Asianet Suvarna News Asianet Suvarna News

ಸೆಂಟರ್ ಆಫ್ ಮಿಲ್ಕಿ ವೇ ನೋಡಿ: ಅಂತಿಂಥದ್ದಲ್ಲ ‘ದೊಡ್ಮನೆ’ ಮೋಡಿ!

ಕ್ಷಿರಪಥದ ಮಧ್ಯಭಾಗ ನೋಡಲು ಸಜ್ಜಾಗಿ ಕುಳಿತ ಮಾನ ಜನಾಂಗ| ಶೀಘ್ರದಲ್ಲೇ ಹಾಲುಹಾದಿ ನಕ್ಷತ್ರಪುಂಜದ ಮಧ್ಯಭಾಗ ಕಣ್ತುಂಬಿಕೊಳ್ಳುವ ಭಾಗ್ಯ|  ಮಿಲ್ಕಿ ವೇ ಗ್ಯಾಲಕ್ಸಿಯ ಮಧ್ಯಭಾಗ ತೋರಿಸಲಿದೆ ಜೇಮ್ಸ್ ವೆಬ್ ಟೆಲಿಸ್ಕೋಪ್| ಮಾರ್ಚ್ 30, 2021ರಲ್ಲಿ ಕಕ್ಷೆಗೆ ಸೇರಲಿರುವ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್| ಗ್ಯಾಲ್ಸಕಿ ಮಧ್ಯಭಾಗ ಸೀಳಲಿರುವ ಅತ್ಯಾಧುನಿಕ ಇನ್ಫ್ರಾರೆಡ್ ತಂತ್ರಜ್ಞಾನ| ಗ್ಯಾಲಕ್ಸಿಗಳ ರಚೆನಯ ಅಧ್ಯಯನಕ್ಕೆ ಸಹಾಯವಾಗಲಿದೆ ಜೇಮ್ಸ್ ವೆಬ್ ಟೆಲಿಸ್ಕೋಪ್| ಕಪ್ಪುರಂಧ್ರಗಳ ಉಗಮನಕ್ಕೆ ಕಾರಣ ಕಂಡುಹಿಡಿಲಿದೆ ಜೇಮ್ಸ್ ವೆಬ್ ಟೆಲಿಸ್ಕೋಪ್| 

Milky Way Galaxy Center Will Be Revealed By NASA Webb Telescope
Author
Bengaluru, First Published Oct 10, 2019, 7:42 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಅ.10): ಮನುಷ್ಯನ ನಾನು, ನನ್ನದು, ನನಗಾಗಿ...ಎಂಬ ಆಸೆ ಅಂತರಾತ್ಮದಿಂದ ಪ್ರಾರಂಭವಾಗಿ, ಸೌರಮಂಡಲವನ್ನು ದಾಟಿ, ಎಲ್ಲ ಗ್ರಹಕಾಯಗಳ ಆಶ್ರಯತಾಣವಾಗಿರುವ ನಮ್ಮ ಹಾಲುಹಾದಿ ನಕ್ಷತ್ರಪುಂಜದವರೆಗೆ ಬಂದು ನಿಲ್ಲುತ್ತದೆ.

ಕೆಲವು ಅತೃಪ್ತ ಆತ್ಮಗಳು ಮಾತ್ರ ಇದಕ್ಕಿಂತ ಆಚೆ ಹೋಗಿ ಇಡೀ ಬ್ರಹ್ಮಾಂಡದಲ್ಲಿ ತನ್ನದನ್ನು ಹುಡುಕಲು ಸಾಧ್ಯವೇನೋ?. ಆದರೆ ತೃಪ್ತ ಆತ್ಮಗಳು ನಮ್ಮ ಗ್ಯಾಲಕ್ಸಿಯ ಪರಿಧಿಯಲ್ಲೇ ತಮ್ಮತನವನ್ನು ಕಂಡುಕೊಂಡಿರುತ್ತವೆ.

ಆದರೆ ಸಕಲ ಜೀವರಾಶಿಗಳಿಗೆ, ಅಸಂಖ್ಯ ಗ್ರಹಕಾಯಗಳಿಗೆ, ನಮ್ಮ ಸೌರಮಂಡಲಕ್ಕೆ, ಬಿಲಿಯಾಂತರ ನಕ್ಷತ್ರಗಳಿಗೆ ಆಶ್ರಯತಾಣವಾಗಿ, ಇವೆಲ್ಲವನ್ನೂ ಸೇರಿಸಿದ ಮನೆಯಾಗಿ ಗೋಚರವಾಗುವ ಹಾಲು ಹಾದಿಯ ಮಧ್ಯಭಾಗ ಕಂಡವರು ಯಾರೂ ಇಲ್ಲ.

