ಸುತ್ತುವೆ ನಿನ್ನನು ಹಗಲಿರುಳು: ಗುರುವಿನ ಮೇಲೆ ಬಿತ್ತು ಐಯೋ ನೆರಳು!
ಗುರು ಗ್ರಹದ ಮೇಲೆ ಐಯೋ ಉಪಗ್ರಹದ ನೆರಳು| ಅಪರೂಪದ ವಿದ್ಯಮಾನ ಸೆರೆಹಿಡಿದ ನಾಸಾದ ಜುನೋ ನೌಕೆ| ಗ್ರಹದ ಮೇಲ್ಮೈಯಿಂದ ಸುಮಾರು 7,862 ಕಿ.ಮೀ ದೂರದಿಂದ ಫೋಟೋ ಕ್ಲಿಕ್ಕಿಸಿದ ಜುನೋ| ಸುಮಾರು 3,600 ಕಿ.ಮೀ ಅಗಲವಾಗಿರುವ ಐಯೋ ನೆರಳು| ಸೌರಮಂಡಲದ ನಾಲ್ಕನೇ ಅತ್ಯಂತ ದೊಡ್ಡ ಉಪಗ್ರಹ ಐಯೋ| ಐಯೋ ಉಪಗ್ರಹದಲ್ಲಿ ಒಟ್ಟು 400ಕ್ಕೂ ಅಧಿಕ ಜೀವಂತ ಜ್ವಾಲಾಮುಖಿಗಳು|
ವಾಷಿಂಗ್ಟನ್(ಡಿ.02): ಗ್ರಹ-ಉಪಗ್ರಹಗಳದ್ದು ಸುಮಧುರ ಸಂಬಂಧ. ಒಂದನ್ನೊಂದು ಬಿಟ್ಟಿರಲಾರದ ಅನುಭಂಧ. ಗ್ರವನ್ನು ಸುತ್ತುತ್ತಾ, ಅದರ ಜೊತೆಗೇ ಸೂರ್ಯನನ್ನೂ ಸುತತ್ತುವ ಉಪಗ್ರಹಗಳದ್ದು ಒಂದರ್ಥದಲ್ಲಿ ‘ನಾ ನಿನ್ನ ಬಿಡಲಾರೆ’ಯ ಕತೆ.
ಅದರಂತೆ ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರುವಿಗೆ ಬರೊಬ್ಬರಿ 79 ಉಪಗ್ರಹಗಳಿವೆ. ಒಂದಾದ ಮೇಲೊಂದರಂತೆ ಗುರುವನ್ನು ಸುತ್ತುವ ಈ ಚಂದಿರರು, ಪುರುಸೋತ್ತು ಕೊಡದೇ ಗ್ರಹವನ್ನು ಸತಾಯಿಸುತ್ತಿವೆ.
ಯೂರೋಪಾದಲ್ಲಿ ವಾಟರ್ ವೇಪರ್ ಅನ್ವೇಷಣೆ : ನಾಸಿದಿಂದ ಜುಪಿಟರ್ ಜಗತ್ತಿನ ಸತ್ಯ ಘೋಷಣೆ!
ಗುರು ಗ್ರಹದ ಚಂದಿರರ ಪೈಕಿ ಐಯೋ ಅತ್ಯಂತ ಜನಪ್ರಿಯ.ಸೌರಮಂಡಲದ ನಾಲ್ಕನೇ ಅತ್ಯಂತ ದೊಡ್ಡ ಉಪಗ್ರಹವಾಗಿರುವ ಐಯೋ, ಭೌಗೋಳಿಕವಾಗಿ ಅತ್ಯಂತ ಕ್ರಿಯಾಶೀಲವಾಗಿರುವ ಗ್ರಹಕಾಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ಐಯೋ ಉಪಗ್ರಹದಲ್ಲಿ ಒಟ್ಟು 400ಕ್ಕೂ ಅಧಿಕ ಜೀವಂತ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದು, ಸೌರಮಂಡಲದ ಉಪಗ್ರಹಗಳಲ್ಲೇ ಅತ್ಯಂತ ಹೆಚ್ಚು ಸಾಂದ್ರತೆ ಹೊಂದಿರುವ ಉಪಗ್ರಹವಾಗಿದೆ.
ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ!
ಸದ್ಯ ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗುರು ಗ್ರಹದ ಮೇಲೆ ಐಯೋ ನ ನೆರಳು ಬಿದ್ದಿರುವ ಅಪರೂಪದ ಫೋಟೋ ಸೆರೆ ಹಿಡಿದಿದೆ.
ಗುರು ಗ್ರಹದ ಮೇಲ್ಮೈಯಿಂದ ಸುಮಾರು 7,862 ಕಿ.ಮೀ ದೂರದಲ್ಲಿರುವ ಜುನೋ, ಐಯೋ ನೆರಳು ಗ್ರಹದ ಮೇಲ್ಮೈ ಮೇಲೆ ಬಿದ್ದಿರುವುದನ್ನು ಕಳೆದ ಸೆಪ್ಟೆಂಬರ್ 11 ರಂದು ಸೆರೆ ಹಿಡಿದಿದೆ.
‘ಗುರು’ವಿನ ಕೋಪ: ಭೀಕರ ಚಂಡಮಾರುತ ನೋಡಪ್ಪ!
ಗುರು ಗ್ರಹದ ಮೇಲ್ಮೈ ಮೇಲೆ ಬಿದ್ದಿರುವ ಐಯೋ ನೆರಳು ಸುಮಾರು 3,600 ಕಿ.ಮೀ ಅಗಲವಾಗಿದೆ. ಐಯೋ ಕೂಡ ಅಷ್ಟೇ ಸುತ್ತಳತೆ ಹೊಂದಿರುವುದು ವಿಶೇಷ.
ಜುನೋ ನೌಕೆಯ ಅತ್ಯಾಧುನಿಕ ಕ್ಯಾಮರಾಗಳು ಈ ಅಪರೂಪದ ವಿದ್ಯಮಾನವನ್ನು ಸೆರೆ ಹಿಡಿದಿದ್ದು, ವಿಜ್ಞಾನಿ ಕೆವಿನ್ ಗಿಲ್ ಇದರ ವರ್ಣಸಹಿತ ಫೋಟೋವನ್ನು ರಚಿಸಿದ್ದಾರೆ.