Asianet Suvarna News Asianet Suvarna News

WhatsApp Voice Message Preview: ಧ್ವನಿ ಸಂದೇಶ ಕಳುಹಿಸುವ ಮುನ್ನವೇ ರೆಕಾರ್ಡಿಂಗ್ ಚೆಕ್‌ ಮಾಡುವುದು ಹೇಗೆ?

ವಾಟ್ಸಪ್‌  Voice Message Preview ವೈಶಿಷ್ಟ್ಯವನ್ನು ಹೊರತಂದಿದ್ದು ಬಳಕೆದಾರರಿಗೆ ತಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಡ್ರಾಫ್ಟ್ ಅನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ.

How to Preview WhatsApp Voice Message on Androaid Ios web and Desktop mnj
Author
Bengaluru, First Published Dec 20, 2021, 10:29 AM IST

Teck Desk: ಮೆಟಾ ಒಡೆತನದ ವಾಟ್ಸಪ್‌ (Meta- WhatsApp) ಜಗತ್ತಿನಾದ್ಯಂತ ಜನರು ಹೆಚ್ಚಾಗಿ ಬಳಸುವ ಮೇಸೆಜಿಂಗ್‌ ಫ್ಲಾಟ್‌ ಫಾರ್ಮ್.‌ ವಾಟ್ಸಪ್‌ ಚಾಟಿಂಗ್‌, ವಿಡಿಯೋ ಕಾಲ್‌ ಸೇರಿದಂತೆ ಡಿಜಿಟಲ್‌ ಪೇಮೆಂಟ್‌ನಂತಹ ಹಲವು ಆಯ್ಕೆಗಳನ್ನು ನೀಡುತ್ತದೆ. ಕಳೆದ ಕೆಲವು ದಿನಗಳಿಂದ  ಬಳಕೆದಾರರ ಗೌಪ್ಯತೆ ಕಾಪಾಡುವ (Privacy) ನಿಟ್ಟಿನಲ್ಲಿ ಹಲವು ಅಪ್ಡೇಟ್ಸ್‌ ನೀಡಿದೆ. ಜತೆಗೆ ತನ್ನ ಬಳಕೆದಾರರಿಗೆ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ವಾರ ವಾಯ್ಸ್‌ ಮೇಸೆಜ್‌ ಪ್ರಿವೀವ್ (Voice Message Preview) ವೈಶಿಷ್ಟ್ಯವನ್ನು ಹೊರತಂದಿದ್ದು ಬಳಕೆದಾರರಿಗೆ ತಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು (Audio Recording) ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಡ್ರಾಫ್ಟ್ (Draft) ಅನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ‌

ವೈಯಕ್ತಿಕ ಚಾಟ್ ಅಥವಾ ಗ್ರೂಪ್ ಚಾಟ್‌ನಲ್ಲಿ‌ ವಾಯ್ಸ್‌ ಮೆಸೇಜ್ ಕಳುಹಿಸುವ ಮೊದಲು ನಿಮ್ಮ ಧ್ವನಿ ಸಂದೇಶಗಳನ್ನು ನೀವು ಪೂರ್ವವೀಕ್ಷಿಸಬಹುದು. ಸಂಪೂರ್ಣ ಅರ್ಥವನ್ನು ನೀಡದ ಅಥವಾ ಕೆಲವು ತಿದ್ದುಪಡಿಯೊಂದಿಗೆ ನವೀಕರಣದ ಅಗತ್ಯವಿರುವ ಧ್ವನಿ ಸಂದೇಶವನ್ನು ಕಳುಹಿಸುವುದನ್ನು ತಪ್ಪಿಸಲು ಪ್ರಿವೀವ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಡಿಯೋ ಸ್ಪಷ್ಟವಾಗಿದೆಯೇ ಎಂದು ನೋಡಲು ಕಳುಹಿಸುವ ಮೊದಲು ನಿಮ್ಮ ಧ್ವನಿ ಸಂದೇಶವನ್ನು ಸಹ ನೀವು ಪ್ಲೇ ಮಾಡಬಹುದು.‌

