Asianet Suvarna News Asianet Suvarna News

ವೈಯಕ್ತಿಕ ಬಳಕೆ, ವಿದ್ಯಾರ್ಥಿಗಳಿಗಾಗಿ ₹45,000 ಒಳಗಿನ ಉತ್ತಮ ಲ್ಯಾಪ್‌ಟಾಪ್ಸ್‌

₹45000 ಕ್ಕಿಂತ ಕಡಿಮೆ ಶ್ರೇಣಿಯಲ್ಲಿರುವ ಲ್ಯಾಪ್‌ಟಾಪ್‌ಗಳು ತುಂಬಾ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ವೃತ್ತಿಪರರು ಮತ್ತು ವೈಯಕ್ತಿಕ ಬಳಕೆಗಾಗಿ ಲ್ಯಾಪ್‌ಟಾಪ್‌ಗಳನ್ನು ಬಳಸುವವರಿಗೆ ಅಗತ್ಯವಿರುವ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ನೀಡುತ್ತವೆ.

Laptops under Rs 45000 for personal use students business professionals mnj
Author
Bengaluru, First Published Apr 5, 2022, 11:27 AM IST

Laptops under ₹45,000: ಇಂದು ಲ್ಯಾಪ್‌ಟಾಪ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಯಾವ ಹಿನ್ನೆಲೆಯಿಂದ ಬಂದರೂ ಎಲ್ಲರಿಗೂ ಇಂದು ಲ್ಯಾಪ್ ಟಾಪ್ ಬೇಕು. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧ್ಯಯನ, ಅಸೈನ್‌ಮೆಂಟ್ಸ್  ಮಾಡಲು ಮತ್ತು ಸಂಶೋಧನೆಗೆ ಲ್ಯಾಪ್‌ ಟಾಪ್‌ ಅತ್ಯಗತ್ಯ. ಮಲ್ಟಿಮೀಡಿಯಾ ಮತ್ತು ವ್ಯಾಪಾರ ವೃತ್ತಿಪರರು ಲ್ಯಾಪ್‌ಟಾಪ್ ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ನಿವೃತ್ತರು ಸಾಮಾನ್ಯವಾಗಿ ಓದುವ ಅಥವಾ ಬ್ರೌಸ್ ಮಾಡಲು ಅಥವಾ ಸಮಯವನ್ನು ಕಳೆಯಲು ಲ್ಯಾಪ್‌ ಟಾಪ್‌ ಬಳಸುತ್ತಾರೆ. ಗೃಹಿಣಿಯರು ದಿನಸಿಗಳನ್ನು ಆರ್ಡರ್ ಮಾಡಲು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ಇತರ ವಿಷಯಗಳ ನಡುವೆ ಅವರಿಷ್ಟದ ಕಂಟೆಂಟ್‌ ವೀಕ್ಷಿಸಲು ಲ್ಯಾಪ್‌ಟಾಪ್ ಬಳಸುತ್ತಾರೆ. 

ಸ್ಮಾರ್ಟಫೋನ್‌ಗಳು ಟ್ರೆಂಡಿಗ್‌ನಲ್ಲಿರುವ  ಇಂದಿನ ಜಗತ್ತಿನಲ್ಲಿ ಮೊಬೈಲ್‌ ನೀಡಲಾಗದ ಹಲವು  ಪ್ರಯೋಜನಗಳನ್ನು ಲ್ಯಾಪ್‌ಟಾಪ್‌ ನೀಡುತ್ತಿವೆ. HP, Lenevo, Dell ಸೇರಿದಂತೆ ಲ್ಯಾಪ್‌ಟಾಪ್ ಕಂಪನಿಗಳು ಪ್ರತಿ ವರ್ಷ್ ಹೊಸ ಅಪ್ಡೇಟ್‌ಗಳೊಂದಿಗೆ ಲ್ಯಾಪ್‌ ಟಾಪ್‌ಗಳನ್ನು ಬಿಡುಗಡೆ ಮಾಡುತ್ತವೆ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಪ್ರತಿಯೊಂದು ಕೆಲಸವನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೇವಲ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್ ಬಳಸಿ ಮಾಡುವಷ್ಟು ಮಾನವ ಮುಂದುವರೆದಿದ್ದಾನೆ.

