Asianet Suvarna News Asianet Suvarna News

IGUS Virtual Exhibition: ಐಗಸ್‌ನಿಂದ ಭಾರತದಲ್ಲಿ ವರ್ಚುವಲ್‌ ಶೋ ಬೂತ್‌!

ಮೋಷನ್‌ ಪ್ಲಾಸ್ಟಿಕ್‌ ವ್ಯಾಪಾರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾದ ಐಗಸ್‌ (Igus) ಇದೀಗ ಭಾರತದಲ್ಲಿ ತನ್ನ ಉತ್ಪನ್ನಗಳೊಂದಿಗೆ ‘ವರ್ಚುವಲ್‌ ಶೋ ಬೂತ್‌’ ಆರಂಭಿಸಿದೆ

motion products  Company IGUS interactive virtual exhibition mnj
Author
Bengaluru, First Published Jan 27, 2022, 10:33 AM IST

ಬೆಂಗಳೂರು (ಜ. 27): ಮೋಷನ್‌ ಪ್ಲಾಸ್ಟಿಕ್‌ ವ್ಯಾಪಾರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾದ ಐಗಸ್‌ (Igus) ಇದೀಗ ಭಾರತದಲ್ಲಿ ತನ್ನ ಉತ್ಪನ್ನಗಳೊಂದಿಗೆ ‘ವರ್ಚುವಲ್‌ ಶೋ ಬೂತ್‌’ (Virtual Show Booth) ಆರಂಭಿಸಿದೆ. ಐಗಸ್‌ ಭಾರತದ ಪ್ರಧಾನ ಕಚೇರಿಯನ್ನು ಬೆಂಗಳೂರಿನಲ್ಲಿ (Bengaluru) ಹೊಂದಿದೆ. ಕಳೆದ ಏಳು ತಿಂಗಳಲ್ಲಿ 180ಕ್ಕೂ ಹೆಚ್ಚು ನವೀನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದೀಗ ತನ್ನ ಡಿಜಿಟಲ್‌ ಆವಿಷ್ಕಾರಗಳ ವ್ಯಾಪಾರ ಪ್ರದರ್ಶನ ‘ಬೂತ್‌’ ಅನ್ನು ಪ್ರಾರಂಭಿಸಿದೆ. 

ಐಗಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಪಾಲ್‌ ಮಾತನಾಡಿ, ಐಗಸ್‌ನಲ್ಲಿ ಪರಿಚಯಿಸಿರುವ ಈ ವರ್ಚುವಲ್‌ ಪ್ರದರ್ಶನದಲ್ಲಿ ಗ್ರಾಹಕರು ಸಂಸ್ಥೆಯ ಹೊಸ ಉತ್ಪನ್ನಗಳು, ಸೇವಾ ಕೊಡುಗೆಗಳನ್ನು ನೋಡಬಹುದು. ಹಾಗೆಯೇ ಪ್ರದರ್ಶನದಿಂದ ದೊರೆತ ಅನುಭವವನ್ನು ಹಂಚಿಕೊಳ್ಳಬಹುದು. ವರ್ಚುವಲ್‌ ಸವೀರ್‍ಸ್‌ ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ https://www.igus.in/info/virtual-visitಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಈ ವರ್ಷ, ನಾವು ನಮ್ಮ ಹೊಸ ಉತ್ಪನ್ನಗಳನ್ನು 400 m² ಟ್ರೇಡ್ ಶೋ ಸ್ಟ್ಯಾಂಡ್‌ನಲ್ಲಿ ಪ್ರಸ್ತುತಪಡಿಸುತ್ತೇವೆ, ನೀವು ಬಯಸಿದಾಗ ಇಲ್ಲಿ ವರ್ಚುವಲ್ ಭೇಟಿ ನೀಡಬಹುದು. ಲೋಕೇಶನ್‌ ಮ್ಯಾಪ್  ಮೂಲಕ ಬಯಸಿದ ಪ್ರದೇಶಕ್ಕೆ ಸರಳವಾಗಿ ನ್ಯಾವಿಗೇಟ್ ಮಾಡಿ ಮತ್ತು ಮೌಸ್ ಕ್ಲಿಕ್‌ನಲ್ಲಿ ಹೊಸ ಉತ್ಪನ್ನಗಳನ್ನು ತಿಳಿದುಕೊಳ್ಳಿ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.  ವರ್ಚುವಲ್ ಸ್ಟ್ಯಾಂಡ್ ಸಂವಾದಾತ್ಮಕವಾಗಿದ್ದು  ರೊಬೊಟಿಕ್ಸ್, ವಸ್ತು ನಿರ್ವಹಣೆ, ಕೃಷಿ ಸೇರಿದಂತೆ ಅನೇಕ ಕೈಗಾರಿಕೆಗಳಿಗೆ ಘಟಕಗಳ ಶ್ರೇಣಿಯನ್ನು ಹೊಂದಿದೆ.

ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್: ಸೋಷಿಯಲ್ ಮೀಡಿಯಾ ದೈತ್ಯ  ಫೇಸ್‌ಬುಕ್‌ (Faceboo)ನ ಮೂಲ ಕಂಪನಿಯಾಗಿರುವ ಮೆಟಾ (Meta) ವರ್ಚುವಲ್ ಮೆಟಾವರ್ಸ್ ನಿರ್ಮಿಸುವ ಯೋಜನೆಗಳ  ಭಾಗವಾಗಿ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ನಿರ್ಮಿಸಲಿದೆ ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zukerberg) ಘೋಷಿಸಿದ್ದಾರೆ. ಗೌಪ್ಯತೆ ಮತ್ತು ತಪ್ಪು ಮಾಹಿತಿಯ ಮೇಲಿನ ನಿರಂತರ ವಿವಾದಗಳ ಹೊರತಾಗಿಯೂ, ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವನ್ನು ಈ ಕಂಪ್ಯೂಟರ್ ಇದು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿ  ಮೂಲಕ ಭೌತಿಕ ಮತ್ತು ಡಿಜಿಟಲ್ ಜಗತ್ತನ್ನು ಸಂಯೋಜಿಸುವ ಮೆಟಾವರ್ಸ್ ಪರಿಕಲ್ಪನೆಗೆ "ಅಗಾಧ" ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿರುತ್ತದೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದ್ದಾರೆ. ಜುಕರ್‌ಬರ್ಗ್‌ನ ಮೆಟಾ ವ್ಯವಹಾರದಿಂದ ಎಐ ರಿಸರ್ಚ್ ಸೂಪರ್‌ಕ್ಲಸ್ಟರ್ (RSC) ಎಂದು ಕರೆಯಲ್ಪಡುವ ಎಐ ಸೂಪರ್‌ಕಂಪ್ಯೂಟರ್ ಈಗಾಗಲೇ ವಿಶ್ವದ ಐದನೇ ವೇಗದ ಕಂಪ್ಯೂಟರ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಇದನ್ನೂ ಓದಿ: Google Pixel Watch: ಮೇನಲ್ಲಿ ಬಿಡುಗಡೆಯಾಗಲಿದೆ ಪಿಕ್ಸೆಲ್ ವಾಚ್, ಏನೆಲ್ಲ ವಿಶೇಷತೆ ಇದೆ?

ಮೆಟಾ (Meta) ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತನ್ನ ಹೊಸ AI ರಿಸರ್ಚ್ ಸೂಪರ್‌ಕ್ಲಸ್ಟರ್ (RSC) ಕಂಪನಿಯು ಉತ್ತಮ AI ಮಾದರಿಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಅದು ಟ್ರಿಲಿಯನ್‌ಗಟ್ಟಲೆ ಉದಾಹರಣೆಗಳಿಂದ ಕಲಿಯಬಹುದು, ನೂರಾರು ಭಾಷೆಗಳಲ್ಲಿ ಕೆಲಸ ಮಾಡಬಹುದು ಮತ್ತು ಪಠ್ಯ, ಚಿತ್ರಗಳು ಮತ್ತು ವೀಡಿಯೊವನ್ನು ಒಟ್ಟಿಗೆ ವಿಶ್ಲೇಷಿಸಿ ವಿಷಯವೇ ಎಂಬುದನ್ನು ನಿರ್ಧರಿಸಬಹುದು ವಿವರಿಸಿದೆ. "ಈ ಸಂಶೋಧನೆಯು ಇಂದು ನಮ್ಮ ಸೇವೆಗಳಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ, ಆದರೆ ಭವಿಷ್ಯದಲ್ಲಿ, ನಾವು ಮೆಟಾವರ್ಸ್‌ಗಾಗಿ ನಿರ್ಮಿಸುತ್ತೇವೆ" ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಇದೇ ವರ್ಷದ ಮಧ್ಯದ ಹೊತ್ತಿಗೆ ಈ ಕಂಪ್ಯೂಟರ್ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಆಗ  ಅದು ವಿಶ್ವದಲ್ಲೇ ಅತ್ಯಂತ ಸೂಪರ್ ಕಂಪ್ಯೂಟರ್ ಆಗಿರುತ್ತದೆ ಎಂದು ಫೇಸ್‌ಬುಕ್ ಹೇಳಿದೆ.

Follow Us:
Download App:
  • android
  • ios