ಬೆಂಗಳೂರು(ಜ.14): ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ, ಇದೇ ಜ.17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಜಿಸ್ಯಾಟ್-30 ಉಪಗ್ರಹ ಉಡಾವಣೆಯ ಸಿದ್ದತೆ ಭರದಿಂದ ಸಾಗಿದೆ ಎಂದು ತಿಳಿಸಿದೆ.

ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ!

ಜ.17ರಂದು ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2.35ರ ಹೊತ್ತಿಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ ಜಿಸ್ಯಾಟ್-30 ಉಪಗ್ರಹ ಉಡಾವಣೆಯಾಗಲಿದೆ.

ಅಮೆರಿಕದ ಎರೇನ್ 5 ಎಂಬ ರಾಕೆಟ್ ವಾಹಕದ ಮೂಲಕ ಜಿಸ್ಯಾಟ್-30 ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.

3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಸೆಲ್ಯೂರಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ನೀಡಲಿದೆ.

ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

ಮುಂದಿನ 15 ವರ್ಷಗಳವರೆಗೆ ಜಿಸ್ಯಾಟ್-30 ಉಪಗ್ರಹ ಈ ಸೇವೆಗಳನ್ನು ನೀಡಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.