ಹೀಗಾಗಿ  ಲ್ಯಾಪ್‌ಟಾಪ್‌ನ ಸುಗಮ ಕಾರ್ಯನಿರ್ವಹಣೆಯಲ್ಲಿ ಪ್ರೊಸೆಸರ್, ಸಂಗ್ರಹಣೆ, ಕ್ಯಾಮೆರಾ ವೈಶಿಷ್ಟ್ಯಗಳು, ಬ್ಯಾಟರಿ ಬಾಳಿಕೆ ಮುಂತಾದ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾದ ಲ್ಯಾಪ್‌ಟಾಪ್‌ಗಳ ಅವಶ್ಯಕತೆಯಿದೆ.  ಜತೆಗೆ ಲ್ಯಾಪ್‌ಟಾಪ್‌ಗಳು  ಬಜೆಟ್‌ಗೆ ಸರಿಹೊಂದುವಂತೆ ಇದ್ದರೆ ಇನ್ನೂ ಉತ್ತಮ. ಬಜೆಟ್‌ ಫ್ರೆಂಡ್ಲಿಯಾಗಿರುವ ₹45,000 ಬೆಲೆಯ ವರ್ಗದ ಶ್ರೇಣಿಯಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಲ್ಯಾಪ್‌ಟಾಪ್‌ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: Dell Precision ಸರಣಿಯ 5 ಲ್ಯಾಪ್‌ಟಾಪ್ಸ್‌ ಲಾಂಚ್:‌ ಏನೆಲ್ಲಾ ವಿಶೇಷತೆಗಳಿವೆ?

HP 15s 11ನೇ Gen Intel Core i3: ಈ ಲ್ಯಾಪ್‌ಟಾಪ್ ವೈಯಕ್ತಿಕ ಬಳಕೆಗೆ ಅಗತ್ಯವಿರುವವರಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಸೂಕ್ತವಾಗಿದೆ. ಆಂಟಿ-ಗ್ಲೇರ್ ಡಿಸ್ಪ್ಲೇಯೊಂದಿಗೆ, ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾದರೆ ಕಣ್ಣುಗಳಿಗೆ ಹೆಚ್ಚು ಒತ್ತಡ ಒಳಗಾಗದಂತೆ ಇದು ರಕ್ಷಿಸುತ್ತದೆ. 1.75 ಕೆಜಿ ತೂಕವಿರುವ ಈ ಲ್ಯಾಪ್‌ಟಾಪ್ ತುಲನಾತ್ಮಕವಾಗಿ ಹಗುರವಾಗಿರುತ್ತದೆ ಮತ್ತು ಅದನ್ನು ಸುಲಭವಾಗಿ ಸಾಗಿಸಬಹುದು. ಕೋರ್ i3 ಪ್ರೊಸೆಸರ್‌ನೊಂದಿಗೆ, ವೇಗವೂ ಉತ್ತಮವಾಗಿರುತ್ತದೆ. ಇಲ್ಲಿದೆ ಇದರ ಕೆಲ ವೈಶಿಷ್ಟ್ಯಗಳು

1) RAM: 8GB

2) SSD: 512GB

3) ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 11 ಹೋಮ್

4) ಡಿಸ್ಪ್ಲೇ ಗಾತ್ರ: 15.6 ಇಂಚುಗಳು

5) ಪ್ರೊಸೆಸರ್: ಇಂಟೆಲ್ ಕೋರ್ i3-1125G4 (ಇಂಟೆಲ್ ಟರ್ಬೊ ಬೂಸ್ಟ್ ಟೆಕ್ನಾಲಜಿಯೊಂದಿಗೆ 3.7 GHz ವರೆಗೆ (2g), 8 MB L3 cache, 4 cores)

