ಬೆಂಗಳೂರು(ನ.14): ಚಂದ್ರಯಾನ-2 ಯೋಜನೆ ವಿಫಲವಾದ ಬಳಿಕ ಮತ್ತೆ ಪುಟಿದೆದ್ದಿರುವ ಇಸ್ರೋ, ಚಂದ್ರಯಾನ-3 ಯೋಜನೆಗೆ ಸಂಪುರ್ಣವಾಗಿ ಸಜ್ಜಾಗಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ಯೋಜನೆ ವಿಫಲವಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆಗೆ ಇಸ್ರೋ ಚಾಲನೆ ನೀಡಿದೆ.

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!

ವಿಕ್ರಮ್ ಸಾರಾಬಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಎಸ್.ಸೋಮನಾಥ್ ನೇತೃತ್ವದಲ್ಲಿ ಇಸ್ರೋ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಮುಂದಿನ ವರ್ಷದ ನವೆಂಬರ್‌ನಲ್ಲಿ ಚಂದ್ರಯಾನ-3 ಯೋಜನೆ ಕೈಗೊಳ್ಳಲಿರುವುದಾಗಿ ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಸೋಮನಾಥ್ ನೇತೃತ್ವದ ತಂಡ ಈಗಾಗಲೇ ಚಂದ್ರಯಾನ-3 ವರದಿ ಸಿದ್ದಪಡಿಸುತ್ತಿದ್ದು,  ಅದಕ್ಕೆ ಮುಂದಿನ ವರ್ಷಾಂತ್ಯದೊಳಗೆ ಯೋಜನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Video: ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!

ಈ ಬಾರಿಯ ಯೋಜನೆಯಲ್ಲಿ ರೋವರ್, ಲ್ಯಾಂಡರ್ ಮತ್ತು ಲ್ಯಾಂಡಿಂಗ್ ಕಾರ್ಯನಿರ್ವಹಣೆ ಮೇಲೆ ಹೆಚ್ಚಿನ ಗಮನ ನೀಡಲಿದ್ದು, ಚಂದ್ರಯಾನ-2 ಯೋಜನೆಯಲ್ಲಿದ್ದ ಕೊರತೆಗಳನ್ನು ಸರಿಪಡಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಲ್ಯಾಂಡರ್, ರೋವರ್ ಸಂಪರ್ಕ ಬಹುತೇಕ ಅಸಾಧ್ಯ!