ಹೊಸ ಸಮೀಕ್ಷೆಯು ವ್ಯಾಪಾರ ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ Windows 11 ಅಳವಡಿಕೆ ಬಗ್ಗೆ ಬೆಳಕು ಚೆಲ್ಲಿದೆ. 

Windows 11: ಬಿಡುಗಡೆಯಾಗಿ ಆರು ತಿಂಗಳಾದರೂ ಮೈಕ್ರೋಸಾಫ್ಟ್ ವಿಂಡೋಸ್ 11 ಉಚಿತ ಅಪ್‌ಡೇಟ್‌ಗೆ ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿಯೊಂದು ತಿಳಿಸಿದೆ. ವಿಂಡೋಸ್ 11 ಮೈಕ್ರೋಸಾಫ್ಟ್‌ನ ವಿಂಡೋಸ್ NT ಆಪರೇಟಿಂಗ್ ಸಿಸ್ಟಮ್‌ನ ಪ್ರಮುಖ ಬಿಡುಗಡೆಯಾಗಿ ಅಕ್ಟೋಬರ್ 2021 ರಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಕಂಪನಿಯ ಹೊಸ ಆಪರೇಟಿಂಗ್ ಸಿಸ್ಟಮ್‌ಗಾಗಿ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ. ವ್ಯಾಪಾರ ಮತ್ತು ಗ್ರಾಹಕ ಕಂಪ್ಯೂಟರರ್‌ಗಳ ಮೇಲೆ ಕೇಂದ್ರೀಕರಿಸಿದ ವರದಿಯು ವಿಂಡೋಸ್ 11 ಸಮೀಕ್ಷೆ ಮಾಡಲಾದ ಎಲ್ಲಾ ಪಿಸಿಗಳಲ್ಲಿ ಶೇಕಡಾ 2 ಕ್ಕಿಂತ ಕಡಿಮೆ ಸಕ್ರಿಯವಾಗಿದೆ ಎಂದು ಹೇಳಿದೆ. 

ಅಲ್ಲದೆ ಹೊಸ ವಿಂಡೋಸ್ ಆವೃತ್ತಿಯು ಮೈಕ್ರೋಸಾಫ್ಟ್‌ನ ಜನಪ್ರಿಯ ವಿಂಡೋಸ್ ಎಕ್ಸ್‌ಪಿ (Windows XP)ಗಿಂತ ಕಡಿಮೆ ಸಿಸ್ಟಮ್‌ಗಳಲ್ಲಿ ಸಕ್ರಿಯವಾಗಿದೆ. ಐಟಿ ಆಸ್ತಿ ನಿರ್ವಹಣಾ ಕಂಪನಿಯಾದ ಲ್ಯಾನ್ಸ್‌ವೀಪರ್‌ನ (Lansweeper) ಇತ್ತೀಚಿನ ಸಮೀಕ್ಷೆಯಲ್ಲಿ ಈ ಡೇಟಾವನ್ನು ದಾಖಲಿಸಲಾಗಿದೆ, ಅದು ಜಗತ್ತಿನಾದ್ಯಂತ 10 ಮಿಲಿಯನ್ ಪಿಸಿಗಳನ್ನು ಮ್ಯಾಪ್ ಮಾಡುತ್ತದೆ. 

ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ವಿಂಡೋಸ್ 11 ಗಿಂತ ವಿಂಡೋಸ್ ಎಕ್ಸ್‌ಪಿ ಚಾಲನೆಯಲ್ಲಿರುವ ಹೆಚ್ಚಿನ ಪಿಸಿಗಳು ಇವೆ. ಸಮೀಕ್ಷೆ ಮಾಡಿದ ಶೇಕಡಾ 1.71 ರಷ್ಟು ಪಿಸಿಗಳಲ್ಲಿ ವಿಂಡೋಸ್ ಎಕ್ಸ್‌ಪಿ ಇರುವುದು ಕಂಡುಬಂದರೆ, ಕೇವಲ ಶೇಕಡಾ 1.44 ರಷ್ಟು ಮಾತ್ರ ವಿಂಡೋಸ್ 11 ಗೆ ಬದಲಾಯಿಸಿದ್ದಾರೆ ಎಂದು ಕಂಡುಹಿಡಿಯಲಾಗಿದೆ.‌

