Asianet Suvarna News Asianet Suvarna News

Instagram Bug Bounty: 38 ಲಕ್ಷ ರೂಪಾಯಿ ಬಹುಮಾನ ಪಡೆದ ಜೈಪುರದ ವಿದ್ಯಾರ್ಥಿ!

ಮೆಟಾ ಮಾಲೀಕತ್ವದಲ್ಲಿರುವ ಇನ್ಸ್‌ಟಾಗ್ರಾಮ್‌ನಲ್ಲಿನ ಪ್ರಮುಖ ಬಗ್‌ಅನ್ನು ಕಂಡುಹಿಡಿದ ಕಾರಣಕ್ಕಾಗಿ ಜೈಪುರದ ವಿದ್ಯಾರ್ಥಿಯೊಬ್ಬನಿಗೆ ಇನ್ಸ್‌ಟಾಗ್ರಾಮ್‌ ಬಗ್‌ ಬೌಂಟಿ ಮೂಲಕ 38 ಲಕ್ಷ ರೂಪಾಯಿ ಬಹುಮಾನ ದೊರೆತಿದೆ.

Instagram Bug Bounty Jaipur Student Receives Rs 38 Lacs After Discovering Bug You Can Win It Too san
Author
First Published Sep 21, 2022, 6:24 PM IST

ನವದೆಹಲಿ (ಸೆ. 21): ಬಗ್ ಬೌಂಟಿ ಕಾರ್ಯಕ್ರಮಗಳನ್ನು ಆಯೋಜಿಸುವ ಮಾಡುವ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇನ್ಸ್‌ಟಾಗ್ರಾಮ್‌ ಕೂಡ ಒಂದು. ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ ಬಗ್ ಬೌಂಟಿ ಕಾರ್ಯಕ್ರಮದ ಭಾಗವಾಗಿ ಇನ್ಸ್‌ಟಾಗ್ರಾಮ್‌ನಿಂದ ಬರೋಬ್ಬರಿ 38 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದು ಮಾತ್ರವಲ್ಲದೆ, ಈ ವಿದ್ಯಾರ್ಥಿಯಿಂದ ಲಕ್ಷಾಂತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಆಗದಂತೆ ರಕ್ಷಿಸಿದ್ದಾನೆ. ಜೈಪುರ ವಿದ್ಯಾರ್ಥಿ ಬಗ್ ಬೌಂಟಿ ಕಾರ್ಯಕ್ರಮಗಳನ್ನು ಗೆದ್ದ ವಿವರಗಳನ್ನು ತಿಳಿಯುವುದಾದರೆ.  ಲಕ್ಷಾಂತರ ಇನ್ಸ್‌ಟಾಗ್ರಾಮ್‌ ಅಕೌಂಟ್‌ಅನ್ನು ಹ್ಯಾಕ್ ಮಾಡಬಹುದಾದ ಅತ್ಯಂತ ಪ್ರಮುಖ ದೋಷವನ್ನು ನೀರಜ್‌ ಶರ್ಮ ಕಂಡುಹಿಡಿದಿದ್ದಾರೆ. ಲಾಗಿನ್ ಐಡಿ ಅಥವಾ ಪಾಸ್‌ವರ್ಡ್‌ನಂತಹ ಯಾವುದರ ಅಗತ್ಯವಿಲ್ಲದೆ, ಈ ಬಗ್‌ನ ಸಹಾಯದಿಂದ ಬಳಕೆದಾರರ ಥಂಬ್‌ನೇಲ್‌ಅನ್ನು ಬದಲಾಯಿಸಬಹುದಾಗಿತ್ತು. ಈ ಬಗ್‌ಅನ್ನು  ನೀರಜ್‌ ಶರ್ಮ ಪತ್ತೆ ಮಾಡಿದ ಕಾರಣಕ್ಕೆ ಇಷ್ಟು ದೊಡ್ಡ ಮಟ್ಟದ ಬಹುಮಾನ ಸಿಕ್ಕಿದೆ. "ಫೇಸ್‌ಬುಕ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ದೋಷವಿತ್ತು, ಅದರ ಮೂಲಕ ರೀಲ್‌ನ ಥಂಬ್‌ನೇಲ್ ಅನ್ನು ಯಾವುದೇ ಖಾತೆಯಿಂದ ಬದಲಾಯಿಸಬಹುದಿತ್ತು. ಖಾತೆದಾರರ ಪಾಸ್‌ವರ್ಡ್ ಎಷ್ಟೇ ಪ್ರಬಲವಾಗಿದ್ದರೂ ಅದನ್ನು ಬದಲಾಯಿಸಲು ಖಾತೆಯ ಮೀಡಿಯಾ ಐಡಿ ಮಾತ್ರ ಬೇಕಾಗುತ್ತಿತ್ತು ಎಂದು ಶರ್ಮ ತಿಳಿಸಿದ್ದಾರೆ.

