Asianet Suvarna News Asianet Suvarna News

ಇನ್‌ಫಿನಿಕ್ಸ್‌ ಬಿಡುಗಡೆ ಮಾಡಿದೆ ಬಜೆಟ್ ಸ್ಮಾರ್ಟ್‌ಫೋನ್!

  • ದೀರ್ಘಕಾಲದ ಸ್ಮಾಟ್ ಫೋರ್ನ್ ಬಳಕೆಯಿಂದ ಕಣ್ಣಿನ ಮೇಲಾಗುವ ಒತ್ತಡವನ್ನು ನಿವಾರಿಸಲು ಸ್ಕ್ರೀನ್ ಐ ಕೇರ್ ಮೋಡ್
  • ಫೋಕಸ್‌ನಲ್ಲಿಟ್ಟು ಹಿನ್ನೆಲೆಯ ಎಲ್ಲವನ್ನು ಅಸ್ಪಷ್ಟಗೊಳಿಸಿ ಗುಂಪಿನಿಂದ ನಿಮ್ಮನ್ನು ಪ್ರತ್ಯೇಕವಾಗಿ ಪ್ರದರ್ಶಿಸುವ ಬೊಕೆ ಸೆಲ್ಫಿ ಮೋಡ್ 
Infinix Launches Smart 2 With New Features

ಇನ್‌ಫಿನಿಕ್ಸ್ ಕಂಪೆನಿ 6000 ರು.ಗಿಂತಲೂ ಕಡಿಮೆ ದರದ ಹಲವಾರು ವಿಶೇಷತೆ ಹೊಂದಿರುವ ಸ್ಮಾರ್ಟ್ 2 ಫೋನ್ ಬಿಡುಗಡೆ ಮಾಡಿದೆ. 

ಇನ್‌ಫಿನಿಕ್ಸ್ ಸ್ಮಾರ್ಟ್ 2 ಮೊಬೈಲ್‌ಗಳು 5.45 ಇಂಚು ಡಿಸ್ಪ್ಲೇ ಹೊಂದಿವೆ. 2 ಜಿಬಿ RAM, 16 ಜಿಬಿ ಸ್ಟೋರೇಜ್ ವ್ಯವಸ್ಥೆ ಇದೆ. 128 ಜಿಬಿವರೆಗೂ ವಿಸ್ತರಿಸಬಹುದಾದ ಮೊಮೆರಿ ಸೌಲಭ್ಯವಿದೆ. 

ಜೊತೆಗೆ ಡ್ಯುಯಲ್ ಸಿಮ್, ಡ್ಯುಯಲ್ ವೋಲ್ಟ್(ಡಿಎಸ್ ಡಿವಿ) ವ್ಯವಸ್ಥೆ ಇದೆ. 8 ಎಂಪಿಯ ಮಂದ ಬೆಳಕಿನ ಸೆಲ್ಫೀ ಕ್ಯಾಮರಾ, ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್, ಫೇಸ್‌ಅನ್‌ಲಾಕ್ ಸೌಲಭ್ಯ ಈ ಫೋನ್‌ನಲ್ಲಿವೆ.  ಎಫ್.2.0 ಅಪರ್ ಚರ್ ಇರುವ ಫೋನ್ ಇದಾಗಿದೆ. 

ಇದರಲ್ಲಿರುವ ಬೊಕೆ ಸೆಲ್ಫಿ ಮೋಡ್ ನಿಮ್ಮನ್ನು ಫೋಕಸ್‌ನಲ್ಲಿಟ್ಟು ಹಿನ್ನೆಲೆಯ ಎಲ್ಲವನ್ನು ಅಸ್ಪಷ್ಟಗೊಳಿಸಿ ಗುಂಪಿನಿಂದ ನಿಮ್ಮನ್ನು ಪ್ರತ್ಯೇಕವಾಗಿ ಪ್ರದರ್ಶಿಸುತ್ತದೆ. 

ಸ್ಕ್ರೀನ್ ಐ ಕೇರ್ ಮೋಡ್, ದೀರ್ಘಕಾಲದ ಸ್ಮಾಟ್ ಫೋರ್ನ್ ಬಳಕೆಯಿಂದ ಕಣ್ಣಿನ ಮೇಲಾಗುವ ಒತ್ತಡವನ್ನು ನಿವಾರಿಸುತ್ತದೆ. ಸ್ಮಾರ್ಟ್ 2 ಉತ್ಪನ್ನ ಸ್ಯಾಂಡ್‌ಸ್ಟೋನ್ ಬ್ಲ್ಯಾಕ್, ಸೆರಿನ್ ಗೋಲ್ಡ್, ಬೋರ್ಡೆಕ್ಸ್ ರೆಡ್ ಮತ್ತು ಸಿಟಿ ಬ್ಲ್ಯೂ ವರ್ಣಗಳಲ್ಲಿ ದೊರೆಯುತ್ತದೆ.

ಬೆಲೆ : 5999 ರು. ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

Follow Us:
Download App:
  • android
  • ios