ಪ್ರೀಪೇಯ್ಡ್ ಬಳಕೆದಾರರಿಗೆ ಜಿಯೋ ಹೊಸ ಆಫರ್

First Published 1, Jun 2018, 7:28 PM IST
Jio brings Holiday Hungama offer for Prepaid users
Highlights

ಪ್ರೀಪೇಯ್ಡ್ ಗ್ರಾಹಕರಿಗೆ ಜಿಯೋ ಹಾಲಿಡೇ ಹಂಗಾಮ ಆಫರ್ ಘೋಷಿಸಿದೆ. ನೂತನ ಆಫರ್‌ನಿಂದ ಗ್ರಾಹಕರು ಅತೀ ಕಡಿಮೆ ಬೆಲೆಯಲ್ಲಿ ಅಪರಿಮಿತ ಸೇವೆಗಳನ್ನ ಅನುಭವಿಸಬಹುದು.

ಮುಂಬೈ(ಜೂನ್.1) ಪ್ರೀಪೇಯ್ಡ್ ಬಳಕೆದಾರರಿಗೆ ಜಿಯೋ ಮತ್ತೊಂದು ಆಕರ್ಷಕ ಕೊಡುಗೆ ನೀಡಲಾಗಿದೆ. ನೂತನ ಆಫರ್ ಪ್ರಕಾರ 399ರ ಪ್ಲಾನ್ ಈಗ ಕೇವಲ 299 ರೂಪಾಯಿಗೆ ಲಭ್ಯವಾಗಲಿದೆ. ಈ ಮೂಲಕ ಗ್ರಾಹಕರಿಗೆ 100 ರೂಪಾಯಿ ಕಡಿತಗೊಳಿಸಿದೆ.  ಆದರೆ ಈ ಆಫರ್ ಅವಧಿ ಜೂನ್ 1 ರಿಂದ ಜೂನ್ 15, 2018ರ ವರೆಗೆ ಮಾತ್ರ.

ಇದರ ಜೊತೆಗೆ ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದರೆ,  50 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ತಕ್ಷಣವೇ 50 ರೂಪಾಯಿ ರಿಯಾಯಿತಿ ಸಿಗಲಿದೆ. ರಜಾದಿನಗಳ ಸಂದರ್ಭದಲ್ಲಿ ಪರಿಚಯಿಸಲಾಗಿರುವ ಈ ಕೊಡುಗೆಯ ಮೂಲಕ, ಗ್ರಾಹಕರು ಹಾಲಿಡೇ ಹಂಗಾಮ ಆಫರ್ ಅನುಭವಿಸಬಹುದು. ಈ ಹೊಸ ಕೊಡುಗೆಯ ಮೂಲಕ ಜಿಯೋದ ಅಪರಿಮಿತ ಮಾಸಿಕ ಸೇವೆಗಳು (ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ) ವಾಸ್ತವಿಕವಾಗಿ ಕೇವಲ ರೂ. 100ರಲ್ಲಿ ದೊರಕಲಿವೆ.

loader