ಟಿಕ್‌ಟಾಕ್ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?
ಟಿಕ್‌ಟಾಕ್ ಸೇರಿ ಚೀನಿ ಆ್ಯಪ್‌ಗಳ ನಿಷೇಧಕ್ಕೆ ಅಮೆರಿಕದಲ್ಲೂ ಚಿಂತನೆ| ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯವನ್ನು ತುಂಬಾ ದಿನದಿಂದ ಪರಿಶೀಲಿಸುತ್ತಿದ್ದೇವೆ| ಅಮೆರಿಕನ್ನರ ಸೆಲ್‌ಫೋನ್‌ಗಳಲ್ಲಿ ಚೀನಾ ಆ್ಯಪ್ ಇರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ
ವಾಷಿಂಗ್ಟನ್(ಜು.08): ಟಿಕ್‌ಟಾಕ್ ಸೇರಿದಂತೆ 59 ಚೀನಾ ಆ್ಯಪ್‌ಗಳಿಗೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ, ಅಮೆರಿಕ ಕೂಡ ಇಂಥದ್ದೇ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ‘ಟಿಕ್‌ಟಾಕ್ ಸೇರಿದಂತೆ ಚೀನಾ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪೆಯೋ ಹೇಳಿದ್ದಾರೆ.
ಬಂದಿದೆ ದೇಶದ ಮೊದಲ ದೇಸಿ ಸೋಷಿಯಲ್ ಮೀಡಿಯಾ ಆ್ಯಪ್ ‘ಎಲಿಮೆಂಟ್ಸ್’!
ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿದ ಪಾಂಪೆಯೋ ಅವರಿಗೆ ಸಂದರ್ಶಕಿಯು, ಭಾರತದಲ್ಲಿ ಚೀನಾ ಆ್ಯಪ್‌ಗಳನ್ನು ನಿಷೇಧಿಸಲಾಗಿರುವ ವಿಷಯವನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಂಪೆಯೋ, ‘ಈ ವಿಷಯವನ್ನು ಅಮೆರಿಕ ಕೂಡ ಗಂಭೀರವಾಗಿ ಪರಿಗಣಿಸಿದೆ. ನಾನು ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯವನ್ನು ತುಂಬಾ ದಿನದಿಂದ ಪರಿಶೀಲಿಸುತ್ತಿದ್ದೇವೆ. ಅಮೆರಿಕನ್ನರ ಸೆಲ್‌ಫೋನ್‌ಗಳಲ್ಲಿ ಚೀನಾ ಆ್ಯಪ್ ಇರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದರು.
ದೇಸಿ ಟಿಕ್‌ಟಾಕ್ 'ರೊಪೋಸೋ': ಎರಡೇ ದಿನದಲ್ಲಿ 2.2 ಕೋಟಿ ಡೌನ್‌ಲೋಡ್!
ಅಲ್ಲದೆ, ‘ಟಿಕ್‌ಟಾಕ್ ಬಳಕೆ ಬಗ್ಗೆ ಅಮೆರಿಕನ್ನರು ಹುಷಾರಾಗಿರಬೇಕು. ಜನರ ಖಾಸಗಿ ಮಾಹಿತಿ ಚೀನಾ ಕಮ್ಯುನಿಸ್ಟ್ ಪಕ್ಷದ ಪಾಲಾಗಬಾರದು ಎಂಬುದು ಗಮನದಲ್ಲಿರಬೇಕು’ ಎಂದು ಪಾಂಪೆಯೋ ಸಲಹೆ ಮಾಡಿದರು.