ಶೇ.100ರಷ್ಟು ವಿದ್ಯುತ್‌ ಚಾಲಿತ ವಾಹನಕ್ಕೆ ಗುರಿ: ಸಚಿವ ಅಶ್ವತ್ಥನಾರಾಯಣ

ವಾಹನಗಳ ಮಾಲಿನ್ಯ ಹೊರ ಸೂಸುವಿಕೆ ತಗ್ಗಿಸಲು ಇ-ವಾಹನಗಳ ಬಳಕೆ ಹಾಗೂ ಅವುಗಳ ತಯಾರಿಕೆ ಪ್ರಮಾಣ ಹೆಚ್ಚಾಗಬೇಕು. ಇದಕ್ಕೆ ಪೂರಕವಾದ ಉದ್ಯಮ ಪರ್ಯಾವರಣ ಬೆಂಗಳೂರಿನಲ್ಲಿದೆ: ಸಿ.ಎನ್‌.ಅಶ್ವತ್ಥ ನಾರಾಯಣ 

Minister Ashwathnarayan Talks Over Electric Vehicle grg

ಬೆಂಗಳೂರು(ನ.20): ಕರ್ನಾಟಕ ಸರ್ಕಾರವು ಕೆಲವು ವಿಭಾಗಗಳ ವಾಹನಗಳನ್ನು ಶೇ 100 ರಷ್ಟುವಿದ್ಯುತ್‌ ಚಾಲಿತ ಮಾಡುವ ಗುರಿ ಹೊಂದಿದೆ. ಈ ಮೂಲಕ ‘ಸ್ವಚ್ಛ ಪರಿಸರ’ ನಿರ್ಮಾಣ ಸಾಧಿಸಲು ಉದ್ದೇಶಿಸಿದ್ದೇವೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಮೇಳ-2020ರಲ್ಲಿ ‘ಹಸಿರು ಪುನರ್‌ ಸೃಷ್ಟಿ ಮತ್ತು ಸುಸ್ಥಿರ ಭವಿಷ್ಯದಲ್ಲಿ ತಂತ್ರಜ್ಞಾನದ ಪಾತ್ರ’ ಕುರಿತು ಬ್ರಿಟನ್‌ ಹೈಕಮಿಷನರ್‌ (ಕರ್ನಾಟಕ- ಕೇರಳ ವಲಯ) ಜೆರೆಮಿ ಪಿಲ್ಮೋರ್‌ ಬೆಡ್‌ ಫೋರ್ಡ್‌ ಅವರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್ಸು, ಸರಕು ಸಾಗಣೆ.. ಹೀಗೆ ವಿವಿಧ ವಿಭಾಗಗಳ ವಾಹನಗಳಿವೆ. ಇವುಗಳಲ್ಲಿ ಕೆಲವು ವಿಭಾಗದ ವಾಹನಗಳನ್ನು ಸಂಪೂರ್ಣ ವಿದ್ಯುತ್‌ ಚಾಲಿತ ಮಾಡಿ, ಅವುಗಳನ್ನಷ್ಟೇ ಓಡಿಸುವ ಉದ್ದೇಶ ಇದೆ. ಆದರೆ ಇದಕ್ಕೆ ತಂತ್ರಜ್ಞಾನದ ಬೆಂಬಲ ಬೇಕಾಗಿದ್ದು ಈ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು ಎಂದು ಅಶ್ವತ್ಥ ನಾರಾಯಣ ಕರೆ ನೀಡಿದರು.

