Asianet Suvarna News Asianet Suvarna News

ನಾವೀನ್ಯತೆ & ಬುದ್ಧಿಮತ್ತೆಯ ಸಮ್ಮಿಲನ! LG ಹೊಸ ಟೀವಿಗಳ ಲಕ್ಷಣ

ಉತ್ತಮ ಗುಣಮಟ್ಟದ ಟೀವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ್ ಉಪಕರಣಗಳಿಗಾಗಿ ಭಾರತದಲ್ಲಿ ಮನೆಮಾತಾಗಿರುವ LGಯು ಹೊಸ ಟೀವಿಗಳನ್ನು ಬಿಡುಗಡೆಮಾಡಿದೆ. ಟೀವಿ ವೀಕ್ಷಣೆಯ ವಿಶಿಷ್ಟ ಅನುಭವ ಮತ್ತು ಅನುಭೂತಿ ನೀಡುವ LGಯ ಹೊಸ ಟೀವಿಗಳ ಪರಿಚಯ ಇಲ್ಲಿದೆ. 

LG India Launches New TVs Empowered With AI Innovation
Author
Bengaluru, First Published Jul 12, 2019, 7:07 PM IST

ನವದೆಹಲಿ (ಜೂ.12): ಜನಪ್ರಿಯ LG ಕಂಪನಿಯು ಟೀವಿ-ಪ್ರಿಯರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಟೀವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಪದಾರ್ಪಣೆ ಮಾಡಿರುವ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಾಜ್ಞಾನಾಧರಿತ ThinQ ಎಂಬ ಹೊಸ ಟೀವಿಯು, ಗೂಗಲ್ ಅಸಿಸ್ಟೆಂಟ್ ಜೊತೆಗೆ ಅಮೆಜಾನ್ ಅಲೆಕ್ಸಾ ಮತ್ತು ಆ್ಯಪಲ್ ಏರ್‌ಪ್ಲೇ 2 ಸೌಲಭ್ಯವನ್ನೂ ಹೊಂದಿದೆ.

ಟೀವಿ ವೀಕ್ಷಣೆಯ ವಿಭಿನ್ನ ಅನುಭವ ನೀಡುವ ThinQ ಟೀವಿಯು SMART, LED, UHD, Nanocell ಮತ್ತು OLED ಮಾಡೆಲ್ ಗಳಲ್ಲಿ ಲಭ್ಯವಿದೆ.

LG India Launches New TVs Empowered With AI Innovation
 
OLED TVಯಲ್ಲಿ ವೀಕ್ಷಕರು ಹೆಚ್ಚುವರಿ ಹಾರ್ಡ್‌ವೇರ್ ಇಲ್ಲದೆಯೇ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬಳಸಬಹುದು. ಇದು LGಯಲ್ಲಿ ಮಾತ್ರ ಸಾಧ್ಯ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿರುವುದರಿಂದ ವಾಯ್ಸ್ ಗ್ರಹಿಕೆಯಲ್ಲೂ LGಯ ಈ ಹೊಸ ಟೀವಿ ಹೆಚ್ಚು ಪರಿಣಾಮಕಾರಿಯಾಗಿದೆ. ನೂರಾರು ವಾಯ್ಸ್ ಕಮಾಂಡ್‌ಗಳನ್ನು ಇದು ಗ್ರಹಿಸಿ, ಅವನ್ನು ಕ್ಷಣಮಾತ್ರದಲ್ಲಿ ಕಾರ್ಯಗತಗೊಳಿಸುತ್ತದೆ.

ಅಲೆಕ್ಸಾ ರುಟೀನ್ ಬಳಸಿ ಸ್ಮಾರ್ಟ್‌ಲೈಟ್ ನಿಯಂತ್ರಣ, ಹವಾಮಾನ ವರದಿ,  ನಿತ್ಯ ಪಂಚಾಗ ಗೊತ್ತುಮಾಡಿಕೊಂಡಂತೆ, ಇದರಲ್ಲಿ ಸಂಗೀತ ಅಥವಾ ಆಡಿಯೋ ಪುಸ್ತಕಗಳನ್ನು ಕೇಳಬಹುದು. ಅಲೆಕ್ಸಾ ಸ್ಟೋರ್‌ನಲ್ಲಿರುವ 20 ಸಾವಿರಕ್ಕಿಂತಲೂ ಹೆಚ್ಚು ಅಲೆಕ್ಸಾ ಕೌಶಲ್ಯಗಳನ್ನು ಬಳಸಬಹುದು. ಅಲೆಕ್ಸಾ ಬಳಸಿ ಗೇಮ್‌ಗಳನ್ನು ಆಡಬಹುದು,  ಕ್ಷಣಮಾತ್ರದಲ್ಲಿ ಬೇಕಾದ್ರೆ ಸಿನಿಮಾ ನೋಡ್ಬಹುದು, ಬೇಡ ಎಂದೆನಿಸದರೆ ಟೀವಿ ಆಫ್ ಕೂಡಾ ಮಾಡಬಹುದು.

