Asianet Suvarna News Asianet Suvarna News

ಚಂದ್ರನ ಅಂಗಳಕ್ಕಿಳಿಯುವ ಅಪರೂಪದ ಕ್ಷಣ: ನೇರ ಪ್ರಸಾರ ನೋಡುವುದು ಹೀಗಣ್ಣ!

ಇಸ್ರೋದ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭ| ಚಂದ್ರಬನ ಮೇಲ್ಮೈ ಮೇಲೆ ಇಳಿಯಲಿರುವ ವಿಕ್ರಂ ಲ್ಯಾಂಡರ್| ಇಸ್ರೋ ಸಾಧನೆ ಕಣ್ತುಂಬಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ| ಮಧ್ಯರಾತ್ರಿ 1:10ರಿಂದ ದೂರದರ್ಶನದಲ್ಲಿ ನೇರ ಪ್ರಸಾರ| ಇಸ್ರೋದ ಅಧಿಕೃತ ವೆಬ್‌ಸೈಟ್‌, ಯೂಟ್ಯೂಬ್‌ ಮತ್ತು ಫೆಸ್‌ಬುಕ್‌ನಲ್ಲಿ ನೇರ ಪ್ರಸಾರ| ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿಕ್ ಚಾನೆಲ್’ಗಳಲ್ಲೂಈ ನೇರ ಪ್ರಸಾರದ ರಸದೌತಣ| 

Live Streaming of ISRO Chandrayaan-2 Moon Landing
Author
Bengaluru, First Published Sep 6, 2019, 7:25 PM IST

ಬೆಂಗಳೂರು(ಸೆ.06): ಇಸ್ರೋದ ಚಂದ್ರಯಾನ-2 ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವ ಕಾಯುತ್ತಿದೆ. ನೌಕೆಯಲ್ಲಿನ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳಕ್ಕೆ  ಮಧ್ಯರಾತ್ರಿ 1:10ರ ಸುಮಾರಿಗೆ ಇಳಿಯಲಿದೆ.

ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಮಧ್ಯೆ ಇಸ್ರೋದ ಐತಿಹಾಸಿಕ ಸಾಧನೆಯ ವೀಕ್ಷಣೆಗೆ ಹಲವು ದಾರಿಗಳಿದ್ದು, ಆಸಕ್ತರು ಹಲವು ಮಾರ್ಗಗಳ ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ವಿಡಿಯೋವನ್ನು ಲೈವ್ ನೋಡಬಹುದಾಗಿದೆ.

ವಿಕ್ರಂ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ವಿಡಿಯೋವನ್ನು ಮಧ್ಯರಾತ್ರಿ 1:10ರಿಂದ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುವುದು. ಅಲ್ಲದೇ 

ಇಸ್ರೋದ ಅಧಿಕೃತ ಯೂ-ಟ್ಯೂಬ್’ನಲ್ಲೂ ಲೈವ್ ಪ್ರಸಾರವಾಗಲಿದೆ. ಇಷ್ಟೇ ಅಲ್ಲದೇ ಡಿಸ್ಕವರಿ ಹಾಗೂ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್’ಗಳೂ ಕೂಡ ಚಂದ್ರಯಾನ-2 ನೌಕೆಯ ನೇರ ಪ್ರಸಾರ ಮಾಡಲಿವೆ.

ಚಂದ್ರಯಾನ-2 ಚಂದ್ರ ಮೇಲೆ ತನ್ನ ಮೃದು ಹೆಜ್ಜೆ ಇಡುವುದನ್ನು 1:10 ಗಂಟೆಯಿಂದಲೇ ದೂರದರ್ಶದಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜತೆಗೆ ಇಸ್ರೋದ ಅಧಿಕೃತ ವೆಬ್‌ಸೈಟ್‌, ಯೂಟ್ಯೂಬ್‌ ಮತ್ತು ಫೆಸ್‌ಬುಕ್‌ನಲ್ಲಿ ಕೂಡ ನೇರ ಪ್ರಸಾರ ಆಗಲಿದೆ.

Follow Us:
Download App:
  • android
  • ios