ಬೆಂಗಳೂರು ಟೆಕ್‌ ಸಮ್ಮಿಟ್‌-2020: ದೇಶದ ಡಿಜಿಟಲ್‌ ಕ್ರಾಂತಿಗೆ ಉಪಗ್ರಹಗಳ ನೆರವು

ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಿ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಸುವ ಗುರಿಯನ್ನೂ ರಾಜ್ಯ ಸರ್ಕಾರ ಹೊಂದಿದೆ. ಇದೇ ವೇಳೆ ವಾಹನಗಳ ಮಾಲಿನ್ಯ ಹೊರ ಸೂಸುವಿಕೆ ತಗ್ಗಿಸಲು ಇ-ವಾಹನಗಳ ಬಳಕೆ ಹಾಗೂ ಅವುಗಳ ತಯಾರಿಕೆ ಪ್ರಮಾಣ ಹೆಚ್ಚಾಗಬೇಕು. ಇದಕ್ಕೆ ಪೂರಕವಾದ ಉದ್ಯಮ ಪರ್ಯಾವರಣ ಬೆಂಗಳೂರಿನಲ್ಲಿದೆ. ಇದನ್ನು ಸಾಧಿಸಿ ಸ್ವಚ್ಛ ಪರಿಸರ ನಿರ್ಮಾಣ ಮಾಡುವ ಅನಿವಾರ್ಯತೆ ಇದೆ ಎಂದರು.
ಇದೇ ವೇಳೆ ಕ್ರಿಯೇಟಿವ್‌ ಟೆಕ್‌, ದತ್ತಾಂಶ ವಿಜ್ಞಾನ, ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ನಿಯಂತ್ರಕ ಸ್ಯಾಂಡ್‌ ಬಾಕ್ಸ್‌ ಕ್ಷೇತ್ರಗಳಲ್ಲಿ ಬ್ರಿಟನ್‌ ಜೊತೆ ಸೇರಿ ಕೆಲಸ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದರು.

ಶೂನ್ಯ ಮಾಲಿನ್ಯ ಗುರಿ- ಜೆರೆಮಿ ಬೆಡ್‌ಫೋರ್ಡ್‌:

ಇದೇ ವೇಳೆ ಮಾತನಾಡಿದ ಬ್ರಿಟನ್‌ ಹೈಕಮಿಷನರ್‌ ಜೆರೆಮಿ ಪಿಲ್ಮೋರ್‌ ಬೆಡ್‌ಫೋರ್ಡ್‌, ಬ್ರಿಟನ್‌ ಕಳೆದ 30 ವರ್ಷಗಳಲ್ಲಿ ಮಾಲಿನ್ಯ ಹೊರಸೂಸುವಿಕೆಯನ್ನು ಶೇ.45ರಷ್ಟುಕಡಿಮೆ ಮಾಡಿ ಶೇ.75ರಷ್ಟುಆರ್ಥಿಕ ಬೆಳವಣಿಗೆ ಸಾಧಿಸಿದೆ. 2050ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಗೆ ಗುರಿ ಹೊಂದಿದ್ದೇವೆ ಎಂದರು.

ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!

ನಮ್ಮ ದೇಶವು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಸಂಬಂಧಿಸಿದ ತಾಂತ್ರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ತಮ್ಮ ದೇಶವು 50 ದಿನಗಳ ಕಾಲ ನಿರಂತರವಾಗಿ ಕಲ್ಲಿದ್ದಲು ಮುಕ್ತ ವಿದ್ಯುತ್‌ ಪೂರೈಕೆಯಿಂದಲೇ ಎಲ್ಲವನ್ನೂ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇಂಧನ ಸಂಗ್ರಹ, ಸ್ಮಾರ್ಟ್‌ ಎಲೆಕ್ಟ್ರಿಸಿಟಿ ಗ್ರಿಡ್‌, ಶೂನ್ಯ-ಹೊರಸೂಸುವಿಕೆ ವಾಹನಗಳಿಗೆ ಸಂಬಂಧಿಸಿದಂತೆ ತಾಂತ್ರಿಕತೆ ಮುಖ್ಯವಾಗುತ್ತದೆ. ಸ್ವಚ್ಛ ಪರಿಸರ ತಾಂತ್ರಿಕ ಪರಿಹಾರಗಳಲ್ಲಿ ಬ್ರಿಟನ್‌ ಕಂಪನಿಗಳು ನಿರತವಾಗಿವೆ. ಇಂಗಾಲದ ಹೊರಸೂಸುವಿಕೆ ತಗ್ಗಿಸಿ ಜಗತ್ತಿನಲ್ಲಿ ಸುಸ್ಥಿರ ಬದುಕು ಉತ್ತೇಜಿಸುವುದು ಇವುಗಳ ಗುರಿ ಎಂದು ಜೆರೆಮಿ ಹೇಳಿದರು.
 

Latest Videos
Follow Us:
Download App:
  • android
  • ios