Asianet Suvarna News Asianet Suvarna News

Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: Q3 FY22ರಲ್ಲಿ ₹3,795ಕೋಟಿ ನಿವ್ವಳ ಲಾಭ

ಜಿಯೋ ಪ್ಲಾಟ್‌ಫಾರ್ಮ್‌ಗಳು ಡಿಸೆಂಬರ್ 2021ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ  ಶೇಕಡಾ 8.8ರಷ್ಟು ಬೆಳವಣಿಗೆಯಂದಿಗೆ  ರೂ. 3,795 ಕೋಟಿ  ನಿವ್ವಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ.

Jio Says 5G Coverage Planning Completed for 1000 Cities 8 8 percent increase in net profit in Q3 mnj
Author
Bengaluru, First Published Jan 22, 2022, 12:13 PM IST

Tech Desk: ಜಿಯೋ ಪ್ಲಾಟ್‌ಫಾರ್ಮ್‌ಗಳು ಡಿಸೆಂಬರ್ 2021ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ  ಶೇಕಡಾ 8.8ರಷ್ಟು ಬೆಳವಣಿಗೆಯೊಂದಿಗೆ  ರೂ. 3,795 ಕೋಟಿ  ನಿವ್ವಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ. ಕಂಪನಿಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ. 3,486 ಕೋಟಿ  ನಿವ್ವಳ ಲಾಭ ಗಳಿಸಿತ್ತು. ಕಾರ್ಯಾಚರಣೆಗಳಿಂದ (Operations)  2020ರ ಅಕ್ಟೋಬರ್-ಡಿಸೆಂಬರ್ ಅವಧಿಯ ರೂ. 24,176 ಕೋಟಿಗಿಂತ  ಒಟ್ಟು ಆದಾಯವು 5.76ರಷ್ಟು ಹೆಚ್ಚಳವಾಗಿದ್ದು ರೂ.22,858 ಕೋಟಿ ರೂ ಆದಾಯ ಗಳಿಸಿದೆ. 

ಜಿಯೋ ಪ್ಲಾಟ್‌ಫಾರ್ಮ್‌ಗಳ ಟೆಲಿಕಾಂ ಸೇವಾ ವಿಭಾಗವಾದ ರಿಲಯನ್ಸ್ ಜಿಯೋ (ಆರ್‌ಜೆಐಎಲ್) ನಿವ್ವಳ ಲಾಭದಲ್ಲಿ ಶೇಕಡಾ 9.8 ರಷ್ಟು ಏರಿಕೆ ಕಂಡು ತ್ರೈಮಾಸಿಕಕ್ಕೆ ರೂ.  3,615 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದ ಅವಧಿಯಲ್ಲಿ ರೂ. 3,291 ಕೋಟಿ ರೂ ನಿವ್ವಳ ಲಾಭ ಗಳಿಸಿತ್ತು. ಕಾರ್ಯಾಚರಣೆಗಳಿಂದ RJIL ನ ಆದಾಯವು ಈ ಹಿಂದೆ ರೂ. 18,492 ಕೋಟಿಗಿಂತ  4.62 ಶೇಕಡಾ ಏರಿಕೆಯಾಗಿ ರೂ. 19,347 ಕೋಟಿ ಆದಾಯ ಗಳಿಸಿದೆ.

ಇದನ್ನೂ ಓದಿ: Jio Network ಕುದುರೆಮುಖ ಅರಣ್ಯದ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯ, ಜಿಯೋ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ!

1000 ನಗರಗಳಲ್ಲಿ 5G ಕವರೇಜ್: ಈ ಮಧ್ಯೆ ಡೇಟಾ ಚಾಲಿತ 5G ನೆಟ್‌ವರ್ಕ್‌ಗಾಗಿ ಯೋಜನೆ ನಡೆಯುತ್ತಿದೆ ಎಂದು ಜಿಯೋ ತಿಳಿಸಿದೆ. ಇದು ಹೆಚ್ಚಿನ ಬಳಕೆ ಮತ್ತು ಹೆಚ್ಚಿನ ಗ್ರಹಿಕೆ ಸ್ಥಳಗಳನ್ನು ಗುರಿಯಾಗಿಸಲು ನಿಖರವಾದ ಕವರೇಜ್ ಯೋಜನೆಗಾಗಿ ಹೀಟ್ ಮ್ಯಾಪ್‌ಗಳು, 3D ನಕ್ಷೆಗಳು ಮತ್ತು ರೇ ಟ್ರೇಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ದೇಶಿತ ಗ್ರಾಹಕ ಬಳಕೆ ಮತ್ತು ಆದಾಯವನ್ನು ಆಧರಿಸಿದೆ ಎಂದು ಜಿಯೋ ಹೇಳಿದೆ.

