ್ತು ತರುತ್ತದೆ. ದಿಗಂತದಲ್ಲಿ ಏನೆನಿದೆ ಎಂಬುದರ ಕುರಿತಾದ ಕುತೂಹಲ ಹೊಸ ಹೊಸ ಆವಿಷ್ಕಾರಗಳಿಗೆ ಮೂಲವಾಗಿದೆ.

OSIRIS-REx ಎಂಬ ನಾಸಾದ ಬಾಹ್ಯಾಕಾಶ ನೌಕೆ ಸೌರ ಮಂಡಲದ ಅಧ್ಯಯನದಲ್ಲಿ ನಿರತವಾಗಿ ಎರಡು ವರ್ಷ ಗತಿಸಿದೆ. ಈ ವೇಳೆ ಸುಮರು 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವ ಕ್ಷುದ್ರಗ್ರಹವೊಂದನ್ನು OSIRIS-REx ನೌಕೆ ಪತ್ತೆ ಹಚ್ಚಿದೆ.

ಹೌದು, ‘ಬೆನ್ನು’ ಎಂಬ ಕ್ಷುದ್ರಗ್ರಹ ಭೂಮಿಯ ಪಥದಲ್ಲಿ ಚಲಿಸುತ್ತಿದ್ದು, ಇದೇ ಹಾದಿಯಲ್ಲಿ ಇದೇ ವೇಗದಲ್ಲಿ ಕ್ರಮಿಸಿದರೆ ಸುಮಾರು 200 ವರ್ಷಗಳ ಬಳಿಕ ಬೆನ್ನು ಭೂಮಿಗೆ ಅಪ್ಪಳಿಸಲಿದೆ ಎಂದಿ ನಾಸಾ ತಿಳಿಸಿದೆ.

OSIRIS-REx ನೌಕೆ ಸದ್ಯ ಬೆನ್ನು ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ಹೋಗಿದ್ದು, ಕ್ಷುದ್ರಗ್ರಹದ ತುಂಡೊಂದನ್ನು ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. OSIRIS-REx  ನೌಕೆ ಬೆನ್ನು ಕ್ಷುದ್ರಗ್ರಹದಿಂದ ಕೇವಲ 12 ಮೈಲು ದೂರದಲ್ಲಿದ್ದು, ಇದು ವೈಟ್ ಹೌಸ್ ನಿಂದ OSIRIS-REx ನೌಕೆ ನಿಯಂತ್ರಣ ಕೊಠಡಿ ಇರುವ ಗೊಡ್ಡಾರ್ಡ್ ಸ್ಪೇಸ್ ಸೆಂಟರ್ ನಡುವಿನ ದೂರಕ್ಕೆ ಸಮನಾಗಿದೆ.

ಇನ್ನು ಬೆನ್ನು ಕ್ಷುದ್ರಗ್ರಹ ಭೂಮಿಯತ್ತಲೇ ಧಾವಿಸುತ್ತಿದ್ದು, ಇದರ ತುಂಡೊಂದನ್ನು ಸಂಗ್ರಹಿಸಿ ಅಧ್ಯಯನ ನಡೆಸಿದ ಬಳಿಕ ಇದರ ಪಥ ಬದಲಿಸುವ ಸಾಧ್ಯತೆ ಕುರಿತು ನಾಸಾ ಚಿಂತನೆ ನಡೆಸಿದೆ ಎನ್ನಲಾಗಿದೆ. 

loader