Laptop: 544 ಗ್ರಾಂ ತೂಕದ ಮೈಕ್ರೋಸಾಫ್ಟ್ ಸರ್ಫೇಸ್ ಗೋ-3 ಲ್ಯಾಪ್‌ಟಾಪ್ ಬಿಡುಗಡೆ!

  • ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಲ್ಯಾಪ್‌ಟಾಪ್ ಬೆಲೆ  57,999 ರೂ 
  • 1080ಪಿ ಕ್ಯಾಮೆರಾ, ಸ್ಟುಡಿಯೋ ಮೈಕ್ರೋಫೋನ್,  10.5 ಇಂಚುಗಳ ಡಿಸ್ ಪ್ಲೇ
  • ಅತ್ಯಾಧುನಿಕ ಹಾಗೂ ಕಡಿಮೆ ತೂಕದ ಲ್ಯಾಪ್‌ಟಾಪ್
Microsoft Introducing Surface Go 3  most portable Surface built for Windows 11 ckm

ಬೆಂಗಳೂರು(ನ.19):  ಮೈಕ್ರೋಸಾಫ್ಟ್(Microsoft)  ಹೊಸ ಸರ್ಫೇಸ್ ಗೋ-3 ಲ್ಯಾಪ್‌ಟಾಪ್(Laptop) ಬಿಡುಗಡೆ ಮಾಡಿದ್ದು, Amazon ನಲ್ಲಿ ಲಭ್ಯವಾಗಲಿದೆ. ಇದರ ಬೆಲೆ 57,999 ರೂಪಾಯಿಗಳಿಂದ ಆರಂಭವಾಗಲಿದೆ. ಈ ಸರ್ಫೇಸ್ ಗೋ-3 ಕೇವಲ 1.2 ಪೌಂಡ್ ನಷ್ಟು (544 ಗ್ರಾಂ) ತೂಕವಿದ್ದು, 1080ಪಿ ಕ್ಯಾಮೆರಾಗಳನ್ನು ಹೊಂದಿದೆ. ಇದು ವಿಶ್ವದರ್ಜೆಯ ಸ್ಟುಡಿಯೋ ಮೈಕ್ರೋಫೋನ್ ಗಳು, ಡಾಲ್ಬಿ ಆಡಿಯೋ ಮತ್ತು 10.5 ಇಂಚುಗಳ ಡಿಸ್ ಪ್ಲೇಯನ್ನು ಹೊಂದಿದೆ. ಈ ಸಾಧನವು ಎಲ್ಲಿ ಬೇಕಾದರೂ ಸಂಪರ್ಕ ಸಾಧಿಸಲು ಮತ್ತು ಸಮನ್ವಯ ಸಾಧಿಸಲು ಉಪಯುಕ್ತವಾಗಿದೆ.  ಈ ಬ್ಯುಸಿನೆಸ್ ಯೂನಿಟ್ಸ್ ಗೆ ಸರ್ಫೇಸ್ ನ ಬೆಲೆ 42,999 ರೂಪಾಯಿಗಳಿಂದ ಆರಂಭವಾಗಲಿದೆ.

ಭಾರತಕ್ಕೆ(India) ಹೊಸ ಸರ್ಫೇಸ್ ಗೋ-3 ಯನ್ನು ಪರಿಚಯಿಸಲು ನಮಗೆ ಸಂತಸವೆನಿಸುತ್ತಿದೆ. ಇದರ ಮೂಲಕ ನಾವು ವಿಂಡೋಸ್ 11 ಕ್ಕೆ ನಮ್ಮ ಸರ್ಫೇಸ್ ಪೋರ್ಟ್ ಫೋಲಿಯೋವನ್ನು ವಿಸ್ತರಣೆ ಮಾಡುತ್ತಿದ್ದೇವೆ. ಸರ್ಫೇಸ್ ಆಗಿ ನಮ್ಮ ಇತಿಹಾಸದುದ್ದಕ್ಕೂ, ಹಾರ್ಡ್ ವೇರ್(hardware) ಮತ್ತು ಸಾಫ್ಟ್ ವೇರ್(software) ಇಂಟರ್ ಸೆಕ್ಷನ್ ನಲ್ಲಿ ನಾವೀನ್ಯವಾದ ಮತ್ತು ಹೆಚ್ಚು ಅರ್ಥಪೂರ್ಣವಾದ ಅನುಭವಗಳನ್ನು ನಾವು ನೀಡುತ್ತಿದ್ದೇವೆ. ಈ ಪರಿಕಲ್ಪನೆಯು ಸರ್ಫೇಸ್ ಗೆ ವೇಗವರ್ಧಕವಾಗಿ ಪರಿಣಮಿಸಿದೆ. ವಿಂಡೋಸ್ ಕೇವಲ ಒಂದು ಹಂತವಾಗಿರದೇ ಪ್ಲಾಟ್ ಫಾರ್ಮ್ ಮತ್ತು ಪರಿಸರ ವ್ಯವಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಯಂತ್ರಾಂಶವನ್ನು ನಿರ್ಮಾಣ ಮಾಡಲು ಇದು ಸಹಕಾರಿಯಾಗುತ್ತದೆ. ಈ ಹೊಸ ಉತ್ಪನ್ನವು ಹೆಚ್ಚು ಹೆಚ್ಚು ಜನರು ಯಾವುದೇ ಸಮಯದಲ್ಲಾದರೂ, ಎಲ್ಲಿ ಬೇಕಾದರೂ ಸಹಭಾಗಿತ್ವ ಹೊಂದಲು ಇದು ನೆರವಾಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಈ  ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ ಹೇಳಿದ್ದಾರೆ.

ಉದ್ಯೋಗಿಗಳಿಗೆ 1.1 ಲಕ್ಷ ಕೊರೋನಾ ಬೋನಸ್ ಕೊಟ್ಟ ಮೈಕ್ರೋಸಾಫ್ಟ್

ಸರ್ಫೇಸ್ ಗೋ-3 ಒಂದು ಅತ್ಯುತ್ತಮ ಪೋರ್ಟೇಬಲ್ ಸರ್ಫೇಸ್ 2-ಇನ್-1 ಆಗಿದ್ದು, ಇದು ದೈನಂದಿನ ಕೆಲಸಗಳಿಗೆ, ಹೋಂವರ್ಕ್(Home Work) ಮತ್ತು ಪ್ಲೇಗಳಿಗೆ ಅತ್ಯುತ್ತಮ ಡಿವೈಸ್ ಆಗಿದೆ. ವಿಂಡೋಸ್ 11 ನ(Windows 11) ಅತ್ಯುತ್ತಮವಾದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸರ್ಫೇಸ್ ಗೋ 3 Gen Intel Core i3 ಪ್ರೊಸೆಸರ್ ನೊಂದಿಗೆ ವೇಗವನ್ನು 60% ಹೆಚ್ಚಿಸಲಿದೆ. ಇದರಲ್ಲಿ ಎಲ್ ಟಿಇ ಸುಧಾರಿತ, ಇಡೀ ದಿನ ಬ್ಯಾಟರಿ ಬಾಳಿಕೆ, ಅಂತರ್ನಿರ್ಮಿತವಾದ ಮೈಕ್ರೋಸಾಫ್ಟ್ ಭದ್ರತೆ ಇದೆ. ಡಿಜಿಟಲ್ ಪೆನ್ ಮತ್ತು ಟಚ್ ನೊಂದಿಗೆ ಟ್ಯಾಬ್ಲೆಟ್ ನಿಂದ ಲ್ಯಾಪ್ ಟಾಪ್ ಗೆ ಬಹುಮುಖತೆಗಾಗಿ ಗರಿಷ್ಠಗೊಳಿಸಲಾಗಿದೆ. ಸಂಕೀರ್ಣತೆಯನ್ನು ಕಡಿಮೆ ಮಾಡುವ ನಿಟ್ಟಿಲ್ಲಿ ನಿರ್ಮಾಣ ಮಾಡಲಾಗಿದ್ದು, ಸರ್ಫೇಸ್ ಗೋ 3 ನ ವಾಣಿಜ್ಯ ರೂಪಾಂತರಗಳನ್ನು ಝೀರೋ-ಟಚ್ ಅನುಭವಕ್ಕಾಗಿ ವಿಂಡೋಸ್ ಆಟೋಪೈಲಟ್ ಅನ್ನು ಹೊಂದಿರುವ ಉದ್ಯೋಗಿಗಳಿಗೆ ನೇರವಾಗಿ ಇದನ್ನು ನಿಯೋಜನೆ ಮಾಡಬಹುದಾಗಿದೆ. ಡಿವೈಸ್ ಗಳು ಆನ್ ಸೈಟ್ ಇರಲಿ ಅಥವಾ ಫೀಲ್ಡ್ ನಲ್ಲಿರಲಿ ಇದರಲ್ಲಿನ ಬಿಲ್ಟ್ –ಇನ್ ಕ್ಲೌಡ್ –ಪವರ್ಡ್ ಸೆಕ್ಯೂರಿಟಿಯನ್ನು ಕಂಪನಿಯ ಮಾಹಿತಿ ಮತ್ತು ಗ್ರಾಹಕರ ಡೇಟಾವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.