Android, iOS ಮತ್ತು Web ಅಥವಾ Desktop ನಲ್ಲಿರುವ ಎಲ್ಲಾ ಬಳಕೆದಾರರಿಗಾಗಿ WhatsApp ವಾಯ್ಸ್‌ ಮೇಸೆಜ್‌ ಪ್ರಿವೀವ್ ಪರಿಚಯಿಸಿದೆ. ವಾಟ್ಸಪ್  ವಾಯ್ಸ್‌ ಮೇಸೆಜ್‌ ಈ ಕೆಳಗಿನ ಹಂತಗಳನ್ನು ಬಳಸಿ ಪ್ರಿವೀವ್‌ ಮಾಡಬಹುದು. WhatsApp ವಾಯ್ಸ್‌ ಮೇಸೆಜ್‌ ಪ್ರಿವೀವ್ ವೈಶಿಷ್ಟ್ಯವನ್ನು ಬಳಸಲು ಹಂತಗಳನ್ನು ಪ್ರಾರಂಭಿಸುವ ಮೊದಲು, ನಿಮ್ಮ ಸಾಧನದಲ್ಲಿ ನೀವು ಇತ್ತೀಚಿನ WhatsApp ಆವೃತ್ತಿಯನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

 1) ವಾಟ್ಸಪ್‌ನಲ್ಲಿ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ.

2)Message textbox ಪಕ್ಕದಲ್ಲಿರುವ ಮೈಕ್ರೊಫೋನ್ ಬಟನ್ (Microphone) ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ ಮತ್ತು ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ಲೈಡ್ ಮಾಡಿ. ವಾಟ್ಸಪ್‌ನ ವೆಬ್ (Web) ಮತ್ತು ಡೆಸ್ಕ್‌ಟಾಪ್ (Desktop) ಆವೃತ್ತಿಗಳಲ್ಲಿ, ಮೈಕ್ರೊಫೋನ್ ಅನ್ನು ಕ್ಲಿಕ್ ಮಾಡಿದ ನಂತರ ಆಟೋಮೇಟಿಕ್ ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ನೀಡುವುದರಿಂದ ನೀವು ಸ್ಲೈಡ್ ಮಾಡುವ ಅಗತ್ಯವಿಲ್ಲ.‌

3)ಈಗ, ನಿಮ್ಮ ಧ್ವನಿ ಸಂದೇಶವನ್ನು ರೆಕಾರ್ಡ್‌ ಮಾಡಲು ಪ್ರಾರಂಭಿಸಿ.

4)ರೆಕಾರ್ಡಿಂಗ್ ಪೂರ್ಣಗೊಳಿಸಲು ಸ್ಟಾಪ್ ಬಟನ್ ಟ್ಯಾಪ್ ಮಾಡಿ

5)ನಿಮ್ಮ ರೆಕಾರ್ಡಿಂಗ್ ಅನ್ನು ಕೇಳಲು ಪ್ಲೇ ಬಟನ್ ಒತ್ತಿರಿ. ಸೀಕ್ ಬಾರ್ ( seek bar) ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ರೆಕಾರ್ಡಿಂಗ್‌ನ ನಿರ್ದಿಷ್ಟ ಭಾಗಕ್ಕೆ ನೀವು ಹೋಗಿ ವಾಯ್ಸ್‌ ಕೇಳಬಹುದು.

ನಿಮ್ಮ ವಾಯ್ಸ್ ಸಂದೇಶವು ಸೂಕ್ತವಾಗಿದ್ದರೆ ಮತ್ತು ಹಂಚಿಕೆಗೆ ಸಿದ್ಧವಾಗಿದ್ದರೆ ನೀವು ಕಳುಹಿಸು‌ (Send) ಬಟನ್ ಅನ್ನು ಒತ್ತಬಹುದು. ಇಲ್ಲದಿದ್ದರೆ, ನಿಮ್ಮ ಧ್ವನಿ ಸಂದೇಶವನ್ನು ಅಳಿಸಲು ಟ್ರ್ಯಾಶ್‌ ಕ್ಯಾನ್‌ (Trash Can) ಅನ್ನು ಟ್ಯಾಪ್ ಮಾಡಿ ಮತ್ತು ಮತ್ತೊಮ್ಮೆ ರೆಕಾರ್ಡ್ ಮಾಡಲು ಮೇಲಿನ ಹಂತಗಳನ್ನು ಪುನರಾವರ್ತಿಸಿ.

ಇದನ್ನೂ ಓದಿ:

1) Digital Payment: ಕರ್ನಾಟಕದ ಗ್ರಾಮಗಳಲ್ಲಿ ಡಿಜಿಟಲ್‌ ಪಾವತಿ ಹೆಚ್ಚಳಕ್ಕೆ ವಾಟ್ಸಾಪ್‌ ಕ್ರಮ!

2) WhatsApp New features: ಈಗ ನೀವು ವಾಟ್ಸಾಪ್‌ ಸಂದೇಶಗಳಿಗೆ ಸಮಯ ನಿಗದಿಪಡಿಸಬಹುದು ಹೇಗೆ ಗೊತ್ತಾ..?

Follow Us:
Download App:
  • android
  • ios