ಇಸ್ರೋ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಶುರು| ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಕ್ಷಣ| ಪ್ರಧಾನಿ ನರೇಂದ್ರ ಮೋದಿ ಅವರಿಂದ ಟ್ವೀಟ್| ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಬೆಂಗಳೂರಿಗೆ ಬರುತ್ತಿರುವುದಾಗಿ ಟ್ವೀಟ್| ಎಲ್ಲರೂ ಇಸ್ರೋ ಸಾಧನೆಯನ್ನು ವಿಕ್ಷೀಸುವಂತೆ ಪ್ರಧಾನಿ ಮೋದಿ ಕರೆ|

ನವದೆಹಲಿ(ಸೆ.06): ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ಈಗಾಗಲೇ ಇಡೀ ಜಗತ್ತಿನ ದೃಷ್ಟಿ ಇಸ್ರೋದತ್ತ ನೆಟ್ಟಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಕ್ಷಿಯಾಗಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಸ್ರೋದ ಐತಿಹಾಸಿಕ ಸಾಧನೆಗೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಹೇಳಿದ್ದಾರೆ.

Scroll to load tweet…

ಭಾರತ ಮತ್ತು ಪ್ರಪಂಚದ ಉಳಿದ ದೇಶಗಳು ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಆದರ್ಶಪ್ರಾಯ ಪರಾಕ್ರಮವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಕ್ಷಣವನ್ನು ಸವಿಯಲು ನಾನು ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರಕ್ಕೆ ಹೋಗಲು ಪುಳಕಿತನಾಗಿದ್ದೇನೆ. ಆ ವಿಶೇಷ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳಲು ಹಲವು ವಿಜ್ಞಾನಿಗಳು ಮತ್ತು ಮುಂದಿನ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳು ಸಹ ನನ್ನ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. 

Scroll to load tweet…

ಮಕ್ಕಳೊಂದಿಗೆ ಕುಳಿತುಕೊಂಡು ಚಂದ್ರಯಾನ-2ವನ್ನು ಕಣ್ತುಂಬಿಕೊಳ್ಳುವುದೇ ನನಗೆ ವಿಶೇಷ ಎಂದು ಪ್ರಧಾನಿ ಸಂತಸ ವ್ಯಕ್ತಡಿಸಿದ್ದಾರೆ.