ಸ್ನೇಹಿತರು, ಕುಟುಂಬಸ್ಥರೊಂದಿಗೆ ಮಾತೃಭಾಷೆಯಲ್ಲಿ ಕನೆಕ್ಟ್; ಮೈಕ್ರೋಸಾಫ್ಟ್ ಟೀಮ್ಸ್ ಕನ್ನಡದಲ್ಲಿ ಲಭ್ಯ!

 ಗ್ರಾಹಕರು ಅವಲಂಬನೆ ಹೊಂದಿರುವ ಮೈಕ್ರೋಸಾಫ್ಟ್ ಅನುಭವಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಫೇಸ್ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಡಿವೈಸ್ ಸಹ ನಂಬಲಾಗದಂತಹ ಟೈಪಿಂಗ್, ಪ್ರೀಮಿಯಂ ಸಾಮಗ್ರಿಗಳು, ಸುಸಜ್ಜಿತವಾಗಿ ನೆಲೆಗೊಳಿಸಲಾಗಿರುವ ಕ್ಯಾಮೆರಾಗಳು ಮತ್ತು ಸಂಪೂರ್ಣವಾಗಿ ಅಳತೆ ಮಾಡಿದ ದಾಖಲೆಗಳಿಗೆ 3:2 ರ ಆಕಾರ ಅನುಪಾತಗಳನ್ನು ನೀಡುತ್ತದೆ. ಈ ಹೊಸ ಡಿವೈಸ್ ಗಳು ಬಳಕೆದಾರರು ಮೈಕ್ರೋಸಾಫ್ಟ್ 365, ಟೀಮ್ಸ್, ಎಡ್ಜ್ ಮತ್ತು ಇನ್ನೂ ಹೆಚ್ಚಿನ ಸಂಪೂರ್ಣ ಶಕ್ತಿಯನ್ನು ಅರಿತುಕೊಳ್ಳಬಹುದೆಂಬುದನ್ನು ಖಚಿತಪಡಿಸುತ್ತದೆ. ವಿಂಡೋಸ್ 11 ನೊಂದಿಗೆ ಸರ್ಫೇಸ್ ಗೋ 3 ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನ ಚಿಂತನಾಶೀಲವಾದ ವಿನ್ಯಾಸದ ಮೂಲಕ ರಚನೆಯಾಗಿರುವ ಪ್ರಯೋಜನಗಳು ಮತ್ತು ಸಾಮರ್ಥ್ಯಗಳನ್ನು ಅನ್ ಲಾಕ್ ಮಾಡುತ್ತದೆ.

Latest Videos
Follow Us:
Download App:
  • android
  • ios