Farmers Protest: ರೈತರ ಸಮಸ್ಯೆ ಇತ್ಯರ್ಥಕ್ಕೆ ಶಾ ಪ್ರವೇಶ : ಮುಖಂಡರ ಜೊತೆ ಕೇಂದ್ರ ಗೃಹ ಸಚಿವರ ಮಾತುಕತೆ!
*ರೈತ ಮುಖಂಡರಿಗೆ ಕರೆ ಮಾಡಿ ಮಾತುಕತೆ ಆಹ್ವಾನ
*ರೈತ ಮುಖಂಡರ ಜೊತೆ ಕೇಂದ್ರ ಗೃಹ ಸಚಿವರ ಮಾತುಕತೆ
*ಆಹ್ವಾನದ ಬೆನ್ನಲ್ಲೇ ಮಾತುಕತೆಗೆ 5 ಜನರ ಸಮಿತಿ
*ಪ್ರತಿಭಟನೆ ಕುರಿತು ರೈತ ಸಂಘಟನೆಗಳಲ್ಲಿ ಒಡಕು
ನವದೆಹಲಿ(ಡಿ. 05): ಒಂದು ವರ್ಷದಿಂದ ಕಗ್ಗಂಟಾಗಿ ಉಳಿದಿರುವ ರೈತರ ಪ್ರತಿಭಟನೆಗೆ (Farmers Protest) ಶಾಂತಿಯುತ ಪರಿಹಾರ ಕಂಡುಹಿಡಿಯಲು ಇದೀಗ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮಧ್ಯಪ್ರವೇಶ ಮಾಡಿದ್ದಾರೆ. ಅವರ ಈ ಪ್ರವೇಶ ಫಲಕೊಟ್ಟಿದ್ದು, ಬಾಕಿ ವಿಷಯಗಳ ಕುರಿತು ಕೇಂದ್ರದ ಸಮಾಲೋಚನೆ ನಡೆಸಲು ರೈತರ ಮುಖಂಡರು 5 ಸದಸ್ಯರ ಸಮಿತಿಯೊಂದನ್ನು ( Five member Committee) ರಚಿಸಿದ್ದಾರೆ. ಅಲ್ಲದೆ ಮಾತುಕತೆ ಫಲ ಕೊಟ್ಟಲ್ಲಿ ತಮ್ಮ ಹೋರಾಟ ಕೈಬಿಡುವುದಾಗಿ ಘೋಷಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ 3 ಕೃಷಿ ಕಾಯ್ದೆಗಳನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಮಸೂದೆ ಮೂಲಕ ರದ್ದುಪಡಿಸಿತ್ತು (Farm Laws Repeal). ಅದರ ಬೆನ್ನಲ್ಲೇ ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ರೈತ ಮುಖಂಡರಿಗೆ ಕರೆ ಮಾಡಿ, ಬಾಕಿ ಉಳಿದ ಎಲ್ಲಾ ವಿಷಯಗಳನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಹೀಗಾಗಿ ಸಮಾಲೋಚನೆಗಾಗಿ ರೈತರ ಸಮಿತಿ ರಚಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.
Delhi-Saharanpur-Dehradun Economic Corridor: ದೇಶದ ಮೊದಲ ವನ್ಯಜೀವಿ ಕಾರಿಡಾರ್‌ಗೆ ಮೋದಿ ಶಂಕು ಸ್ಥಾಪನೆ!
ಇದಕ್ಕೆ ಸ್ಪಂದಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ(Samyukth Kisan Morcha) ಶನಿವಾರ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ರೈತ ಮುಖಂಡರೊಬ್ಬರು, ‘ನಮ್ಮ ಒತ್ತಾಯದಂತೆ ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆಯಲಾಗಿದೆ. ಅಲ್ಲದೆ ರೈತರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ಕಟಿಬದ್ಧವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಮಾತುಕತೆಗಾಗಿ ಸಮಿತಿ ರಚಿಸುವಂತೆ ಕೋರಿದ್ದು, ಈ ಪ್ರಕಾರ ನಾವು ಸಮಿತಿಯೊಂದನ್ನು ರಚಿಸಿದ್ದೇವೆ’ ಎಂದು ಹೇಳಿದರು.