7) ಸರಾಸರಿ ಬ್ಯಾಟರಿ ಬಾಳಿಕೆ (ಗಂಟೆಗಳಲ್ಲಿ): ‎4 ಗಂಟೆಗಳು

8) ಸ್ಪೀಕರ್: ಡ್ಯುಯಲ್ ಸ್ಪೀಕರ್

9) ಕ್ಯಾಮೆರಾ: HP ಟ್ರೂ ವಿಷನ್ 720p HD ಕ್ಯಾಮೆರಾ

Lenovo IdeaPad 3 11th Gen Intel i3: ಈ ಲ್ಯಾಪ್‌ಟಾಪ್ ವಿದ್ಯಾರ್ಥಿಗಳು ಮತ್ತು ವ್ಯಾಪಾರ ವೃತ್ತಿಪರರು ಬಳಸಲು ಉತ್ತಮವಾಗಿದೆ. ವೈಯಕ್ತಿಕ ಬಳಕೆಗಾಗಿ ಲ್ಯಾಪ್‌ಟಾಪ್ ಬಳಸುವವರಿಗೂ ಇದು ಉಪಯುಕ್ತವಾಗಿದೆ.  ನಮ್ಮ ಕಣ್ಣುಗಳನ್ನು ರಕ್ಷಿಸಲು ಇದು ಆಂಟಿ ಗ್ಲೇರ್ ಪರದೆಯನ್ನು ಸಹ ಹೊಂದಿದೆ. ವಿದ್ಯಾರ್ಥಿಗಳು ಮತ್ತು ವ್ಯಾಪಾರ ಕಾರ್ಯನಿರ್ವಾಹಕರು ದೀರ್ಘ ಸಮಯವ  ಲ್ಯಾಪ್‌ಟ್ಯಾಪ್ ಬಳಸುವುದರಿಂದ ಈ ವೈಶಿಷ್ಟ್ಯವು ಪ್ರಯೋಜನಕಾರಿಯಾಗಿದೆ. 1.65 ಕೆಜಿ ತೂಕವಿರುವ ಇದು ನಾವು ಮೇಲೆ ಪಟ್ಟಿ ಮಾಡಿರುವ HPಲ್ಯಾಪ್‌ಟಾಪ್‌ಗಿಂತ ಹಗುರವಾಗಿದೆ ಮತ್ತು ಆದ್ದರಿಂದ ಸಾಗಿಸುವುದು ತುಂಬಾ ಸುಲಭ. ಇಲ್ಲಿದೆ ಇದರ ಕೆಲ ವೈಶಿಷ್ಟ್ಯಗಳು

1) ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 11 ಹೋಮ್

2) ಪ್ರೊಸೆಸರ್: 11 ನೇ ಜನ್ ಇಂಟೆಲ್ ಕೋರ್ i3-1115G4 | ವೇಗ: 3.0 GHz (ಬೇಸ್) - 4.1 GHz (ಗರಿಷ್ಠ) | 2 Coes | 6MB Cache

3) RAM: 8 GB

4) SDD: 512 GB

5) ಡಿಸ್ಪ್ಲೇ ಗಾತ್ರ: 15.6 ಇಂಚು

6) ರೆಸಲ್ಯೂಶನ್: 1920x1080 ಪಿಕ್ಸೆಲ್‌ಗಳು

7) ಬ್ಯಾಟರಿ ಬಾಳಿಕೆ: 6 ಗಂಟೆಗಳವರೆಗೆ

8) ಆಡಿಯೋ: 2 x 1.5W ಸ್ಟೀರಿಯೋ ಸ್ಪೀಕರ್‌ಗಳು | HD ಆಡಿಯೋ | ಡಾಲ್ಬಿ ಆಡಿಯೋ

9) ಕ್ಯಾಮರಾ (ಅಂತರ್ನಿರ್ಮಿತ): 720p ಜೊತೆಗೆ ಪ್ರೈವಸಿ ಶಟರ್ | ಫಿಕ್ಸಡ್‌ ಫೋಕಸ್ | ಇಂಟಿಗ್ರೇಟೆಡ್ ಡ್ಯುಯಲ್ ಅರೇ ಮೈಕ್ರೊಫೋನ್‌

ಇದನ್ನೂ ಓದಿ: ಭಾರತದಲ್ಲಿ Honor MagicBook X14, MagicBook 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು?