ಮಿಲ್ಕಿ ವೇ ಗ್ಯಾಲಕ್ಸಿಯ ಅಳ ಅಗಲವನ್ನು, ಅದರ ಗಡಿಗಳನ್ನು, ಒಟ್ಟು ಪರಿಧಿಯನ್ನು ಅಳೆದಿರುವ ಮಾನವನಿಗೆ, ಇದುವರೆಗೂ ಅದರ ಮಧ್ಯಭಾಗದ ಪರಿಚಯವಿಲ್ಲ.

ಗ್ಯಾಲಕ್ಸಿಯ ಮಧ್ಯಭಾಗದಲ್ಲಿ ಅಸಂಕ್ಯ ನಕ್ಷತ್ರಗಳ ಹಾಗೂ ಕಪ್ಪುರಂಧ್ರಗಳ ಆರ್ಭಟವಿದೆ ಎಂಬುದನ್ನಷ್ಟೇ ಅರಿತಿರುವ ಮಾನವ, ಇದೀಗ ಅದರ ಒಡಲಾಳಕ್ಕೆ ಇಳಿಯಲು ಸಿದ್ಧವಾಗಿ ನಿಂತಿದ್ದಾನೆ.

ಹೌದು, ಅಂತರಿಕ್ಷಕ್ಕೆ ಹಾರಲು ಸಜ್ಜಾಗಿ ನಿಂತಿರುವ ನಾಸಾದ  ಜೇಮ್ಸ್ ವೆಬ್ ಟೆಲಿಸ್ಕೋಪ್ ಹಾಲುಹಾದಿ ಗ್ಯಾಲಕ್ಸಿಯ ಮಧ್ಯಭಾಗವನ್ನು ಅಧ್ಯಯನ ನಡೆಸಲಿದೆ.

ಜೇಮ್ಸ್ ವೆಬ್ ಟೆಲಿಸ್ಕೋಪ್ ಇದುವರೆಗೂ ಕಂಡಿರದ ಗ್ಯಾಲ್ಸಕ್ಸಿಯ ಮಧ್ಯಭಾಗವನ್ನು ಸೆರೆ ಹಿಡಿಯಲಿದ್ದು, ಇದು ಗ್ಯಾಲಕ್ಸಿಯ ರಚನೆಯ ಕುರಿತಾದ ಅಧ್ಯಯನಕ್ಕೆ ಸಹಾಯ ಮಾಡಲಿದೆ.

ಈ ಕುರಿತು ಮಾಹಿತಿ ನೀಡಿರುವ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸಿಟ್ಯೂಟ್ ಪ್ರಿನ್ಸಿಪಾಲ್ ರೋಯಲ್ಯಾಂಡ್ ವೆನ್ ಡೇರ್ ಮಾರೆಲ್, ಜೇಮ್ಸ್ ವೆಬ್ ಟೆಲಿಸ್ಕೋಪ್ ತನ್ನ ಅತ್ಯಾಧುನಿಕ ಇನ್ಫ್ರಾರೆಡ್ ತಂತ್ರಜ್ಞಾನದ ಸಹಾಯದಿಂದಿಗೆ ಮಿಲ್ಕಿ ವೇ ಗ್ಯಾಲ್ಸಕಿಯ ಮಧ್ಯಭಾಗವನ್ನು ಸೆರೆ ಹಿಡಿಯಲಿದೆ ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೇ ಕಪ್ಪುರಂಧ್ರಗಳ ಉಗಮಕ್ಕೆ ಕಾರಣ ಹಗೂ ಗ್ಯಾಲ್ಸಕಿಯಲ್ಲಿ ಅದರಿಂದಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಜೇಮ್ಸ್ ವೆಬ್ ಟೆಲಿಸ್ಕೋಪ್ ಸಹಾಯ ಮಾಡಲಿದೆ ಎನ್ನುತ್ತಾರೆ ಮಾರೆಲ್.

ಸದ್ಯ ಬ್ರಹ್ಮಂಡದ ಅಧ್ಯಯನದಲ್ಲಿ ನಿರತವಾಗಿರುವ ಹಬಲ್ ದೂರದರ್ಶಕ ಯಂತ್ರ ಶೀಘ್ರದಲ್ಲೇ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದ್ದು, ಜೇಮ್ಸ್ ವೆಬ್ ಟೆಲಸ್ಕೋಪ್'ನ್ನು ಮಾರ್ಚ್ 30, 2021ರಲ್ಲಿ ಕಕ್ಷೆಗೆ ಸೇರಿಸಲಾಗುವುದು.

Follow Us:
Download App:
  • android
  • ios