ಯೂರೋಪಾದಲ್ಲಿ ವಾಟರ್ ವೇಪರ್ ಅನ್ವೇಷಣೆ : ನಾಸಿದಿಂದ ಜುಪಿಟರ್ ಜಗತ್ತಿನ ಸತ್ಯ ಘೋಷಣೆ!
ಗುರು ಗ್ರಹದ ಉಪಗ್ರಹದಲ್ಲಿ ವಾಟರ್ ವೇಪರ್ ಪತ್ತೆ ಹಚ್ಚಿದ ನಾಸಾ| ಯೂರೋಪಾ ಅಂತರಾಳದಲ್ಲಿದೆ ವಿಶಾಲ ಸಮುದ್ರ| ‘ಭೂಮಿಯ ಮೇಲಿರುವ ಒಟ್ಟು ನೀರಿನ ಪ್ರಮಾಣದ ಎರಡು ಪಟ್ಟು ನೀರು’| ಯೂರೋಪಾದ ಉಪ್ಪು ನೀರಿನ ಸರೋವರದ ಅಡಿಯಲ್ಲಿ ಜೀವ ಜಗತ್ತು?| ಯೂರೋಪಾ ಅಧ್ಯಯನಕ್ಕೆ 2025ರಲ್ಲಿ ನಾಸಾದಿಂದ ಕ್ಲಿಪ್ಪರ್ ಮಿಶನ್|
ವಾಷಿಂಗ್ಟನ್(ನ.21): ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಗುರುವಿನ ಉಪಗ್ರಹವಾದ ಯೂರೋಪಾದಲ್ಲಿ ನೀರಿನಂಶ ಪತ್ತೆ ಮಾಡಿದೆ.
ಇದೇ ಮೊದಲ ಬಾರಿಗೆ ಯೂರೋಪಾದಲ್ಲಿ ವಾಟರ್ ವೇಪರ್ ಅಂಶ ಪತ್ತೆಯಾಗಿದ್ದು, ಗ್ರಹದ ಆಂತರ್ಯದಲ್ಲಿ ಅಗಾಧ ಪ್ರಮಾಣದ ನೀರು ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನಾಸಾ ಹೊರಗೆಡವಿದ ಚಂದ್ರನ ಕಲ್ಲು: ನೋಡಿದರೆ ಕಚ್ಚುವಿರಿ ಹಲ್ಲು!
ಯೂರೋಪಾದಲ್ಲಿ ಭೂಮಿಯ ಮೇಲಿರುವ ಒಟ್ಟು ನೀರಿನ ಪ್ರಮಾಣದ ಎರಡು ಪಟ್ಟು ನೀರು ಇರುವ ಸಾಧ್ಯತೆ ಇದ್ದು, ನೀರಿನ ಆಳದಲ್ಲಿ ಜೀವಿಗಳಿರುವ ಸಾಧ್ಯೆತೆಯೂ ದಟ್ಟವಾಗಿದೆ ಎಂದು ನಾಸಾ ಹೇಳಿದೆ.
ಯೂರೋಪಾದ ಉಪ್ಪು ನೀರಿನ ಸರೋವರದ ಅಡಿಯಲ್ಲಿ ಜೀವಿಗಳ ಉಗಮಕ್ಕೆ ಬೇಕಾದ ಅಗತ್ಯ ಪರಿಸರವಿದ್ದು, ಈಗಾಗಲೇ ಸೂಕ್ಷ್ಮಾಣು ಜೀವಿಗಳಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ನಾಸಾ ಹೇಳಿದೆ.
ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?
ಸಾಗರದಾಳದಲ್ಲಿ ಜ್ವಾಲಾಮುಖಿ ಚಟುವಟಿಕೆ ಕೂಡ ಕಂಡು ಬಂದಿದ್ದು, ಇದು ಜೀವಿಗಳ ಉಗಮದ ಹಂತದ ಭೂಮಿಯ ಪರಿಸ್ಥಿತಿಯನ್ನು ಹೋಲುತ್ತದೆ ಎಂದು ನಾಸಾ ತಿಳಿಸಿದೆ.
ಗುರುಗ್ರಹದ ನೈಸರ್ಗಿಕ ಉಪಗ್ರಹವಾದ ಯೂರೋಪಾದತ್ತ 2025 ನಾಸಾ ಕ್ಲಿಪ್ಪರ್ ನೌಕೆಯನ್ನು ಕಳುಹಿಸಲಿದ್ದು, ಉಪಗ್ರಹದ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಲಿದೆ.
ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?