Asianet Suvarna News Asianet Suvarna News

Jio vs Vi vs Airtel: ₹1,000 ಕ್ಕಿಂತ ಕಡಿಮೆ ಪ್ರಿಪೇಯ್ಡ್ ಯೋಜನೆಗಳಲ್ಲಿ ಯಾವುದು ಬೆಸ್ಟ್?

1,000 ರೂ. ಒಳಗಿನ ಅತ್ಯುತ್ತಮ Jio, Airtel ಮತ್ತು Vi ಯೋಜನೆಗಳ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Jio vs Vodafone idea vs Airtel Best prepaid plans under Rs1000 mnj
Author
Bengaluru, First Published Mar 19, 2022, 2:02 PM IST

Tech Desk: 2026 ರ ವೇಳೆಗೆ ಭಾರತವು ಸುಮಾರು 1 ಶತಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೇ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮಾಹಿತಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ ಭಾರತವು ಒಂದು ಬಿಲಿಯನ್ ಸಕ್ರಿಯ ಮೊಬೈಲ್ ಚಂದಾದಾರನ್ನು ದಾಖಲಿಸಿದೆ. ಹೀಗಾಗಿ ಟೆಲಿಕಾಂ ಮಾರುಕಟ್ಟೆ ವೇಗದ ಬೆಳವಣಿಗೆಯನ್ನು ಕಾಣಲಿದೆ. ಈ ನಡುವೆ  ಕೇವಲ ಧ್ವನಿ ಕರೆಗಳು ಅಥವಾ ಉಚಿತ ಎಸ್‌ಎಮ್‌ಎಸ್‌ ಸೇವೆ ನೀಡಿದರೆ  ಸಾಕಾಗುವುದಿಲ್ಲ ಎಂದು ಅರಿತಿರುವ ಟಿಲಿಕಾಂ ಕಂಪನಿಗಳು ಚಂದಾದಾರನ್ನು ಸೆಳೆಯಲು ಹಲವು ಆಫರ್‌ಗಳನ್ನು ನೀಡುತ್ತಿವೆ. 

ಅದಕ್ಕಾಗಿಯೇ ಇಂದು ರೀಚಾರ್ಜ್ ಯೋಜನೆಗಳು ಅನಿಯಮಿತ ಡೇಟಾ, ಎಸ್‌ಎಮ್‌ಎಸ್‌ ಮತ್ತು ಆಯ್ದ ಅಪ್ಲಿಕೇಶನ್‌ಗಳಿಗೆ ಪ್ರವೇಶದೊಂದಿಗೆ ಧ್ವನಿ ಕರೆಗಳನ್ನು ನೀಡುತ್ತವೆ. ಪ್ರತಿ ಟೆಲಿಕಾಂ ಈ ರೇಸ್‌ನಲ್ಲಿ ಇನ್ನೊಂದನ್ನು ಸೋಲಿಸಲು ಪ್ರಯತ್ನಿಸುವುದರೊಂದಿಗೆ, ರೀಚಾರ್ಜ್ ಯೋಜನೆಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ. ಅಲ್ಲದೇ ಇದು ಸಾಮಾನ್ಯ ಬಳಕೆದಾರರಿಗೆ ಕೆಲವೊಮ್ಮೆ ಗೊಂದಲವನ್ನುಂಟುಮಾಡುತ್ತದೆ. ವಿಭಿನ್ನ ಬಳಕೆದಾರರು ತಮ್ಮ ಅನೂಕೂಲತೆಗನುಸಾರ ವಿಭಿನ್ನ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡುತ್ತಾರೆ. 

ಹೀಗಾಗಿ ನೀವು ಯಾವ ಯೋಜನೆಯನ್ನು ಆರಿಸಿಕೊಳ್ಳಬೇಕು ಮತ್ತು ನಿಮ್ಮ ಆಪರೇಟರನ್ನು ಬದಲಾಯಿಸುವ ಯೋಚನೆಯಿದ್ದರೆ, ಪ್ರಮುಖ ಟೆಲಿಕಾಂ ಕಂಪನಿಗಳು Jio, Airtel ಮತ್ತು Vi 1000 ರೂ. ಒಳಗಿನ ಉನ್ನತ ರೀಚಾರ್ಜ್ ಯೋಜನೆಗಳ ಸಂಕ್ಷಿಪ್ತ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: Tariff Hike: ವೊಡಾಫೋನ್ ಬಳಿಕ 2022ರಲ್ಲಿ ಮತ್ತೊಂದು ಸುತ್ತಿನ ದರ ಹೆಚ್ಚಳ ಸುಳಿವು ನೀಡಿದ ಏರ್‌ಟೆಲ್!

1,000 ರೂ ಒಳಗಿನ ರಿಲಯನ್ಸ್ ಜಿಯೋ ರೀಚಾರ್ಜ್ ಪ್ಲಾನ್‌ಗಳು : ಜಿಯೋ ಯೋಜನೆಗಳು ಸ್ವಲ್ಪ ಗೊಂದಲಮಯವಾಗಿದ್ದರು ಗ್ರಾಹಕರಿಗೆ ಉತ್ತಮ ಬೆಲೆಯಲ್ಲೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಕಂಪನಿಯ ಮಾಯ್‌ ಜಿಯೋ (MyJio) ಅಪ್ಲಿಕೇಶನಲ್ಲಿ ಹಲವಾರು ಯೋಜನೆಗಳಿದ್ದು  ನೀವು ಕೇವಲ ಡೇಟಾವನ್ನು ನೀಡುವ ಮತ್ತು ಯಾವುದೇ ಧ್ವನಿ ಕರೆಗಳನ್ನು ನೀಡುವ ಯೋಜನೆಗೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇದಕ್ಕಿಂತ ಉತ್ತಮ ಯೋಜನೆಗಳು ಕೂಡ ಜಿಯೋ ಬತ್ತಳಿಕೆಯಲ್ಲಿವೆ. 

ಅಪ್ಲಿಕೇಶನ್‌ನಲ್ಲಿ ಹಲವಾರು ಯೋಜನೆಗಳನ್ನು ತೋರಿಸಲಾಗಿದೆ ಮತ್ತು ಅದು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು. ನೀವು ಜಿಯೋ ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಮತ್ತು ರೀಚಾರ್ಜ್ ಯೋಜನೆಯಲ್ಲಿ ರೂ 1000 ಕ್ಕಿಂತ ಹೆಚ್ಚು ಖರ್ಚು ಮಾಡಲು ಬಯಸದಿದ್ದರೆ ಈ ಯೋಜನೆಗಳು ನಿಮ್ಮ ಅತ್ಯುತ್ತಮ ಆಯ್ಕೆಗಳಾಗಬಹುದು. 

ಜಿಯೋದ ರೂ 719 ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ನೀವು ಒಟ್ಟು 168GB ಡೇಟಾವನ್ನು ಪಡೆಯುತ್ತೀರಿ. ಧ್ವನಿ ಕರೆ ಅನಿಯಮಿತವಾಗಿದೆ ಮತ್ತು ದಿನಕ್ಕೆ 100SMS ಇದೆ. ನೀವು JioTV, JioCinema ಮತ್ತು ಹೆಚ್ಚಿನವುಗಳಂತಹ Jio ಅಪ್ಲಿಕೇಶನ್‌ಗಳಿಗೆ ಸಹ ಪ್ರವೇಶವನ್ನು ಪಡೆಯುತ್ತೀರಿ. 

ಜಿಯೋದಿಂದ ಉತ್ತಮವಾದ ಯೋಜನೆಯು ರೂ 479 ನಲ್ಲಿ ಬರುತ್ತದೆ. ಇದರಲ್ಲಿ ಜಿಯೋ ದಿನಕ್ಕೆ 1.5GB ಡೇಟಾವನ್ನು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 56 ದಿನಗಳವರೆಗೆ ಜಿಯೋ ಅಪ್ಲಿಕೇಶನ್ ಪ್ರವೇಶವನ್ನು ನೀಡುತ್ತದೆ. ನೀವು ಒಟ್ಟು 84GB ಡೇಟಾವನ್ನು ಪಡೆಯುತ್ತೀರಿ.