ಇದನ್ನೂ ಓದಿವೈಯಕ್ತಿಕ ಬಳಕೆ, ವಿದ್ಯಾರ್ಥಿಗಳಿಗಾಗಿ ₹45,000 ಒಳಗಿನ ಉತ್ತಮ ಲ್ಯಾಪ್‌ಟಾಪ್ಸ್‌

ಇನ್ನೂ ಹೆಚ್ಚು ಆಶ್ಚರ್ಯಕರ ಭಾಗವೆಂದರೆ ಹೆಚ್ಚಿನ ಸಿಸ್ಟಮ್‌ಗಳು ಇನ್ನೂ ವಿಂಡೋಸ್ 7 ಅಥವಾ ವಿಂಡೋಸ್ 8 ಅನ್ನು ಬಳಸುತ್ತವೆ, ಅವುಗಳ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 4.7 ಶೇಕಡಾ ಮತ್ತು 1.99 ಶೇಕಡಾ ಎಂದು ವರದಿ ತಿಳಿಸಿದೆ. 

ವಿಂಡೋಸ್ 10 ಬಳಕೆ ಹೆಚ್ಚು: ವಿಂಡೋಸ್‌ನಲ್ಲಿ ಚಾಲನೆಯಲ್ಲಿರುವ ಹೆಚ್ಚಿನ ವ್ಯಾಪಾರ ಪಿಸಿಗಳು ಇನ್ನೂ ವಿಂಡೋಸ್ 10 ಬಳಸುತ್ತವೆ ಎಂಬುದು ವರದಿಯಲ್ಲಿ ಬಹಿರಂಗೊಂಡಿದೆ. ಪ್ರಸ್ತುತ ವಿಂಡೋಸ್ ಚಾಲನೆಯಲ್ಲಿರುವ ಯಂತ್ರಗಳ ಸುಮಾರು 80.3 ಪ್ರತಿಶತ ವಿಂಡೋಸ್ 10 ಆವೃತ್ತಿ ಹೊಂದಿವೆ. ವಿಂಡೋಸ್ 10 ನಿಂದ ವಿಂಡೋಸ್ 11ಗೆ ಬದಲಾಯಿಸುವುದು ವ್ಯಾಪಾರಸ್ಥರಿಗೆ ದೊಡ್ಡ ಅನಿಸಬಹುದು. ಹೀಗಾಗಿ ವಿಂಡೋಸ್ 10 ನಿಂದ ವಿಂಡೋಸ್ 11ಗೆ ಬದಲಾಯಿಸುವುದು ಉಚಿತವಾಗಿದ್ದರೂ, ಹೆಚ್ಚಿನ ಬಳಕೆದಾರರೂ ಬದಲಾಯಿಸಿಲ್ಲ.

ಸಾಧನಗಳು ಹೊಂದಿಕೆಯಾಗುವುದಿಲ್ಲ: ಹೆಚ್ಚಿನ ಹಾರ್ಡ್‌ವೇರ್ ಅವಶ್ಯಕತೆ, ವಿಶೇಷವಾಗಿ ಅದರ ಹೊಸ ಭದ್ರತಾ ಪ್ರೋಟೋಕಾಲ್‌ಗಳಿಗೆ, ವಿಶಾಲವಾದ ವಿಂಡೋಸ್ 11 ಅಳವಡಿಕೆಗೆ ತಡೆಯಾಗಿದೆ. ಲ್ಯಾನ್ಸ್‌ವೀಪರ್ ಸಮೀಕ್ಷೆಯ ಪ್ರಕಾರ, ಸುಮಾರು 55 ಪ್ರತಿಶತದಷ್ಟು ಸಾಧನಗಳು ವಿಂಡೋಸ್ 11 ನೊಂದಿಗೆ ಹೊಂದಿಕೆಯಾಗುವುದಿಲ್ಲ. ಮೈಕ್ರೋಸಾಫ್ಟ್ ಪ್ರಕಾರ ಬೇಸ್‌ಲೈನ್ ಭದ್ರತಾ ಕ್ರಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾದ TPM 2.0 ಅವಶ್ಯಕತೆಯು ಒಂದು ಪ್ರಮುಖ ನ್ಯೂನತೆಯಾಗಿದೆ.

