Huawei ಕಂಪನಿಯು ತನ್ನ ಬಹುನಿರೀಕ್ಷಿತ Y9 ಪ್ರೈಮ್‌ ಮೊಬೈಲ್‌ ಫೋನ್‌ನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. 

ಆಗಸ್ಟ್‌ 1ರಂದು ಈ ಫೋನ್‌ ಬಿಡುಗಡೆಯಾಗುತ್ತಿದೆ. ಖರೀದಿಸಲು ಬಯುಸುವ ಗ್ರಾಹಕರು ಅಮೆಜಾನ್‌ನಲ್ಲಿ ನೋಟಿಫೈ ಮಿ ಆಯ್ಕೆ ಒತ್ತಿ ಬುಕ್‌ ಮಾಡಬಹುದು. 

ಇದನ್ನೂ ಓದಿ | ಅಮೆರಿಕಾಗೆ ಸೆಡ್ಡು ಹೊಡೆಯಲು ಮುಂದಾದ Huawei; Androidಗೆ ಪರ್ಯಾಯವಾಗಿ ಹೊಸ OS

Huawei Y9 ಪ್ರೈಮ್‌ನಲ್ಲಿ 16 ಮೆಗಾಪಿಕ್ಸೆಲ್ ಪಾಪ್‌-ಅಪ್‌ ಕ್ಯಾಮೆರಾ ಇದೆ. ಟ್ರಿಪಲ್‌ ರೇರ್‌ ಕ್ಯಾಮೆರಾ ಇದ್ದು, 4000 ಎಂಎಎಚ್‌ನ ಪವರ್‌ಫುಲ್‌ ಬ್ಯಾಟರಿ ಸಾಮರ್ಥ್ಯ ಹೊಂದಿದೆ. 

ಆಕ್ಟಾಕೋರ್‌ ಕಿರಿನ್‌ 710 ಪ್ರೊಸೆಸರ್‌ ಬಳಸಲಾಗಿದ್ದು, 6.59 ಇಂಚುಗಳ ಡಿಸ್‌ಪ್ಲೇ ಹೊಂದಿದೆ.