ಬೆಂಗಳೂರು(ನ.20): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಿರಂತರ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ನೇರಾನೇರ ವ್ಯವಹಾರಿಕ ಸಂಬಂಧ, ವಿನಿಮಯ ಒಪ್ಪಂದಗಳನ್ನು ನಡೆಸಿಕೊಂಡು ಬರುತ್ತಿದೆ. ದೇಶದಲ್ಲೇ ಇಂತಹ ಸಾಧನೆ ಮೆರೆದ ಏಕೈಕ ರಾಜ್ಯ ಕರ್ನಾಟಕವಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ಐಟಿ ನೀತಿ ಘೋಷಿಸಿಕೊಂಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 1997ನೇ ಇಸವಿಯಲ್ಲಿ ಐಟಿ ನೀತಿಯನ್ನು ಘೋಷಿಸಿಕೊಂಡ ರಾಜ್ಯ ಅಂದಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ಕರ್ನಾಟಕ ಎಂದರೆ ಭಾರತದ ಐಟಿ ಹಬ್‌ ಎನ್ನುವಷ್ಟುಹೆಸರಾಗಿದೆ. ಕಳೆದ ಕೆಲ ದಶಕಗಳಲ್ಲಿ ಬೃಹತ್‌ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಉದ್ಯಮದಲ್ಲಿ ಈ ಕ್ಷೇತ್ರವಾಗಿ ಬೆಳೆದಿದೆ. ಬೆಂಗಳೂರು ವಿಶ್ವದ ನಾಲ್ಕನೇ ಅತಿ ಬೃಹತ್‌ ತಂತ್ರಜ್ಞಾನ ಕ್ಲಸ್ಟರ್‌ ಆಗಿ ಹೆಸರಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು 77.80 ಬಿಲಿಯನ್‌ ಡಾಲರ್‌ನಷ್ಟು (7,780 ಕೋಟಿ) ವಿದ್ಯುನ್ಮಾನ ಮತ್ತು ಕಂಪ್ಯೂಟರ್‌ ತಂತ್ರಾಂಶ ರಫ್ತು ಮೂಲಕ ರಾಜ್ಯವು ಭಾರತದ ಅತ್ಯಂತ ದೊಡ್ಡ ತಂತ್ರಾಂಶ ರಫ್ತುದಾರ ರಾಜ್ಯವಾಗಿದೆ. 

ಇದೆಲ್ಲದಕ್ಕೂ ನೆರವಾಗಿದ್ದು ಕರ್ನಾಟಕ ಅದಾಗಲೇ ಐಟಿ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸಾಧಿಸಿರುವ ಫ್ರಾನ್ಸ್‌, ಫಿನ್‌ಲ್ಯಾಂಡ್‌, ನೆದರ್‌ಲ್ಯಾಂಡ್‌, ಆಸ್ಪ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳೊಂದಿಗೆ ಮುಕ್ತ ಹಾಗೂ ನೇರಾನೇರ ವ್ಯವಹಾರಿಕ ಸಂಬಂಧ ಗಟ್ಟಿಕೊಳಿಸಿಕೊಂಡು ಸಾಗಿದ ದಾರಿ. ಇದು ಹೊಸ ಸಂಶೋಧನೆ, ಆವಿಷ್ಕಾರಗಳ ಮೂಲಕ ತಂತ್ರಾಂಶಗಳನ್ನು ರಫ್ತು ಮಾಡುವ ಮಟ್ಟಕ್ಕೆ ರಾಜ್ಯವನ್ನು ತಂದು ನಿಲ್ಲಿಸಿದೆ.

ಶೀಘ್ರದಲ್ಲೇ ದತ್ತಾಂಶ ರಕ್ಷಣೆ ಕಾನೂನು: ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌

ಫ್ರಾನ್ಸ್‌ ದೀರ್ಘಕಾಲದ ಪಾಲುದಾರ: ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫ್ರಾನ್ಸ್‌ ನಮ್ಮ ದೇಶದ ಜೊತೆಗೆ ನೇರವಾಗಿ ಕರ್ನಾಟಕ ರಾಜ್ಯದೊಂದಿಗೂ ದೀರ್ಘಕಾಲದ ಪಾಲುದಾರಿಕೆ ಸಂಬಂಧ ಹೊಂದಿದೆ. ಈ ದೇಶದ ಐಟಿ ಮತ್ತು ನಿರ್ಮಾಣದಾರ ಕಂಪನಿಗಳಿ ಹೂಡಿಕೆಗೆ ಕರ್ನಾಟಕ ನೆಚ್ಚಿನ ತಾಣವಾಗಿದೆ. ಫಾನ್ಸ್‌ ಕರ್ನಾಟಕದೊಂದಿಗಿನ ಒಪ್ಪಂದವನ್ನು ಮುಂದುವರಿಸಿಕೊಂಡು ಮತ್ತಷ್ಟುಅಭಿವೃದ್ಧಿಗೆ ಕೈ ಜೋಡಿಸಲು ನಿರ್ಧರಿಸಿದೆ. ಹೀಗಾಗಿ ಈ ಬಾರಿಯ ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಪಾಲ್ಗೊಂಡು 2017ರಲ್ಲಿ ಮಾಡಿಕೊಳ್ಳಕೊಳ್ಳಲಾದ ಒಪ್ಪಂದವನ್ನು ನವೀಕರಣ ಮಾಡಿಕೊಳ್ಳಲಿದೆ. ಬಯೋಟೆಕ್‌ ಮತ್ತು ಫಿನ್‌ಟೆಕ್‌ ಕ್ಷೇತ್ರದಲ್ಲಿ ಫಾನ್ಸ್‌ ಮತ್ತು ಕರ್ನಾಟಕ ರಾಜ್ಯವು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಏರೋಸ್ಟೇಸ್‌ ಮತ್ತು ರಕ್ಷಣಾ ಇಲಾಖೆಯಲ್ಲಿಯೂ ಒಟ್ಟಾಗಿ ಕಾರ್ಯ ನಿರ್ವಹಿಸಲಿವೆ.

ಫಿನ್‌ಲ್ಯಾಂಡ್‌ ಒಪ್ಪಂದ ಮುಂದುವರಿಕೆ: ಫಿನ್‌ಲ್ಯಾಂಡ್‌ ಸಹ ಕರ್ನಾಟಕದೊಂದಿಗಿನ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಲು ಆಸಕ್ತಿ ಹೊಂದಿದೆ. ಡಾಟಾ ವಿಜ್ಞಾನ ಮತ್ತು ಕೌಶ್ಯಲ್ಯ, ಸಾರ್ಟ್‌ಆಪ್‌ನಲ್ಲಿ ಅಭಿವೃದ್ಧಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದನ್ನು ಮುಂದುವರಿಸುವ ಅಶ್ವಾಸನೆ ನೀಡಿದೆ. ನೋಕಿಯಾ ಸೇರಿದಂತೆ ಇತರೆ ಕಂಪನಿಗಳು ಬೆಂಗಳೂರಿನಲ್ಲಿ ಸಂಶೋಧನೆ ಕೇಂದ್ರಗಳನ್ನು ಹೊಂದಿದೆ. 5ಜಿ ನತ್ತ ಹೆಚ್ಚಿನ ಗಮನಹರಿಸಿದೆ. ಸ್ವಿಟ್ಜರ್‌ಲ್ಯಾಂಡ್‌ ದೇಶವು ಬಯೋಟೆಕ್‌, ಔಷಧಾಲಯ ವಲಯ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಕರ್ನಾಟಕದ ಜತೆ ಕಾರ್ಯ ನಿರ್ವಹಿಸಲಿದೆ.

ಬೆಂಗಳೂರು ಟೆಕ್‌ ಸಮ್ಮಿಟ್‌-2020: ದೇಶದ ಡಿಜಿಟಲ್‌ ಕ್ರಾಂತಿಗೆ ಉಪಗ್ರಹಗಳ ನೆರವು

ನೆದರ್‌ಲ್ಯಾಂಡ್‌ನಿಂದ ಮತ್ತಷ್ಟು ಹೂಡಿಕೆ: 

ಕರ್ನಾಟಕದೊಂದಿಗೆ ನೆದರ್‌ಲ್ಯಾಂಡ್‌ ಸೈಬರ್‌ ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಮುಖ ಒಪ್ಪಂದಗಳನ್ನು ಮಾಡಿಕೊಂಡಿದೆ. ಆಗ್ರಿ ಟೆಕ್‌ ಕ್ಷೇತ್ರದಲ್ಲಿಯೂ ಸಹ ನೆದರ್‌ಲ್ಯಾಂಡ್‌ ಮತ್ತು ಕರ್ನಾಟಕ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ಒಪ್ಪಂದ ಮಾಡಿಕೊಂಡಿದೆ. ಮೂರು ವರ್ಷದ ಹಿಂದೆ ಕೆಲವು ಕಂಪನಿಗಳು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. 

ಇಲ್ಲಿನ ಮೂಲಸೌಕರ್ಯದಿಂದಾಗಿ ಹಲವು ಕಂಪನಿಗಳು ರಾಜ್ಯಕ್ಕೆ ಬರಲು ಆಸಕ್ತಿ ತೋರಿವೆ. ಆಸ್ಪ್ರೇಲಿಯಾ ಸಹ ಹಲವು ಕರ್ನಾಟಕದೊಂದಿಗೆ ಹಲವು ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಅದನ್ನು ಮುಂದುವರಿಸಲು ಇಚ್ಛಿಸಿದೆ. ವಿದೇಶ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.