ವಿಂಡೋಸ್ 11 ಬಿಡುಗಡೆಯ ಸಮಯದಲ್ಲಿ ಅತ್ಯುತ್ತಮ ಭದ್ರತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ಕಂಪ್ಯೂಟರ್‌ಗಳ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಕಾರ್ಪೊರೇಟ್ ಸಿಸ್ಟಮ್‌ಗಳಲ್ಲಿ TPM 2.0 ಇಂದಿನ ಜಗತ್ತಿನಲ್ಲಿ ಅತ್ಯಗತ್ಯ ಎಂದು ಮೈಕ್ರೋಸಾಫ್ಟ್ ಹೇಳಿತ್ತು. ಆದಾಗ್ಯೂ, ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಲು, ಬಹುತೇಕ ಅರ್ಧದಷ್ಟು ವಿಂಡೋಸ್ ವರ್ಕ್‌ಸ್ಟೇಷನ್‌ಗಳು (ಶೇಕಡಾ 47) TPM ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗಿವೆ ಎಂದು ಲ್ಯಾನ್ಸ್‌ವೀಪರ್ ವರದಿ ಹೇಳಿದೆ.

ಇದನ್ನೂ ಓದಿ: ಉಕ್ರೇನ್ ರಷ್ಯಾ ಬಿಕ್ಕಟ್ಟು, ಚೀನಾ ಲಾಕ್‌ಡೌನ್‌: ಭಾರತದಲ್ಲಿ ಟಿವಿ ಬೆಲೆ ಏರಿಕೆ ಸಾಧ್ಯತೆ

2025ರ ವರೆಗೆ ವಿಂಡೋಸ್ 10: ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಕಂಪನಿಗಳು ನಿರಾಶಾದಾಯಕ ವ್ಯವಹಾರದ ಹೊಡೆತವನ್ನು ಎದುರಿಸುತ್ತಿರುವ ಕಾರಣ, ಕಚೇರಿಗಳಲ್ಲಿ ಹಾರ್ಡ್‌ವೇರನ್ನು ನವೀಕರಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಲಾಗಿಲ್ಲ. ಮತ್ತು Windows 10 ಅಧಿಕೃತವಾಗಿ 2025ರ ವರೆಗೆ ವ್ಯವಹಾರದಿಂದ ಹೊರಗುಳಿಯುವುದಿಲ್ಲವಾದ್ದರಿಂದ, ಹೆಚ್ಚಿನವರು ತಮ್ಮ ಹಾರ್ಡ್‌ವೇರನ್ನು ಅಪ್‌ಗ್ರೇಡ್ ಮಾಡಲು ಇನ್ನೂ ಸಮಯವಿದೆ ಮತ್ತು ಆದ್ದರಿಂದ ಸಾಫ್ಟ್‌ವೇರ್ ಇತ್ತೀಚಿನ ವಿಂಡೋಸ್ OSಗೆ ಅಪ್ಡೇಟ್‌ ಮಾಡದಿರುವ ಸಾಧ್ಯತೆಗಳಿವೆ. 

ಸಮೀಕ್ಷೆಯು ಪ್ರಪಂಚದ ಎಲ್ಲಾ ವಿಂಡೋಸ್ ಸಿಸ್ಟಮ್‌ಗಳ ಡೇಟಾವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಗಮನಿಸಿ. ಆದಾಗ್ಯೂ, ಇದು ಇಲ್ಲಿಯವರೆಗೆ ನಿಧಾನ ಮತ್ತು ನಿರಾಶಾದಾಯಕ ವಿಂಡೋಸ್ 11 ಅಳವಡಿಕೆಯನ್ನು ಹೈಲೈಟ್ ಮಾಡುವ ಸಾಕಷ್ಟು ಸಮಂಜಸವಾದ ಚಿತ್ರವನ್ನು ತೋರಿಸುತ್ತದೆ. ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಪಿಸಿಗಳ ರೂಪದಲ್ಲಿ ಹೊಸ ಹಾರ್ಡ್‌ವೇರ್ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಾಗ, ಈ ಸನ್ನಿವೇಶವು ಬದಲಾಗುವುದನ್ನು ನಾವು ನಿರೀಕ್ಷಿಸಬಹುದು.