ಜಿಯೋ ಸಿಮ್ ಎಂಬ ಐಡಿಯಾ ಹೊಳೆಯಲು ನನ್ನ ಮಗಳು ಇಶಾ ಅಂಬಾನಿ ಕೊಟ್ಟ ದೂರು ಕಾರಣ ಎಂದಿರುವ ಅಂಬಾನಿ ಘಟನೆಯ ಸಂಪೂರ್ಣ ವಿವರವನ್ನೂ ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಮಾಡುತ್ತಿದ್ದ ಇಶಾ ಅಂಬಾನಿ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಳು. ಈ ವೇಳೆ ತನ್ನ ವಿದ್ಯಾಭ್ಯಾಸಕ್ಕೆ ವೇಗವಾದ ಇಂಟರ್'ನೆಟ್ ಸೇವೆ ಸಿಗದ ಕಾರಣ ತೊಡಕಾಡಿದ್ದಳು. ಈ ಕುರಿತಾಗಿ ಅಂಬಾನಿಗೂ ದೂರು ನೀಡಿದ್ದು, ಅಮೆರಿಕಾದಲ್ಲಿ ಲಭ್ಯವಿರುವ ಇಂಟರ್'ನೆಟ್ ವೇಗ ಹಾಗೂ ಅದರ ಲಾಭವನ್ನೂ ತಂದೆಗೆ ವಿವರವಾಗಿ ತಿಳಿಸಿದ್ದಳು.

ಮುಂಬೈ(ಅ.24): ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಜಿಯೋನಿಂದಾಗಿ ರಿಲಾಯನ್ಸ್ ಇಂಡಸ್ಟ್ರಿ ಮಾಲಿಕ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಗ್ರಾಹಕರ ಮನೆ ಮಾತಾಗಿದ್ದರು. ಇದೀಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಂಬಾನಿ ಜಿಯೋ ಸಿಮ್ ಐಡಿಯಾ ಹೊಳೆಯಲು ಕಾರಣರಾದವರ ಹೆಸರನ್ನು ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ ಸಿಮ್ ಎಂಬ ಐಡಿಯಾ ಹೊಳೆಯಲು ನನ್ನ ಮಗಳು ಇಶಾ ಅಂಬಾನಿ ಕೊಟ್ಟ ದೂರು ಕಾರಣ ಎಂದಿರುವ ಅಂಬಾನಿ ಘಟನೆಯ ಸಂಪೂರ್ಣ ವಿವರವನ್ನೂ ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಮಾಡುತ್ತಿದ್ದ ಇಶಾ ಅಂಬಾನಿ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಳು. ಈ ವೇಳೆ ತನ್ನ ವಿದ್ಯಾಭ್ಯಾಸಕ್ಕೆ ವೇಗವಾದ ಇಂಟರ್'ನೆಟ್ ಸೇವೆ ಸಿಗದ ಕಾರಣ ತೊಡಕಾಡಿದ್ದಳು. ಈ ಕುರಿತಾಗಿ ಅಂಬಾನಿಗೂ ದೂರು ನೀಡಿದ್ದು, ಅಮೆರಿಕಾದಲ್ಲಿ ಲಭ್ಯವಿರುವ ಇಂಟರ್'ನೆಟ್ ವೇಗ ಹಾಗೂ ಅದರ ಲಾಭವನ್ನೂ ತಂದೆಗೆ ವಿವರವಾಗಿ ತಿಳಿಸಿದ್ದಳು.

ಇದೇ ದೂರು ಇಂದು ಜಿಯೋ ಸಿಮ್ ಬಿಡುಗಡೆಗೊಳಿಸಲು ಅಂಬಾನಿಯವರಿಗೆ ಪ್ರೇರಣೆಯಾಗಿದ್ದಂತೆ. 'ಮಗಳಿಂದ ಮಾಹಿತಿ ಪಡೆದ ನಾನು ಅತಿ ಕಡಿಮೆ ವೆಚ್ಚದಲ್ಲಿ ವೇಗದ ಇಂಟರ್'ನೆಟ್ ನೀಡಲು ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟೆ, ಇದೀಗ ಇದರಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.