ಶರ್ಮಾ (Neeraj Sharma) ಅವರ ಕೆಲಸವು ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಸ್ವಂತ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ದೋಷಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದಾಗ ಪ್ರಾರಂಭವಾಯಿತು. ಹೆಚ್ಚಿನ ಸಂಶೋಧನೆಯ ನಂತರ, ಅವರು ಇನ್ಸ್‌ಟಾಗ್ರಾಮ್‌ನಲ್ಲಿ ದೋಷವಿರುವುದು (Bug) ನಿಜ ಎಂದು ಕಂಡುಕೊಂಡಿತ್ತು ಮತ್ತು ಅವರು ತಕ್ಷಣ ಅದನ್ನು ಫೇಸ್‌ಬುಕ್‌ಗೆ ವರದಿ ಮಾಡಿದರು. ಮೂರು ದಿನಗಳ ನಂತರ, ಮೆಟಾ ಈಕ ಕುರಿತಾಗಿ ಡೆಮೋವನ್ನು ವಿನಂತಿ ಮಾಡಿ ರಿಪ್ಲೈ ಮಾಡಿತ್ತು. ನಾನು ಅವರಿಗೆ ಯಾವ ರೀತಿ ಇದನ್ನು ಬದಲಾಯಿಸಬಹುದು ಎನ್ನುವ ಡೆಮೋಅನ್ನು ಯಶಸ್ವಿಯಾಗಿ ನೀಡಿದೆ. ಕೇವಲ ಐದೇ ನಿಮಿಷದಲ್ಲಿ ಥಂಬ್‌ನೇಲ್‌ಅನ್ನು (Thumbnail) ಯಾವುದೇ ಪಾಸ್‌ವರ್ಡ್‌ ಇಲ್ಲದೆ ಹೇಗೆ ಬದಲಾಯಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟೆ ಎನ್ನುತ್ತಾರೆ ನೀರಜ್‌.

ತಕ್ಷಣವೇ ಮೆಟಾ (Meta) ಮಾಲೀಕತ್ವದ ಇನ್ಸ್‌ಟಾಗ್ರಾಮ್‌ (Instagram) ನನ್ನ ವರದಿಯನ್ನು ಅನುಮೋದಿನೆ ಮಾಡಿತು ಮತ್ತು 45 ಸಾವಿರ ಅಮೇರಿಕನ್‌ ಡಾಲರ್‌ (ಅಂದಾಜು 35 ಲಕ್ಷ ರೂಪಾಯಿ) 'ಬಗ್‌ ಬೌಂಟಿ ರಿವಾರ್ಡ್‌' ಅಡಿ ಬಹುಮಾನ ಘೋಷಿಸಿ ಅದರ ವಿವರಗಳನ್ನು ನನಗೆ ಈ-ಮೇಲ್‌ನಲ್ಲಿ ಕಳಿಸಿತು. ಆದರೆ, ಬಹುಮಾನದ ಮೊತ್ತ ನನಗೆ ಬರುವುದು ನಾಲ್ಕು ತಿಂಗಳು ವಿಳಂಬವಾಯಿತು. ಈ ಕಾರಣಕ್ಕಾಗಿ ಫೇಸ್‌ಬುಕ್‌ (Facebook) ಕೂಡ 4500 ಅಮೆರಿಕನ್‌ ಡಾಲರ್‌ (3 ಲಕ್ಷ ರೂಪಾಯಿ) ಹಣವನ್ನು ಬೋನಸ್ ರೂಪದಲ್ಲಿ ನೀಡಿತು. ಒಟ್ಟಾರೆಯಾಗಿ ಇನ್ಸ್‌ಟಾಗ್ರಾಮ್‌ ಬಿಗ್‌ ಬೌಂಟಿ ಪ್ರೋಗ್ರಾಮ್‌ನಿಂದ ನನಗೆ 38 ಲಕ್ಷ ರೂಪಾಯಿ ಬಹುಮಾನ ದೊರೆತಿದೆ ಎಂದು ನೀರಜ್‌ ಹೇಳಿದ್ದಾರೆ.

