ಭಾರದಲ್ಲಿನ್ನು E ಪಾಸ್‌ಪೋರ್ಟ್; ಕೇಂದ್ರದಿಂದ ಹೊಸ ಮಾದರಿ ಜಾರಿ!

ಪಾಸ್‌ಪೋರ್ಟ್ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಹಳೆ ವಿಧಾನಕ್ಕೆ ಬ್ರೇಕ್ ನೀಡಿರುವ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಹೊಸದಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಹಾಗೂ ಪಾಸ್‌ಪೋರ್ಟ್ ನವೀಕರಿಸುವವರಿಗೆ ಹೊಸ ಇ ಪಾಸ್‌ಪೋರ್ಟ್ ಲಭ್ಯವಾಗಲಿದೆ. ನೂತನ ಪಾಸ್‌ಪೋರ್ಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Indian government set to introduce e passport for all citizens

ನವದೆಹಲಿ(ಆ.13): ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದೆ. ಹೀಗಾಗಿ ಸದ್ಯ ಭಾರತದಲ್ಲಿ ಬಹುತೇಕ ವ್ಯವಾಹರ, ಹಣ ವರ್ಗಾವಣೆ ಸೇರಿದಂತೆ ಎಲ್ಲವೂ ಡಿಜಿಟಲ್ ಆಗಿದೆ. ಇದೀಗ ಪಾಸ್‌ಪೋರ್ಟ್‌ನಲ್ಲೂ ಮಹತ್ತರ ಬದಲಾವಣೆ ಮಾಡಿದೆ. ಹಳೇ ಪಾಸ್‍‌ಪೋರ್ಟ್ ನೀತಿಗೆ ಸುಧಾರಣೆ ತಂದಿರುವ ಕೇಂದ್ರ ಸರ್ಕಾರ ಇದೀಗ ಇ ಪಾಸ್‌ಪೋರ್ಟ್ ಜಾರಿಗೆ ತಂದಿದೆ.

ವಾಟ್ಸಪ್ ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಮಾಡೋದು ಹೀಗೆ..!...

2021ರಿಂದ ಭಾರತದಲ್ಲಿಇ ಪಾಸ್‌ಪೋರ್ಟ್ ಸೇವೆ ಲಭ್ಯವಾಗಲಿದದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿರುವ ಇ ಪಾಸ್‌ಪೋರ್ಟ್ ಮಂದಿನ ವರ್ಷದಿಂದ ಎಲ್ಲರಿಗೂ ಲಭ್ಯವಾಗಲಿದೆ. ಹೊಸದಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದವರು ಹಾಗೂ ನವೀಕರಿಸುವವರಿಗೆ ಎಲೆಕ್ಟ್ರಾನಿಕ್ ಮೈಕ್ರೋಪ್ರೊಸೆಸರ್ ಚಿಪ್ ಇರುವ ನೂತನ ಇ ಪಾಸ್‌ಪೋರ್ಟ್ ಸಿಗಲಿದೆ.

ಈಗಾಗಲೇ 20,000 ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಇ ಪಾಸ್‌ಪೋರ್ಟ್ ನೀಡಲಾಗಿದೆ. ಐಟಿ ಕಂಪನಿಯ ನೆರವಿನೊಂದಿಗೆ ಕೇಂದ್ರ ಸರ್ಕಾರ ಅತೀ ದೊಡ್ಡ ಡಿಜಿಟಲೀಕರಣಕ್ಕೆ ಮುಂದಾಗಿದೆ. ಹೊಸ ವಿಧಾನದ ಮೂಲಕ ಪ್ರತಿ ಗಂಟೆಗೆ 10 ರಿಂದ 20,000 ಪಾಸ್‌ಪೋರ್ಟ್ ನೀಡಲು ಸಾಧ್ಯವಿದೆ. ಇದಕ್ಕಾಗಿ ದೆಹಲಿ ಹಾಗೂ ಚೆನ್ನೈನಲ್ಲಿ ಪಾಸ್‌ಪೋರ್ಟ್ ಕೇಂದ್ರಗಳನ್ನು ತೆರೆಯಲಾಗಿದೆ. 

ಇ ಪಾಸ್‌ಪೋರ್ಟ್ ವಿತರಣೆಗೆ ಪ್ರಮುಖ ಸವಾಲು ಡಾಟಾ ಸೇವರ್. ಪಾಸ್‌ಪೋರ್ಟ್‌ದಾರರ ಮಾಹಿತಿಯನ್ನು ಶೇಖರಿಸಿಡಲು  ಸರ್ವರ್ , ತಂತ್ರಾಂಶ ಸೇರಿದಂತೆ ಐಟಿ ಸಲ್ಯೂಶನ್ ಅವಶ್ಯಕತೆ ಇದೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರ ವಿನೂತನ ಪ್ಲಾನ್ ಸಿದ್ದಪಡಿಸಿದೆ. 2020ರಲ್ಲಿ ಪ್ರಾಯೋಗಿಕ ಹಂತದಲ್ಲಿ ಪರಿಶೀಲನೆ ನಡೆಸಲಿದೆ. 2021ರಿಂದ ನೂತನ ಇ ಪಾಸ್‌ಪೋರ್ಟ್ ವಿತರಣೆಯಾಗಲಿದೆ.

Latest Videos
Follow Us:
Download App:
  • android
  • ios