"ದೇಶದಾದ್ಯಂತ 1,000 ಉನ್ನತ ನಗರಗಳಿಗೆ 5G ಕವರೇಜ್ ಯೋಜನೆ ಪೂರ್ಣಗೊಂಡಿದೆ. Jio ತನ್ನ 5G ನೆಟ್‌ವರ್ಕ್‌ನಲ್ಲಿ ಹೆಲ್ತ್‌ಕೇರ್ ಮತ್ತು ಇಂಡಸ್ಟ್ರಿಯಲ್ ಆಟೊಮೇಷನ್‌ನಾದ್ಯಂತ ಸುಧಾರಿತ ಬಳಕೆಯ ಪ್ರಕರಣಗಳ (use cases) ಮೇಲೆ ಪ್ರಯೋಗಗಳನ್ನು ನಡೆಸುತ್ತಿದೆ" ಎಂದು Jio ಪ್ಲಾಟ್‌ಫಾರ್ಮ್‌ಗಳು ತಿಳಿಸಿವೆ. ಪ್ರಿಪೇಯ್ಡ್ ರೀಚಾರ್ಜ್ ಅನುಭವವನ್ನು ಸರಳಗೊಳಿಸಲು ಹಾಗೂ ಗ್ರಾಹಕರಿಗೆ ಅಭೂತಪೂರ್ವ ಅನುಕೂಲಕ್ಕಾಗಿ ವಾಟ್ಸಾಪ್‌ ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ಕಂಪನಿಯು ಹೇಳಿದೆ.

ಇದನ್ನೂ ಓದಿ: 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

42.1 ಕೋಟಿ ಗ್ರಾಹಕರು: ಜಿಯೋ ಪ್ಲಾಟ್‌ಫಾರ್ಮ್‌ಗಳ ಒಟ್ಟು ಕಸ್ಟಮರ್‌ ಬೇಸ್ ವರ್ಷದ ಹಿಂದೆ ಸುಮಾರು 41 ಕೋಟಿಗೆ ಹೋಲಿಸಿದರೆ ಡಿಸೆಂಬರ್ 2021 ರ ಅಂತ್ಯದ ವೇಳೆಗೆ 42.1 ಕೋಟಿಯಷ್ಟಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳು ಪ್ರತಿ ಬಳಕೆದಾರರಿಗೆ ಅದರ ಸರಾಸರಿ ಆದಾಯ (ARPU)  ವರ್ಷದಿಂದ ವರ್ಷಕ್ಕೆ ರೂ 151.6, ಶೇಕಡಾ 8.4  ಏರಿಕೆ ಕಂಡಿದೆ ಎಂದು ತಿಳಿಸಿದೆ.

"ಎಆರ್ಪಿಯು ಉತ್ತಮ ಚಂದಾದಾರರ ಏರಿಕೆ  ಮತ್ತು ಇತ್ತೀಚಿನ ದರ ಹೆಚ್ಚಳದ (Tariff) ಮೂಲಕ ರೂ. 151.6 ಕ್ಕೆ ಸುಧಾರಿಸಿದೆ. ದರ ಹೆಚ್ಚಳದ ಸಂಪೂರ್ಣ ಪರಿಣಾಮವು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ARPU ಮತ್ತು ಹಣಕಾಸುಗಳಲ್ಲಿ ಪ್ರತಿಫಲಿಸುತ್ತದೆ" ಎಂದು ಜಿಯೋ ಪ್ಲಾಟ್‌ಫಾರ್ಮ್‌ಗಳು ಹೇಳಿದೆ.

Follow Us:
Download App:
  • android
  • ios