Asianet Suvarna News Asianet Suvarna News

ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ!

ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಬೃಹತ್ ಕ್ಷುದ್ರಗ್ರಹ| ಅಪರೂಪದ ದೃಶ್ಯ ಸೆರೆ ಹಿಡಿದ ಖಗೋಳ ವಿಜ್ಞಾನಿ ಎಥಾನ್ ಚಾಪೆಲ್| ಗುರು ಗ್ರಹದ ವಾತಾವರಣ ಪ್ರವೇಶಿಸಿ ಭಸ್ಮವಾದ ಬೃಹತ್ ಕ್ಷುದ್ರಗ್ರಹ| ಟೆಲಿಸ್ಕೋಪ್’ನಲ್ಲಿ ಸೆರೆಯಾಯ್ತು ಅಪರೂಪದ ಖಗೋಳ ವಿದ್ಯಮಾನ| 2009ರಲ್ಲಿ ಪೆಸಿಫಿಕ್ ಮಹಾಸಾಗರ ಗಾತ್ರದ ಕ್ಷುದ್ರಗ್ರಹ ಡಿಕ್ಕಿ|

Astronomer Ethan Chappel  Captures Massive Object Smacks Jupiter
Author
Bengaluru, First Published Aug 12, 2019, 12:50 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಆ.12): ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹಕ್ಕೆ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿದ್ದು, ಗ್ರಹದ ಮೇಲ್ಮೈಗೆ ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.

ಖಗೋಳ ವಿಜ್ಞಾನಿ ಎಥಾನ್ ಚಾಪೆಲ್ ತಮ್ ಟೆಲಿಸ್ಕೋಪ್’ನಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದು, ಗುರು ಗ್ರಹದ ವಾತಾವರಣ ಪ್ರವೇಶಿಸಿದ ಕ್ಷುದ್ರಗ್ರಹ ಉರಿದು ಭಸ್ಮವಾಗುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಗುರುವಿನ ವೀಕ್ಷಣೆಯಲ್ಲಿ ನಿರತರಾಗಿದ್ದ ಎಥಾನ್ ಚಾಪೆಲ್ ಅವರಿಗೆ, ದೊಡ್ಡ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಗೋಚರವಾಗಿದೆ. ಟೆಲಿಸ್ಕೋಪ್’ನಲ್ಲಿ ಸ್ಪಷ್ಟವಾಗಿ ಸೆರೆಯಾದ ಈ ದೃಶ್ಯವನ್ನು ಆಧರಿಸಿ, ಗುರುವಿಗೆ ಡಿಕ್ಕಿ ಹೊಡೆದ ಕ್ಷುದ್ರಗ್ರಹ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿರಬಹುದು ಎಂದು ಊಹಿಸಲಾಗಿದೆ.

ಆದರೆ ಎಥಾನ್ ಚಾಪೆಲ್ ಸೆರೆ ಹಿಡಿದಿರುವುದು ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ದೃಶ್ಯವೋ ಅಥವಾ ಗುರುಗ್ರಹದ ಆಂತರಿಕ ಬದಲಾವಣೆಗಳ ದೃಶ್ಯವೋ ಎಂಬುದು ಸ್ಪಷ್ಟವಾಗಬೇಕಿದೆ.

ಕಳೆದ 2009ರಲ್ಲಿ ಪೆಸಿಫಿಕ್ ಮಹಾಸಾಗರದಷ್ಟು ಅಗಾಧ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಗುರು ಗ್ರಹಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಗುರಿವಿನ ಮೇಲ್ಮೈ ಮೇಲಿರುವ ’ದಿ ಗ್ರೇಟ್ ರೆಡ್ ಸ್ಪಾಟ್’ ಗಾತ್ರದ ಮತ್ತೊಂದು ಕುಳಿ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios