Asianet Suvarna News Asianet Suvarna News

India PC Shipments Q3 2021: ಪರ್ಸ್‌ನಲ್ ಕಂಪ್ಯೂಟರ್ ದಾಖಲೆಯ 53 ಲಕ್ಷ ಮಾರಾಟ: ಲೆನೊವೊ ನಂ.1!

*Q3 2021ರಲ್ಲಿ ದಾಖಲೆಯ PC ಮಾರಾಟ
*ಸಂಶೋಧನಾ ಸಂಸ್ಥೆ ಕ್ಯಾನಲಿಸ್‌ನ ವರದಿ
*ಮಾರುಕಟ್ಟೆಯಲಿ  ಶೇ27 ಲೆನೆವೊ ಪಾಲು
*HP-Dell-Acers-Asus ಇನ್‌ ಟಾಪ್‌ 5!

India PC Shipments 34 Percent surge a Record 53 Lakh Units in Q3 2021 Canalys mnj
Author
Bengaluru, First Published Dec 19, 2021, 4:12 PM IST

Tech Desk: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್‌ನ (Canalys) ವರದಿಯ ಪ್ರಕಾರ, 2021 ರಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ (Q3 ಮೂರನೇ ತ್ರೈಮಾಸಿಕ) ಭಾರತದ ಲ್ಯಾಪ್‌ಟಾಪ್  ಮಾರಾಟವು 34 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. ಲೆನೊವೊ ದೇಶೀಯ ಪರ್ಸ್ನಲ್ ಕಂಪ್ಯೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದರೆ HP ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.  ಡೆಲ್, ಏಸರ್ ಮತ್ತು ಆಸುಸ್ ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿವೆ. 

ಭಾರತದಲ್ಲಿನ ವರ್ಕ್‌ಸ್ಟೇಷನ್‌ಗಳು ಸೇರಿದಂತೆ ಡೆಸ್ಕ್‌ಟಾಪ್‌ಗಳು ಮತ್ತು ನೋಟ್‌ಬುಕ್‌ಗಳ ಒಟ್ಟು ಮಾರಟ ಮೂರನೇ ತ್ರೈಮಾಸಿಕದಲ್ಲಿ ದಾಖಲೆಯ 5.3 ಮಿಲಿಯನ್ ಯುನಿಟ್‌ಗಳನ್ನು ಮುಟ್ಟಿವೆ.  ಭಾರತದಲ್ಲಿ ವಿಶೇಷವಾಗಿ SMB (Small and Medium Business) ಗಳು ಮತ್ತು ದೊಡ್ಡ ಉದ್ಯಮಗಳಲ್ಲಿ ವೇಗವರ್ಧಿತ ಆರ್ಥಿಕ ಚೇತರಿಕೆಯಿಂದ ಬೆಳವಣಿಗೆಗೆ ಕಾರಣವಾಗಿದೆ ಎಂದು ಕ್ಯಾನಲಿಸ್ ವರದಿ ಹೇಳಿದೆ.

ದಾಖಲೆಯ 5.3 ಮಿಲಿಯನ್ ಯುನಿಟ್‌ ಮಾರಾಟ!

ಕ್ಯಾನಲಿಸ್‌ನ  ವರದಿಯ ಪ್ರಕಾರ, ಸಪ್ಲೈ ಚೇನ್ ಸವಾಲುಗಳ ಹೊರತಾಗಿಯೂ 2021 ರ ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ PC ಸಾಗಣೆಗಳು ದಾಖಲೆಯ 5.3 ಮಿಲಿಯನ್ ಯುನಿಟ್‌ಗಳನ್ನು ಮುಟ್ಟಿವೆ. ಇವುಗಳಲ್ಲಿ 0.6 ಮಿಲಿಯನ್ ಡೆಸ್ಕ್‌ಟಾಪ್‌ಗಳು, 3.5 ಮಿಲಿಯನ್ ನೋಟ್‌ಬುಕ್‌ಗಳು ಮತ್ತು 1.2 ಮಿಲಿಯನ್ ಟ್ಯಾಬ್ಲೆಟ್‌ಗಳು ಸೇರಿವೆ. ನೋಟ್‌ಬುಕ್ ಸಾಗಣೆಗಳು ವರ್ಷದಿಂದ ವರ್ಷಕ್ಕೆ ದಾಖಲೆಯ 31 ಪ್ರತಿಶತದಷ್ಟು ಬೆಳೆವಣಿಗೆ ಕಂಡಿವೆ.  ಟ್ಯಾಬ್ಲೆಟ್‌ಗಳ ಸಾಗಣೆಯು ವರ್ಷದಿಂದ ವರ್ಷಕ್ಕೆ 41 ಪ್ರತಿಶತದಷ್ಟು ಹೆಚ್ಚಾಗಿದೆ. 

Q3 2021 ರ ಅವಧಿಯಲ್ಲಿ ಡೆಸ್ಕ್‌ಟಾಪ್‌ಗಳ ಸಾಗಣೆಯು ವರ್ಷದಿಂದ ವರ್ಷಕ್ಕೆ 29 ಪ್ರತಿಶತದಷ್ಟು ಹೆಚ್ಚಾಗಿದೆ. ಕೊರೋನಾ ಕಾರಣದಿಂದ ಜನರು ವರ್ಕ್‌ ಫ್ರಾಮ್‌ ಹೋಮ್‌ ಮತ್ತು ಆನಲೈನ್‌ ಕ್ಲಾಸ್‌ಗಳ ಮೊರೆ ಹೋಗಿದ್ದರಿಂದ  PC ಗಳ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಕ್ಯಾನಲಿಸ್ ವರದಿಯ ಪ್ರಕಾರ ಟ್ಯಾಬ್ಲೆಟ್ ಸಾಗಣೆಯಲ್ಲಿ, ಲೆನೊವೊ, ಸ್ಯಾಮ್‌ಸಂಗ್, ಆಪಲ್, ಏಸರ್ ಮತ್ತು ಹುವಾವೇ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ.

Lenevo: 27% Share in Market

ಈಗಾಗಲೇ ಉಲ್ಲೇಖಿಸಿದಂತೆ 2020 ರ Q4 ರ ನಂತರ ಮೊದಲ ಬಾರಿಗೆ ಒಟ್ಟಾರೆ PC ಮಾರುಕಟ್ಟೆಯಲ್ಲಿ (ಟ್ಯಾಬ್ಲೆಟ್‌ಗಳನ್ನು ಒಳಗೊಂಡಂತೆ)  HPಯನ್ನು ಹಿಂದಿಕ್ಕಿ ಲೆನೆವೂ ಮೊದಲ ಸ್ಥಾನವನ್ನು ಪಡೆದಿದೆ. ಇದು 31 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ ಮತ್ತು ಮಾರುಕಟ್ಟೆಯಲಿ  27 ಪ್ರತಿಶತವನ್ನು ಪಾಲನ್ನು ಪಡೆದುಕೊಂಡಿದೆ. ಕಂಪನಿಯು Q3 2021 ರಲ್ಲಿ ಸುಮಾರು 600,000 ಟ್ಯಾಬ್ಲೆಟ್‌ಗಳನ್ನು ರವಾನಿಸಿದೆ.

HP: 24% Share in Market

Q3 2021 ರಲ್ಲಿ ಸುಮಾರು 1 ಮಿಲಿಯನ್ ನೋಟ್‌ಬುಕ್‌ಗಳನ್ನು ರವಾನಿಸಿದ ಪಟ್ಟಿಯಲ್ಲಿ ಅಮೆರಿಕಾದ HP ಎರಡನೇ ಸ್ಥಾನ ಪಡೆದಿದೆ ಹಾಗೂ 31 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ.  Q3 2021ನಲ್ಲಿ ಮಾರುಕಟ್ಟೆಯಲ್ಲಿ  24 ಪ್ರತಿಶತ ಪಾಲನ್ನು ಹೊಂದಿದೆ.

Dell: 13.7% Share in Market

ಕ್ಯಾನಲಿಸ್ ವರದಿಯ ಪ್ರಕಾರ ಅತಿ ಹೆಚ್ಚು ಮುಖ್ಯವಾಗಿ ನೋಟ್‌ಬುಕ್‌ ಮಾರಟಗಳೊಂದಿಗೆ ಡೆಲ್ 44 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ 50 ಪ್ರತಿಶತದಷ್ಟು ಬೆಳೆವಣಿಗೆ ಕಂಡಿದೆ. ಜತೆಗೆ 13.7 ರಷ್ಟು ಮಾರುಕಟ್ಟೆ ಪಾಲನ್ನು ಸಹ ಪಡೆದುಕೊಂಡಿದೆ. 

Acer & Asus: 7.5% & 7.1% Market Share

ಮಾರುಕಟ್ಟೆಯಲ್ಲಿನ ಮತ್ತೊಂದು ಸ್ಪರ್ಧಿ ಏಸರ್ ಮಾರಾಟಗಳು ವರ್ಷದಿಂದ ವರ್ಷಕ್ಕೆ 96 ಪ್ರತಿಶತದಷ್ಟು ಏರಿಕೆ ಮೂಲಕ  ನಾಲ್ಕನೇ ಸ್ಥಾನಕ್ಕೆದಲ್ಲಿದೆ. ವರದಿಯ ಪ್ರಕಾರ, ಏಸರ್‌ನ ನೋಟ್‌ಬುಕ್ ಸಾಗಣೆಗಳು ವರ್ಷದಿಂದ ವರ್ಷಕ್ಕೆ 229,000 ಕ್ಕೆ ದ್ವಿಗುಣಗೊಂಡಿದೆ ಮತ್ತು ಕಂಪನಿಯು 7.5 ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಆಸುಸ್ 41 ಪ್ರತಿಶತ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿ  7.1 ಪ್ರತಿಶತ ಮಾರುಕಟ್ಟೆ ಪಾಲನ್ನು ಗಳಿಸಿದೆ. ಕಂಪನಿಯು 363,000 ನೋಟ್‌ಬುಕ್‌ಗಳನ್ನು ರವಾನಿಸಿದೆ.

ಇದನ್ನೂ ಓದಿ: 

1) Infinix InBook X1 ಸರಣಿಯ 3 ಲ್ಯಾಪ್‌ಟಾಪ್‌ಗಳು ಭಾರತದಲ್ಲಿ ಬಿಡುಗಡೆ : ಡಿ. 15ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ!

2) Best Laptops for Students: 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

3) Laptop: 544 ಗ್ರಾಂ ತೂಕದ ಮೈಕ್ರೋಸಾಫ್ಟ್ ಸರ್ಫೇಸ್ ಗೋ-3 ಲ್ಯಾಪ್‌ಟಾಪ್ ಬಿಡುಗಡೆ!

Follow Us:
Download App:
  • android
  • ios