ರಸ್ತೆ ಹೊಂಡಗಳ ನಡುವೆ Pre Wedding Photoshoot: ವೈರಲ್ ಆದ್ಲು ಕೇರಳದ ವಧು

ಬಗ್ ಬೌಂಟಿ ಕಾರ್ಯಕ್ರಮಗಳ ಭಾಗವಾಗುವುದು ಹೇಗೆ?: ವಿಶ್ವಾದ್ಯಂತ ಬಗ್ ಬೌಂಟಿ ಕಾರ್ಯಕ್ರಮಗಳ ಭಾಗವಾಗಿರುವ ಅನೇಕ ವಿದ್ಯಾರ್ಥಿಗಳು ಮತ್ತು ಭದ್ರತಾ ಸಂಶೋಧಕರಲ್ಲಿ ಶರ್ಮಾ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ, ಯುವಕರು, ವಿಶೇಷವಾಗಿ ಯುವಕರು ಬಗ್ ಬೌಂಟಿ ಕಾರ್ಯಕ್ರಮಗಳು ಮತ್ತು ಹ್ಯಾಕಿಂಗ್ ಘಟನೆಗಳ ಭಾಗವಾಗುವುದನ್ನು ನಾವು ನೋಡಿದ್ದೇವೆ. ಇತ್ತೀಚಿನ ಸುದ್ದಿಯಲ್ಲಿ, ಯುವಕರು ಉಬರ್ ಅನ್ನು ಹ್ಯಾಕ್ ಮಾಡಿದ್ದಾರೆ ಮತ್ತು ಜಿಟಿಎ 6 ಗೇಮ್‌ಪ್ಲೇ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆ.

15 ಕೋಟಿ TikTok ಫಾಲೋವರ್ಸ್‌: ಖಾಬಿ ಲೇಮ್‌ಗೆ ಒಂದು ಪೋಸ್ಟ್‌ಗೆ ಇಷ್ಟು ಹಣ ಸಿಗುತ್ತೆ..!

ನೀವು ಬಗ್ ಬೌಂಟಿ ಕಾರ್ಯಕ್ರಮಗಳ ಭಾಗವಾಗಲು ಬಯಸಿದರೆ, ನೀವು ಯಾವಾಗ ಬೇಕಾದರೂ ಅವರ ಪೋರ್ಟಲ್‌ಗಳಲ್ಲಿ ಸೈನ್ ಅಪ್ ಮಾಡಬಹುದು. ಉದಾಹರಣೆಗೆ, ನೀವು ಇನ್ಸ್‌ಟಾಗ್ರಾಮ್‌ ಬಗ್ ಬೌಂಟಿ ಪ್ರೋಗ್ರಾಂ (Instagram Bug Bounty program) ಅನ್ನು ಆನ್‌ಲೈನ್‌ನಲ್ಲಿ ಕಾಣಬಹುದು ಮತ್ತು ನೀವು ಅವರ ಯೋಜನೆಗಳ ಭಾಗವಾಗಬಹುದು. ನೀವು ನಿರ್ಣಾಯಕ ದೋಷಗಳು ಅಥವಾ ದುರ್ಬಲತೆಗಳನ್ನು ಕಂಡುಕೊಂಡರೆ, ಅವರಿಂದ ಬಹುಮಾನವನ್ನೂ ಸ್ವೀಕರಿಸಬಹುದು.

Follow Us:
Download App:
  • android
  • ios