ಇದನ್ನೂ ಓದಿ15 OTT ಸೇವೆಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಬಿಡುಗಡೆ!

1,000 ರೂ ಒಳಗಿನ ಏರ್‌ಟೆಲ್ ರೀಚಾರ್ಜ್ ಪ್ಲಾನ್‌ಗಳು:  ಏರ್ಟೆಲ್ ತನ್ನ ಆಯ್ದ ರೀಚಾರ್ಜ್ ಯೋಜನೆಗಳೊಂದಿಗೆ Amazon Prime ವೀಡಿಯೊ ಚಂದಾದಾರಿಕೆಗಾಗಿ 30 ದಿನಗಳ ಟ್ರೈಯಲ್ ನೀಡುತ್ತದೆ. ಕಂಪನಿಯು ರೂ 839 ಯೋಜನೆಯನ್ನು ಹೊಂದಿದ್ದು, ಅನಿಯಮಿತ ಕರೆಗಳು, ದಿನಕ್ಕೆ 100 ಎಸ್‌ಎಂಎಸ್, ಒಂದು ತಿಂಗಳವರೆಗೆ ಉಚಿತ ಅಮೆಜಾನ್ ಪ್ರೈಮ್ ವೀಡಿಯೊ ಟ್ರಯಲ್, ಉಚಿತ ಹೆಲೋಟ್ಯೂನ್‌ಗಳು ಮತ್ತು 84 ದಿನಗಳವರೆಗೆ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಚಂದಾದಾರಿಕೆಯೊಂದಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ‌

ಏರ್‌ಟೆಲ್‌ನ ಮುಂದಿನ ಉತ್ತಮ ಯೋಜನೆ ರೂ 719 ಕೂಡ ಉತ್ತಮ ಆಫರ್ಸ್‌ ನೀಡುತ್ತದೆ, ಇದು ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆ, ಉಚಿತ ಒಂದು ತಿಂಗಳ ಪ್ರೈಮ್ ವೀಡಿಯೊ ಟ್ರಯಲ್ ಮತ್ತು ದಿನಕ್ಕೆ 100 SMS ನೀಡುತ್ತದೆ.‌

ರೂ 1,000 ಒಳಗಿನ ವೋಡಾಫೋನ್-ಐಡಿಯಾ (Vi) ರೀಚಾರ್ಜ್ ಯೋಜನೆಗಳು: ವಿ ಸಹ ಉತ್ತಮ ಆಯ್ಕೆಗಳ ಶ್ರೇಣಿಯನ್ನು ಹೊಂದಿದೆ ಗ್ರಾಹಕರಿಗೆ ಒಂದು ಯೋಜನೆ ಆಯ್ಕೆ ಮಾಡುವುದು ಗೊಂದಲ ಅನ್ನಿಸಬಹುದು. 1000 ರೂ. ಒಳಗಿನ ವಿ ಯೋಜನೆಗಳಲ್ಲಿ ರೂ 699 ಯೋಜನೆ ಮತ್ತು ರೂ 539 ಯೋಜನೆ ಉತ್ತಮ ಆಯ್ಕೆಯಾಗಿವೆ. 

699 ರೂಗಳಲ್ಲಿ ವೋಡಾಫೋನ್‌ ಐಡಿಯಾ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ದಿನಕ್ಕೆ 3GB ಡೇಟಾವನ್ನು 56 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ವಾರಾಂತ್ಯದ ಡೇಟಾ ರೋಲ್‌ಓವರ್, ತಿಂಗಳಿಗೆ 2GB ವರೆಗಿನ ಡೇಟಾ ಬ್ಯಾಕಪ್, Binge All Night Data, Vi Movies ಮತ್ತು TV ​​ಯಂತಹ ಇತರ ಪ್ರಯೋಜನಗಳನ್ನು ಪ್ಯಾಕ್ ಒಳಗೊಂಡಿದೆ. 

ರೂ 539 ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ.

Follow Us:
Download App:
  • android
  • ios