ನವದೆಹಲಿ(ಜು.08): ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ನಿಷೇಧಿಸಿದ ಬೆನ್ನಲ್ಲೇ, ಫೇಸ್‌ಬುಕ್‌ ಮಾಲೀಕತ್ವದ ಸಾಮಾಜಿಕ ಜಾಲತಾಣವಾಗಿರುವ ಇನ್‌ಸ್ಟಾಗ್ರಾಂ ಚೀನಾದ ಟಿಕ್‌ಟಾಕ್‌ ಅನ್ನೇ ಹೋಲುವ ‘ರೀಲ್ಸ್‌’ ಎಂಬ ಹೊಸ ಆ್ಯಪನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

‘ರೀಲ್ಸ್‌’ ಭಾವನೆಗಳನ್ನು ವ್ಯಕ್ತಪಡಿಸಬಹುದಾದ ಮತ್ತು ಮನೋರಂಜನಾತ್ಮಕವಾದ ಅಪ್ಲಿಕೇಶನ್‌. ರೀಲ್ಸ್‌ ಆ್ಯಪ್‌ನ ಅಪ್‌ಡೇಟೆಡ್‌ ವರ್ಶನ್‌ ಅನ್ನು ಹಲವು ದೇಶಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದೇವೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಫೇಸ್‌ಬುಕ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ರೀಲ್ಸ್‌ ಎಂಬುದು ವಿಡಿಯೋ ಎಡಿಟಿಂಗ್‌ ಆ್ಯಪ್‌ ಆಗಿದ್ದು, ಆಡಿಯೋ ಮತ್ತು ವಿಡಿಯೋವನ್ನು ಸಂಯೋಜಿಸಿ 15 ಸೆಕೆಂಡ್‌ಗಳ ವಿಡಿಯೋಗಳನ್ನು ರಚಿಸಬಹುದು.