ಗಣರಾಜ್ಯೋತ್ಸವಕ್ಕೆ ಮತ್ತೊಂದು ಹೊಸ ಬಂಪರ್ ಡಾಟಾ ಆಫರ್ ನೀಡಿದ ಜಿಯೋ

First Published 23, Jan 2018, 10:20 PM IST
Jio New Republic day Offer relese on 26th
Highlights

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬರಲಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ  ಇನ್ನುಳಿದ ಕಂಪನಿಗಳು ಕೂಡ ದೇ ರೀತಿಯ ಆಫರ್'ಗಳನ್ನು ನೀಡಿವೆ.

ಮುಂಬೈ(ಜ.23):  ಗಣ ರಾಜ್ಯೋತ್ಸವದ ಪ್ರಯುಕ್ತ ಜಿಯೋ ಹಾಲಿ ಗ್ರಾಹಕರಿಗಾಗಿ ಹೆಚ್ಚುವರಿ ಶೇ.50 ರಷ್ಟು  ಡಾಟಾ ಆಫರ್ ಪ್ರಕಟಿಸಿದೆ.

149, 349, 399 ಹಾಗೂ 449 ರೂ. ಯೋಜನೆಯನ್ನು ಬಳಸುತ್ತಿರುವವರು  ಹಾಲಿ ಒಂದು ಜಿಬಿ ಬದಲಿಗೆ 1.5 ಜಿಬಿ, 198, 398, 448 ಹಾಗೂ 498 ಚಂದಾದಾರರು 1.5 ಬದಲಿಗೆ 2 ಜಿಬಿ ಪಡೆದರೆ, 199, 448 ಹಾಗೂ 509 ಆಫರ್ ಉಳ್ಳವರು 2 ಜಿಬಿಯ ಬದಲಿಗೆ 2.5 ಜಿಬಿ ಪಡೆಯಲಿದ್ದಾರೆ.  

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬರಲಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ  ಇನ್ನುಳಿದ ಕಂಪನಿಗಳು ಕೂಡ ದೇ ರೀತಿಯ ಆಫರ್'ಗಳನ್ನು ನೀಡಿವೆ.

loader