Dell 14 (2021): ಈ ಲ್ಯಾಪ್‌ಟಾಪ್ ವ್ಯಾಪಾರ ವೃತ್ತಿಪರರಿಗೆ ಸೂಕ್ತವಾಗಿ ಸೂಕ್ತವಾಗಿದೆ. ಇದು 1.59 ಕೆಜಿ ತೂಕವಿದ್ದು ಹಗುರವಾದ ಸಾಧನವಾಗಿದೆ ಮತ್ತು ನಿರ್ವಹಿಸಲು ಸುಲಭವಾಗಿದೆ. 256 GB ಸಂಗ್ರಹಣೆಯೊಂದಿಗೆ, ಪ್ರಮುಖ ಡೇಟಾವನ್ನು ಸಂಗ್ರಹಿಸಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಇಲ್ಲಿದೆ ಇದರ ಕೆಲ ವೈಶಿಷ್ಟ್ಯಗಳು

1) ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 10

2) RAM: 8 GB

3) SSD: 256 GB

4) ಪ್ರೊಸೆಸರ್: AMD ರೈಜೆನ್ 5-3450U (2.10 GHz ಯಿಂದ 3.50 GHz)

5) ಡಿಸ್ಪ್ಲೇ ಗಾತ್ರ: 14.0" FHD WVA AG ನ್ಯಾರೋ ಬಾರ್ಡರ್

ASUS VivoBook 14 (2021): ಈ ಅಸುಸ್ ಲ್ಯಾಪ್‌ಟಾಪ್ ಮಲ್ಟಿಮೀಡಿಯಾ ಮತ್ತು ವ್ಯಾಪಾರ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮೀಸಲಾಗಿದೆ. 1.6 ಕೆಜಿ ತೂಕವಿದ್ದು  ಹಗುರವಾದ ಮತ್ತು ತೆಳುವಾದ ಯಂತ್ರವಾಗಿದೆ. ಈ ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ ವಿವಿಧ ವಿಂಡೋಸ್ ರೂಪಾಂತರಗಳಲ್ಲಿ ಲಭ್ಯವಿದೆ. ಈ ಲೇಖನದಲ್ಲಿ ವಿಂಡೋಸ್ 11 ಆವೃತ್ತಿಯನ್ನು ಪರಿಗಣಿಸಲಾಗಿದೆ. ಇದು ಆಂಟಿ ಗ್ಲೇರ್ ಪರದೆಯನ್ನು ಹೊಂದಿದೆ. Intel Core i3 ಪ್ರೊಸೆಸರ್‌ನೊಂದಿಗೆ, ವೇಗವು ಉತ್ತಮವಾಗಿರುತ್ತದೆ ಎಂದು ಖಚಿತವಾಗಿ ಹೇಳಬಹುದು.

1) ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 11 ಹೋಮ್

2) ಡಿಸ್ಪ್ಲೇ ಗಾತ್ರ: 14 ಇಂಚುಗಳು

3) ಪ್ರೊಸೆಸರ್: ಇಂಟೆಲ್ ಕೋರ್ i3-1005G1, 1.2 GHz ಮೂಲ ವೇಗ, 3.4 GHz ಗರಿಷ್ಠ ಟರ್ಬೊ ವೇಗ, 2 Cores, 4 threads, 4MB Cache

4) SSD: 512 GB

5) RAM: 8 GB

6) ರೆಸಲ್ಯೂಶನ್: 1920 x 1080 ಪಿಕ್ಸೆಲ್‌ಗಳು

7) ಬ್ಯಾಟರಿ ಬಾಳಿಕೆ: 6 ಗಂಟೆಗಳವರೆಗೆ

Follow Us:
Download App:
  • android
  • ios