Asianet Suvarna News Asianet Suvarna News

‘ಗುರು’ವಿನ ಕೋಪ: ಭೀಕರ ಚಂಡಮಾರುತ ನೋಡಪ್ಪ!

ಗುರು ಗ್ರಹದಲ್ಲಿ ಭೀಕರ ಚಂಡಮಾರುತ| ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಭೀಕರ ಚಂಡಮಾರುತ| ಭೀಕರ ಚಂಡಮಾರುತದ ಫೋಟೋ ಸೆರೆ ಹಿಡಿದ ನಾಸಾದ ಜುನೋ ನೌಕೆ| 5,000 ಮೈಲಿ ಪ್ರದೇಶವನ್ನು ಆವರಿಸಿರುವ ಚಂಡಮಾರುತ|

A Giant Storm Swirling in Jupiter Southern Hemisphere
Author
Bengaluru, First Published Feb 3, 2019, 2:03 PM IST

ವಾಷಿಂಗ್ಟನ್(ಫೆ.03): ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗ್ರಹದಲ್ಲಿ ಸಂಭವಿಸುವ ಭೀಕರ ಮತ್ತು ಬೃಹತ್ ಚಂಡಮಾರುತದ ಫೋಟೋವನ್ನು ಸೆರೆ ಹಿಡಿದಿದೆ.

ಗುರು ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಈ ಬೃಹತ್ ಚಂಡಮಾರುತ ಸಂಭವಿಸಿದ್ದು, ಸುಮಾರು 5,000 ಮೈಲಿ ಪ್ರದೇಶವನ್ನು ಆವರಿಸಿದೆ ಎಂದು ನಾಸಾ ತಿಳಿಸಿದೆ.

ಗುರು ಗ್ರಹದ ಕೆಂಪು ಕುಳಿ ಭಾಗದಲ್ಲಿ ನಿಯಮಿತವಾಗಿ ಚಂಡಮಾರುತಗಳು ಸಂಭವಿಸುತ್ತವೆ. ಅದರಂತೆ ಈ ಬಾರಿಯೂ ಚಂಡಮಾರುತ ಕಾಣಿಸಿಕೊಂಡಿದ್ದು, ಇದನ್ನು ಆನಿಮೇಶನ್ ರೂಪದಲ್ಲಿ ನಾಸಾ ಬಿಡುಗಡೆ ಮಾಡಿದೆ.

Follow Us:
Download App:
  • android
  • ios