Asianet Suvarna News Asianet Suvarna News

ಪ್ಲೇಸ್ಟೋರ್‌ ರೀತಿ ದೇಸಿ ಆ್ಯಪ್‌ ಸ್ಟೋರ್‌: ಕೇಂದ್ರ ಸರ್ಕಾರದಿಂದ ಚಿಂತನೆ!

ಡಿಜಿಟಲ್‌ ಸೇವೆಗಳ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿರುವ ಗೂಗಲ್‌ ಮತ್ತು ಆ್ಯಪಲ್‌ ಸ್ಟೋರ್|  ಗೂಗಲ್‌ ಮತ್ತು ಆ್ಯಪಲ್‌ ಸ್ಟೋರ್‌ಗಳಿಗೆ ಪರ್ಯಾಯವಾಗಿ ಭಾರತೀಯ ಡಿಜಿಟಲ್‌ ಆ್ಯಪ್‌ಸ್ಟೋರ್‌ ಆರಂಭಿಸಲು ಸಿದ್ಧತೆ

Indian App Makers Want a National Alternative to Google Play pod
Author
Bangalore, First Published Oct 3, 2020, 10:11 AM IST

 

ನವದೆಹಲಿ(ಅ.03): ಡಿಜಿಟಲ್‌ ಸೇವೆಗಳ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿರುವ ಗೂಗಲ್‌ ಮತ್ತು ಆ್ಯಪಲ್‌ ಸ್ಟೋರ್‌ಗಳಿಗೆ ಪರ್ಯಾಯವಾಗಿ ಭಾರತೀಯ ಡಿಜಿಟಲ್‌ ಆ್ಯಪ್‌ಸ್ಟೋರ್‌ವೊಂದನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತಂತೆ ತಂತ್ರಜ್ಞಾನ ಕಂಪನಿಗಳಿಂದ ಬಂದಿರುವ ಮನವಿಗಳನ್ನು ಕೇಂದ್ರ ಸರ್ಕಾರ ಪರೀಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಕೇಂದ್ರೀಕೃತ ಆ್ಯಪ್‌ಗಳಿಗಾಗಿ ಭಾರತ ಈಗಾಗಲೇ ಒಂದು ಆ್ಯಪ್‌ಸ್ಟೋರ್‌ ಅನ್ನು ಹೊಂದಿದೆ. ಇದನ್ನು ಬಳಸಿಕೊಂಡು ದೊಡ್ಡ ಮಟ್ಟದ ಆ್ಯಪ್‌ಸ್ಟೋರ್‌ ಅನ್ನು ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ಇದೆ.

ಜೊತೆಗೆ ಮೊಬೈಲ್‌ ತಯಾರಿಕಾ ಕಂಪನಿಗಳು ಗೂಗಲ್‌ ಪ್ಲೇಸ್ಟೋರ್‌ಗೆ ಪರ್ಯಾಯವಾದ ಆ್ಯಪ್‌ಸ್ಟೋರ್‌ಗಳನ್ನು ಪೂರ್ವದಲ್ಲಿಯೇ ನೀಡಬೇಕು ಎಂಬ ನಿಯಮಗಳನ್ನು ರೂಪಿಸಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಭಾರತೀಯ ಆ್ಯಪ್‌ಸ್ಟೋರ್‌ ಅನ್ನು ಹೊರತರುವುದು ಅಷ್ಟುಸುಲಭವಲ್ಲ. ಗೂಗಲ್‌ ಮತ್ತು ಆ್ಯಪಲ್‌ ಕಂಪನಿಗಳು ತಂತ್ರಜ್ಞಾನ ಸಂಸ್ಥೆಗಳಿಗೆ ಆ್ಯಪ್‌ಗಳ ಅಭಿವೃದ್ಧಿಗಾಗಿ ಕೋಟ್ಯಂತರ ರು. ಹಣವನ್ನು ವೆಚ್ಚಮಾಡಿವೆ. ಗೂಗಲ್‌ನ್‌ ಆ್ಯಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌ ಭಾರತದ ಸ್ಮಾಟ್‌ಫೋನ್‌ ವಿಭಾಗದಲ್ಲಿ ಶೇ.98ರಷ್ಟುಮಾರುಕಟ್ಟೆಪಾಲನ್ನು ಹೊಂದಿವೆ. ಹೀಗಾಗಿ ಹೊಸ ಆ್ಯಪ್‌ಸ್ಟೋರ್‌ ಯಶಸ್ವಿ ಆಗುವುದು ಕಷ್ಟಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios