ನ್ಯೂಯಾರ್ಕ್(ಜ.31): ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ IBM ವಿಶ್ವದಲ್ಲೇ ದೈತ್ಯ ಕಂಪನಿಯಾಗಿ ಬೆಳೆದು ನಿಂತಿದೆ. ಅಮೆರಿಕಾ ಮೂಲದ ಈ ಕಂಪನಿಗೆ ಭಾರತದ ಅರವಿಂದ ಕೃಷ್ಣ ಕಾರ್ಯನಿರ್ವಾಹಕ ಅಧಿಕಾರಿ(CEO) ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: 1,680 ಕೋಟಿ ಸಂಪಾದಿಸುವ Google ಸಿಇಓ ಉಪಾಹಾರ ಕೇವಲ 1 ಆಮ್ಲೆಟ್‌, ಟೋಸ್ಟ್!

ಸದ್ಯ  IBM CEO ಆಗಿರುವ 62 ವರ್ಷದ  ವರ್ಜಿನಿಯಾ ರೊಮೆಟ್ಟಿ ಕಳೆದ 40 ವರ್ಷಗಳಿಂದ IBM ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ವರ್ಷ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮುಂದುವರಿಯಲಿರುವ ರೊಮೆಟ್ಟಿ ಬಳಿಕ ನಿವೃತ್ತಿ ಹೊಂದಲಿದ್ದಾರೆ. ರೊಮೆಟ್ಟಿ ನಿಭಾಯಿಸಿದ  CEO ಸ್ಥಾನಕ್ಕೆ  57ರ ಹರೆಯದ, ಕಾನ್ಪುರ IIT ಹಳೇ ವಿದ್ಯಾರ್ಥಿ ಅರವಿಂದ ಕೃಷ್ಣ  ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ  ಕಂಪನಿ CEO ಆಗಿ ಆಯ್ಕೆ ಬಳಿಕ ಮಾತನಾಡಿದ ಅರವಿಂದ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. IBM ಕಂಪನಿಯ ಯಶಸ್ಸಿಗೆ ಮತ್ತಷ್ಟು ವೇಗ ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಅರವಿಂದ ಕೃಷ್ಣ ಎಪ್ರಿಲ್ 6 ರಿಂದ  IBM CEO ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.