ಇದನ್ನೂ ಓದಿ | ಫಿಂಗರ್‌ಪ್ರಿಂಟ್ ಆನ್‌ಲಾಕ್ ಕಾಲ ಹೋಯ್ತು! LGಯ ಹ್ಯಾಂಡ್ ಐಡಿ ಫೋನ್ ಮಾರುಕಟ್ಟೆಗೆ

ಗೂಗಲ್ ಅಸಿಸ್ಟೆಂಟ್ ಬಳಸಿ ಬಳಕೆದಾರರು ತಮ್ಮ ನೆಚ್ಚಿನ ಕಾರ್ಯಕ್ರಮವನ್ನು ಆಯ್ಕೆಮಾಡಬಹುದು, ಪ್ರಶ್ನೆಗಳನ್ನು ಕೇಳಬಹುದು, ಮನೆಯ ಉಪಕರಣಗಳನ್ನು ಕಂಟ್ರೋಲ್ ಮಾಡಬಹುದು. ಜೊತೆಗೆ ನಿಮ್ಮ ವೈಯುಕ್ತಿಕ ಕ್ಯಾಲೆಂಡರ್ ಸಿದ್ಧಪಡಿಸುವ ಮತ್ತು ಖರೀದಿಸಬಯಸುವ ವಸ್ತುಗಳನ್ನು ಶಾಪಿಂಗ್ ಲಿಸ್ಟ್‌ಗೂ ಸೇರಿಸುವ ಸೌಲಭ್ಯವೂ ಇದರಲ್ಲಿದೆ. 

ಶೋಗಳನ್ನು ಹುಡುಕಬೇಕೆಂದರೆ ಅಥವಾ ಟೀವಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕೆಂದರೆ LG Magic Remote ಬಳಸಿದರಾಯಿತು!

ಸರಿಸಾಟಿಯಿಲ್ಲದ ಪರದೆ/ದೃಶ್ಯ ಮತ್ತು ಧ್ವನಿಯ ಗುಣಮಟ್ಟ ಈ ಹೊಸ ಟೀವಿಗಳ ವೈಶಿಷ್ಟತೆ. 

ಮೊಬೈಲ್ ಕನೆಕ್ಷನ್ ಓವರ್‌ಲೇ ಸೌಲಭ್ಯ ಹೊಸ ಟೀವಿಯ ಇನ್ನೊಂದು ಪ್ರಮುಖ ಫೀಚರ್.  ಆ ಮೂಲಕ ಬಳಕೆದಾರರರು ಪರದೆ ಮೇಲೆ ಟೀವಿ ಹಾಗೂ ಮೊಬೈಲ್ ಸ್ಕ್ರೀನ್ ಎರಡನ್ನೂ ಒಟ್ಟಿಗೆ ವೀಕ್ಷಿಸಬಹುದು. ಜೊತೆಗೆ, ಗೂಗಲ್ ಡ್ರೈವ್ ಅಥವಾ ಗೂಗಲ್ ಫೋಟೋಗಳನ್ನು ಜಾಲಾಡಬಹುದು.

ಅಷ್ಟೇ ಅಲ್ಲ, 2-ವೇ ಬ್ಲೂಟೂತ್ ಸೌಲಭ್ಯ ಬಳಸಿ ವೈರ್‌ಲೆಸ್ ಮೂಲಕ ಟೀವಿ ಆಡಿಯೋ ಕೇಳಬಹುದು, ಇನ್ನು ಕೆಲವರು ಅದೇ ವೇಳೆ ಟೀವಿ ಮೂಲಕ ಮೊಬೈಲ್ ಬಳಸಬಹುದು! ಒಂದು ಟೀವಿ ಎರಡೆರಡು ಕೆಲಸ!

LG India Launches New TVs Empowered With AI Innovation​​​​​​​

ಹೊಸ ಟೀವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ LG ಇಲೆಕ್ಟ್ರಾನಿಕ್ಸ್ ಇಂಡಿಯಾ ಮುಖ್ಯಸ್ಥ ಯೌಂಚಲ್ ಪಾರ್ಕ್, ಬಳಕೆದಾರರ ಟೀವಿ ವೀಕ್ಷಣೆ ಅನುಭವವನ್ನು ಉತ್ತಮ ಹಾಗೂ ಸರಳೀಕರಿಸಲು ನಾವು ಬದ್ಧರಾಗಿದ್ದೇವೆ. ಆಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ, ಟೀವಿಯನ್ನು ವೀಕ್ಷಣೆಗೆ ಮಾತ್ರ ಸೀಮಿತಗೊಳಿಸದೇ ಅದರಲ್ಲಿ ಪತ್ರಿಕೆಯನ್ನು ಓದಬಹುದು, ಹವಾಮಾನ ವರದಿ ತಿಳಿದುಕೊಳ್ಳಬಹುದು, ಫುಡ್ ಆರ್ಡರ್ ಮಾಡಬಹುದು, ನಿಮ್ಮ ಸುತ್ತಲಿನ ಇನ್ನಿತರ ಉಪಕರಣಗಳನ್ನು ಕಂಟ್ರೋಲ್ ಮಾಡಬಹುದು, ಎಂದು ಹೇಳಿದರು.  

ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಇರೋಸ್ ನೌ, ಝೀ5, ಆಲ್ಟ್ ಬಾಲಾಜಿ, ಹಂಗಾಮಾ ಪ್ಲೇ, ಸನ್ NXT ಮತ್ತು Yupp TV ಬಿಲ್ಟ್‌ಇನ್ ಆ್ಯಪ್‌ಗಳು ಟೀವಿಯಲ್ಲಿ ಲಭ್ಯವಿದೆ. 

32 ಇಂಚಿನಿಂದ ಆರಂಭವಾಗಿ 77 ಇಂಚು ಗಾತ್ರದ ಟೀವಿಗಳು ಮಾರುಕಟ್ಟೆಗೆ ಬಿಡಲಾಗಿದ್ದು, ಬೆಲೆ 24990ರಿಂದ ಆರಂಭವಾಗಿ 10,99,990 ರೂವೆರೆಗೆ ಇದೆ.
 

Follow Us:
Download App:
  • android
  • ios