Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!
*BSF ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿ
*ಮೋದಿ ಸರ್ಕಾರ ಗಡಿ ಭದ್ರತೆಗೆ ವಿಶೇಷ ಒತ್ತು ನೀಡಿದೆ : ಅಮಿತ್ ಶಾ
*BSF,DRDO,NSG ಯಿಂದ ಆಂಟಿ-ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ!
ನವದೆಹಲಿ(ಡಿ. 05): ದೇಶದ ಗಡಿಯಲ್ಲಿ ವೈರಿ ರಾಷ್ಟ್ರಗಳ ಡ್ರೋನ್ ಗಳಿಂದ (Enemy Drone) ನಡೆಯುತ್ತಿರುವ ದಾಳಿಯನ್ನು ತಡೆಯಲು ಭಾರತವು ಸ್ಥಳೀಯ ಆಂಟಿ-ಡ್ರೋನ್ ತಂತ್ರಜ್ಞಾನವನ್ನು (indigenous anti-drone technology) ಅಭಿವೃದ್ಧಿಪಡಿಸುತ್ತಿದೆ ಮತ್ತು ಇದು ಶೀಘ್ರದಲ್ಲೇ ಭದ್ರತಾ ಪಡೆಗಳಿಗೆ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಹೇಳಿದರು. ಗಡಿ ಭದ್ರತಾ ಪಡೆಯ (Border Security Force) 57 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ (Raising Day) ಸಂದರ್ಭದಲ್ಲಿ ಮಾತನಾಡಿದ ಶಾ, ಮೋದಿ ಸರ್ಕಾರಕ್ಕೆ, ಗಡಿ ಭದ್ರತೆಯೇ ರಾಷ್ಟ್ರೀಯ ಭದ್ರತೆಯಾಗಿದೆ ಮತ್ತು ಸೇನಾ ಪಡೆಗಳಿಗೆ ಸರ್ಕಾರ ವಿಶ್ವದ ಅತ್ಯುತ್ತಮ ಗಡಿ ಕಾವಲು ತಂತ್ರಜ್ಞಾನಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
1965ರಲ್ಲಿ ಬಿಎಸ್‌ಎಫ್ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಗಡಿಯಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಶಾ ತಿಳಿಸಿದರು. "ದೇಶವು ಸುರಕ್ಷಿತವಾಗಿದ್ದಾಗ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಬಹುದು ಮತ್ತು ಮುನ್ನಡೆಯಬಹುದು. ಗಡಿಗಳನ್ನು ಕಾಪಾಡುವ (Border Security) ಮೂಲಕ ನೀವು ದೇಶದ ಸುರಕ್ಷತೆಯನ್ನು ಖಾತ್ರಿಪಡಿಸುತ್ತೀರಿ ಮತ್ತು ಜಾಗತಿಕವಾಗಿ ಭಾರತಕ್ಕೆ ವೇದಿಕೆಯನ್ನು ಒದಗಿಸುತ್ತೀರಿ ಎಂಬುದನ್ನು ಯಾವಾಗಲೂ ನೆನಪಿಡಿ." ಎಂದು ಶಾ ಬಿಎಸ್‌ಎಫ್ ಸಿಬ್ಬಂದಿಗೆ ತಿಳಿಸಿದರು.
Farmers Protest: ರೈತರ ಸಮಸ್ಯೆ ಇತ್ಯರ್ಥಕ್ಕೆ ಶಾ ಪ್ರವೇಶ : ಮುಖಂಡರ ಜೊತೆ ಕೇಂದ್ರ ಗೃಹ ಸಚಿವರ ಮಾತುಕತೆ!
ಭಾರತದಲ್ಲೇ ಆ್ಯಂಟಿ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ!
"ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳು ಬಿಎಸ್‌ಎಫ್‌ಗೆ ಲಭ್ಯವಾಗುವಂತೆ ಸರ್ಕಾರ ಖಚಿತಪಡಿಸುತ್ತದೆ. ಇದು ಸರ್ಕಾರದ ಬದ್ಧತೆಯಾಗಿದೆ. ಡ್ರೋನ್‌ಗಳಿಂದ ಹೆಚ್ಚುತ್ತಿರುವ ಅಪಾಯದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಬಿಎಸ್‌ಎಫ್ (BSF), ಡಿಆರ್‌ಡಿಒ (DRDO) ಮತ್ತು ಎನ್‌ಎಸ್‌ಜಿ (NSG) ಆಂಟಿ-ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ನಾವು ನಮ್ಮ ವಿಜ್ಞಾನಿಗಳ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಸ್ಥಳೀಯ ಆ್ಯಂಟಿ ಡ್ರೋನ್ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಮೋದಿ ಸರ್ಕಾರ ಗಡಿ ಭದ್ರತೆಗೆ ವಿಶೇಷ ಒತ್ತು ನೀಡಿದೆ!
"2014 ರಿಂದ ಮೋದಿ ಸರ್ಕಾರ (PM Narendra Modi Government) ಗಡಿ ಭದ್ರತೆಗೆ ವಿಶೇಷ ಒತ್ತು ನೀಡಿದೆ. ಗಡಿಯಲ್ಲಿ ಅತಿಕ್ರಮಣ ಪ್ರಯತ್ನಗಳು, ಭದ್ರತಾ ಪಡೆಗಳು ಮತ್ತು ಸಿಎಪಿಎಫ್‌ಗಳ (CAPF) ಮೇಲೆ ದಾಳಿ ನಡೆದಾಗಲೆಲ್ಲಾ ನಾವು ತಕ್ಷಣದ ಪ್ರತೀಕಾರವನ್ನು ಮಾಡಿದ್ದೇವೆ. ನಮ್ಮ ಗಡಿ ಅಥವಾ ಸೈನಿಕರನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಭಾರತ ನಿರ್ಣಯ ತೆಗೆದುಕೊಂಡಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉರಿ (URI) ಮತ್ತು ಪುಲ್ವಾಮಾ (Pulwama) ದಾಳಿಯ ನಂತರ ಕ್ರಮವಾಗಿ ಸರ್ಜಿಕಲ್ ಮತ್ತು ವೈಮಾನಿಕ ದಾಳಿಯ ರೂಪದಲ್ಲಿ ಬಲವಾದ ಪ್ರತೀಕಾರವನ್ನು ನೀಡಿತ್ತು. ಇಡೀ ವಿಶ್ವವೇ ಈ ಕ್ರಮವನ್ನು ಶ್ಲಾಘಿಸಿದೆ" ಎಂದು ಶಾ ಹೇಳಿದರು.
Israeli Heron Drones: ಚೀನಾ ಮೇಲೆ ಕಣ್ಣಿಡಲು ಇಸ್ರೇಲ್ ಡ್ರೋನ್ ಆಗಮನ!
ಗಡಿ ಭಾಗಗಳಿಗೆ ರಸ್ತೆ ನಿರ್ಮಾಣಕ್ಕೆ 44,600 ಕೋಟಿ ರೂ.!
ಬಿಎಸ್‌ಎಫ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು 50,000 ಯೋಧರನ್ನು ನೇಮಿಸಿಕೊಂಡಿದೆ ಮತ್ತು ಅವರ ತರಬೇತಿಯನ್ನು ಪ್ರಾರಂಭಿಸಲಾಗಿದೆ. "2008-14ರ ಅವಧಿಯಲ್ಲಿ ಗಡಿ ಭಾಗಗಳಿಗೆ ರಸ್ತೆ ನಿರ್ಮಾಣ ಬಜೆಟ್ 23,000 ಕೋಟಿ ಆಗಿತ್ತು. 2014 ಮತ್ತು 2020 ರ ನಡುವೆ ಮೋದಿ ಸರ್ಕಾರವು ಬಜೆಟ್ ಅನ್ನು 23,700 ಕೋಟಿ ರೂ.ಗಳಿಂದ 44,600 ಕೋಟಿ ರೂ.ಗೆ ಹೆಚ್ಚಿಸಿದೆ. ಇದು ಗಡಿ ಪ್ರದೇಶದ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ" ಎಂದು ಶಾ ಮಾಹಿತಿ ನೀಡಿದರು.