ನ್ಯೂಯಾರ್ಕ್(ನ.22): ಮಂಗಳ ಗ್ರಹದ ಇಂಚಿಂಚು ನೆಲ ಸಂಶೋಧಿಸುತ್ತಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಅಂಗಾರಕ ಜೀವಿಗಳ ಆವಾಸ ಸ್ಥಾನ ಎಂಬುದನ್ನು ಸಾಬೀತುಪಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಕ್ಯೂರಿಯಾಸಿಟಿ ರೋವರ್ ಕಳುಹಿಸಿರುವ ಹೊಸ ಫೋಟೋಗಳಲ್ಲಿ ಕ್ರಿಮಿ ಕೀಟಗಳ ಇರುವಿಕೆಯ ಕುರುಹು ಪತ್ತೆಯಾಗಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಓಹಿಯೋ ವಿವಿಯ ಸಂಶೋಧಕ ವಿಲಿಯಮ್ ರೋಮೋಸರ್, ಜೀವಂತ ಅಥವಾ ನಶಿಸಿರುವ ಕ್ರಿಮಿ ಕೀಟಗಳು ಮಂಗಳ ಗ್ರಹದ ಮೇಲ್ಮೈ ಮೇಲೆ ಕಂಡು ಬಂದಿವೆ ಎಂದು ಹೇಳಿದ್ದಾರೆ. 

ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

ಜೇನು ಹುಳುವಿನ ಹೋಲಿಕೆ ಇರುವ ಕೀಟದ ಪಳಿಯುಳಿಕೆ, ಹಲ್ಲಿಯಾಕಾರದ ಉರಗವನ್ನು ಹೋಲುವ ಪಳಿಯುಳಿಕೆಗಳು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ರೋಮೋಸರ್ ಹೇಳಿದ್ದಾರೆ.

 

ರೋವರ್’ನಲ್ಲಿ ಫೋಟೋಗಳಲ್ಲಿ ಸೆರೆಯಾಗಿರುವ ಕ್ರಿಮಿ ಕೀಟಗಳಿಗೆ ಹಾರಲು ಸಾಧ್ಯವಾಗುವಂತಹ ರೆಕ್ಕೆ ಹಾಗೂ ಕಾಲುಗಳಿವೆ ಎಂಬುದು ಸಂಶೋಧನೆಯಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ.

ಕೆಂಪು ಗ್ರಹದಲ್ಲಿ ಖಂಡಿತವಾಗಿ ಜೀವ ಇದೆ ಎಂದು ಹೇಳಿರುವ ರೋಸೋಮರ್, ಜೀವಿಗಳು ಇದೆ ಎಂದಾದ ಮೇಲೆ ಆಹಾರ ಸರಪಳಿ, ನೀರು ಮುಂತಾದ ಜೀವ ಪೋಷಕ ಅಂಶಗಳೂ ಇರಲೇಬೇಕು ಎಂದು ರೋಸೋಮರ್ ವಾದ ಮಂಡಿಸಿದ್ದಾರೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ಆಮ್ಲಜನಕ ಪ್ರಮಾಣ ಏರಿಕೆ:

ಇದೇ ವೇಳೆ ಮಂಗಳ ಗ್ರಹದಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ ಎಂದು ನಾಸಾ ಘೋಷಿಸಿದೆ. ಮಂಗಳನ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ನಾಸಾ ಹೇಳಿದೆ.

ಕಳೆದ 6 ವರ್ಷದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಇದು ಕೂಡ ಜೀವಿಗಳ ಅಸ್ತಿತ್ವದ ಕುರುತಾದ ನಂಬಿಕೆಗೆ ಬಲ ನೀಡಿದೆ.