Onions Bring Tears to Farmer :1 ಟನ್ ಈರುಳ್ಳಿ ಮಾರಿದ ರೈತಗೆ ಉಳಿದದ್ದು ಕೇವಲ 13 ರುಪಾಯಿ!
ಆದರೆ, ರೈತರ ವಿರುದ್ಧ ದಾಖಲಾಗಿರುವ ಸುಳ್ಳು ಕೇಸ್‌ಗಳನ್ನು ಹಿಂಪಡೆಯುವವರೆಗೆ ಮತ್ತು ಈ ಕುರಿತು ಲಿಖಿತ ಭರವಸೆ ನೀಡುವವರೆಗೆ ಪ್ರತಿಭಟನಾ ಸ್ಥಳ ಸಿಂಘೂ ಗಡೆಯಿಂದ ನಿರ್ಗಮಿಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಡಿ.7ರಂದು ಮತ್ತೆ ಸಭೆ ನಡೆಸಲಾಗುತ್ತದೆ ಎಂದು ಎಸ್‌ಕೆಎಂ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಪ್ರತಿಭಟನೆ ಕುರಿತು ರೈತ ಸಂಘಟನೆಗಳಲ್ಲಿ ಒಡಕು
ಕೃಷಿ ಕಾಯ್ದೆಗಳು ಹಿಂಪಡೆದ (Farm Laws Repeal) ನಂತರವೂ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮುಂದುವೆಸುವ ಕುರಿತಂತೆ ರೈತ ಸಂಘಟನೆಗಳಲ್ಲಿ ಒಡಕು ಮೂಡಿದೆ. ಪಂಜಾಬ್‌ನಿಂದ ಪ್ರತಿಭಟನೆಗೆ ಆಗಮಿಸಿರುವ ರೈತರು ಹಿಂದಿರುಗುವ ಆಸಕ್ತಿ ತೋರಿದ್ದಾರೆ. ಆದರೆ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರಾಕರಿಸಿದೆ. 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವ ರೈತರನ್ನು ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿ ಪ್ರತಿಭಟನೆ ಮುಂದುವರೆಸುವಂತೆ ಬಲವಂತ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಕಾಯ್ದೆ ರದ್ದು ಮಸೂದೆಗೆ ರಾಷ್ಟ್ರಪತಿ ಅನುಮೋದನೆ!
ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ನೀಡಿದಂತೆ ವಿವಾದಿತ ಮೂರು ಕೃಷಿ ಕಾಯ್ದೆ(Farm Laws) ರದ್ದು ಅದಿಕೃತಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಕೃಷಿ ಕಾಯ್ದೆ ರದ್ದು ಮಸೂದೆಗೆ ಅನುಮೋದನೆ ನೀಡಿದ್ದಾರೆ. ಜೊತೆಗೆ ಕಾಯ್ದೆ ರದ್ದತಿ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ರೈತ ಸಂಘಟೆನೆಗಳು ಹೊಸ 6 ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದಂತೆ ಚಳಿಗಾಲದ ಅಧಿವೇಶನದಲ್ಲಿ(winter session) ಮೂರು ಕೃಷಿ ಕಾಯ್ದೆ ಹಿಂಪಡೆಯುವ ಕಾನೂನು ಪ್ರಕ್ರಿಯೆ ಆರಂಭಗೊಂಡಿತ್ತು. ಮೊದಲು ಲೋಕಸಭೆ( Lok Sabha) , ಬಳಿಕ ರಾಜ್ಯಸಭೆಯಲ್ಲಿ(Rajya Sabha) ಧ್ವನಿಮತದ ಮೂಲಕ ಕೃಷಿ ಮಸೂದೆ ಹಿಂಪಡೆಯಲು ಅಂಗೀಕಾರ ನೀಡಲಾಗಿತ್ತು. ಈ ಪ್ರಕ್ರಿಯೆ ಬಳಿಕ ರಾಮನಾಥ್ ಕೋವಿಂದ್ ಕೃಷಿ ಮಸೂದೆ ಹಿಂಪಡೆಯಲು ಅಂಕಿತ ಹಾಕಿದ್ದಾರೆ.